ಕನ್ನಡದ ಸಿಕ್ಸ್ ಪ್ಯಾಕ್ ಸುಂದರಿ ಜೆಂಟಲ್ ಮ್ಯಾನ್, ಗುರು ಶಿಷ್ಯರು ಸಿನಿಮಾ ಮೂಲಕ ಖ್ಯಾತಿ ಪಡೆದ ನಟಿ ನಿಶ್ವಿಕಾ ನಾಯ್ಡು ಇದೀಗ ಮಹಾನಟಿ ಶೂಟಿಂಗ್ ಗೆ ಬ್ರೇಕ್ ಕೊಟ್ಟು ಅಂಡಮಾನ್ ಗೆ ತೆರಳಿ ಸ್ಕೂಬಾ ಡೈವಿಂಗ್ ಮಾಡಿಕೊಂಡು ಬಂದಿದ್ದು, ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಅಮ್ಮ ಐ ಲವ್ ಯೂ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸುಂದರಿ ನಿಶ್ವಿಕಾ ನಾಯ್ಡು (Nishvika Naidu) ತಮ್ಮ ಶೂಟಿಂಗ್ ಗೆ ಕೊಂಚ ಬ್ರೇಕ್ ಕೊಟ್ಟು ಇದೀಗ ಸ್ನೇಹಿತೆಯರ ಜೊತೆಗೆ ಹೊಸ ಸಾಹಸ ಮಾಡಿಕೊಂಡು ಬಂದಿದ್ದಾರೆ. ಜೊತೆಗೆ ತಮ್ಮ ಸಾಹಸದ ಅನುಭವಗಳನ್ನು ಮತ್ತು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
28
ನಟಿಸಿದ ಕನ್ನಡ ಸಿನಿಮಾಗಳು
ಕನ್ನಡದ ಜನಪ್ರಿಯ ನಟಿಯರಲ್ಲಿ ಒಬ್ಬರು ನಿಶ್ವಿಕಾ ನಾಯ್ಡು. ಅಮ್ಮ ಐ ಲವ್ ಯೂ, ಜೆಂಟಲ್ ಮ್ಯಾನ್ (Gentleman), ಗುರು ಶಿಷ್ಯರು, ಪಡ್ಡೆಹುಲಿ ಮೊದಲಾದ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುವ ಮೂಲಕ ಜನ ಮನ ಗೆದ್ದಿದ್ದು, ಸದ್ಯ ಮಹಾನಟಿಯಲ್ಲಿ ಜಡ್ಜ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಈ ಬೆಡಗಿ.
38
ಹೊಸ ಸಾಹಸಕ್ಕಿಳಿದ ಬ್ಯೂಟಿ
ನಿಶ್ವಿಕಾ ನಾಯ್ಡು ಅವರನ್ನು ಕನ್ನಡದ ಸಿಕ್ಸ್ ಪ್ಯಾಕ್ ಬ್ಯೂಟಿ ಅಂತಾನೆ ಹೇಳುತ್ತಾರೆ. ಸದಾ ಜಿಮ್ ಹಾಗೂ ಯೋಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಈ ಬ್ಯೂಟಿ ಇದೀಗ ಹೊಸ ಸಾಹಸಕ್ಕಿಳಿದಿದ್ದಾರೆ. ಅದು ಬೇರೆನೂ ಅಲ್ಲ ಸ್ಕೂಬಾ ಡೈವಿಂಗ್. ಕಡಲಾಳಕ್ಕಿಳಿದು ಮೀನುಗಳ ಲೋಕದ ಜೊತೆ ಎಂಜಾಯ್ ಮಾಡ್ತಿದ್ದಾರೆ ನಿಶ್ವಿಕಾ.
ನನ್ನ ಸ್ನೇಹಿತೆಯರು ಮುದ್ದಾದ ಮೀನುಗಳನ್ನು ತೋರಿಸಲು ನನ್ನನ್ನು ಪ್ರವಾಸಕ್ಕೆ ಕರೆದೊಯ್ದರು. ಕೆಲವು ಅತ್ಯುತ್ತಮ ಕ್ಷಣಗಳನ್ನು ಅವು ನನಗೆ ತಂದುಕೊಟ್ಟಿತು. ಮುದ್ದಾದ ಆಕ್ಟೋಪಸ್ ನೋಡಿದೆ, ಒಟ್ಟಿಗೆ ನೀರಿಗೆ ಧುಮುಕಿದೆ, ನೀರಿನ ಅಡಿಯಲ್ಲಿ ನೃತ್ಯ ಮಾಡಿದೆ, ಬೀಳುವ ನಕ್ಷತ್ರಗಳು ಮತ್ತು ಮಿಂಚುಹುಳುವನ್ನು ನೋಡಿದೆ
58
ಏನೆಲ್ಲಾ ಮಾಡಿದ್ರು ನೋಡಿ
ಮ್ಯಾಗಿಯನ್ನು ತಿಂದೆ, ನೀರಿನಲ್ಲಿ ಮಳೆಯನ್ನು ನೋಡಿದೆ, ಸ್ವೀಟ್ ಆಗಿರುವ ಸ್ನೇಹಿತರನ್ನು ಮಾಡಿದೆ, ಕೆಲವು ಅತ್ಯುತ್ತಮ ಸೂರ್ಯಾಸ್ತಗಳನ್ನು ನೋಡಿದೆ. ಮುದ್ದಾದ ಫೋಟೋಗಳನ್ನು ತೆಗೆದುಕೊಂಡೆ ನಮ್ಮ ಬೈಕುಗಳು ಮತ್ತು ನಮ್ಮ ನೀಲಿ ಬಾಟಲಿಯನ್ನು ರಮಣೀಯ ರಸ್ತೆಗಳಲ್ಲಿ ತೆಗೆದುಕೊಂಡು ಹೋದೆ. ನನ್ನ ಜೀವನದ ಇದುವರೆಗಿನ ಅತ್ಯುತ್ತಮ ಸಮಯವನ್ನು ಕಳೆದೆ ಎಂದು ನಿಶ್ವಿಕಾ ಬರೆದುಕೊಂಡಿದ್ದಾರೆ.
68
ಅಡ್ವಾನ್ಸ್ ಡೈವರ್ ಸರ್ಟಿಫಿಕೇಟ್
ನಿಶ್ವಿಕಾ ಮತ್ತೊಂದಿಷ್ಟು ಮಾಹಿತಿಯನ್ನು ತಿಳಿಸಿದ್ದು, ತಾವು ಒಂದು ಅಥವಾ ಎರಡು ಡೈವ್ ಮಾಡಲು ಹೋಗಿದ್ದಾಗಿಯೂ, ಆದರೆ ಅಲ್ಲಿ ಹೋದ ಮೇಲೆ, ಅಡ್ವಾನ್ಸ್ ಡೈವರ್ ಸರ್ಟಿಫಿಕೇಟ್‌ನೊಂದಿಗೆ ಹಿಂತಿರುಗಿರುವುದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲ ತನ್ನ ಇಬ್ಬರು ಸ್ನೇಹಿತರೊಂದಿಗೆ ಇದನ್ನು ಮತ್ತಷ್ಟು ಹೆಚ್ಚಾಗಿ ಮಾಡಲು ಕಾಯುತ್ತಿರುವುದಾಗಿಯೂ. ಈ ಸುಂದರ ಪಯಣದ ಭಾಗವಾಗಿಸಿರೋದಕ್ಕೆ ಧನ್ಯವಾದಗಳನ್ನು ಸಹ ತಿಳಿಸಿದ್ದಾರೆ.
78
ನಿಶ್ವಿಕಾ ಹೋಗಿದ್ದೆಲ್ಲಿ?
ಕಳೆದ ಒಂದೆರಡು ದಿನಗಳಿಂದ ನಿಶ್ವಿಕಾ ಸೋಶಿಯಲ್ ಮೀಡೀಯಾದಲ್ಲಿ ತಮ್ಮ ಸ್ಕೂಬಾ ಡೈವಿಂಗ್ ಫೋಟೊಗಳನ್ನು ಶೇರ್ ಮಾಡುತ್ತಲೇ ಇದ್ದಾರೆ. ಅಂದ ಹಾಗಎ ನಟಿ ತಮ್ಮ ಸ್ನೇಹಿತರ ಜೊತೆ ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ತೆರಳಿದ್ದು, ಅಲ್ಲಿನ ಹಾವ್ಲಾಕ್ ಐಲ್ಯಾಂಡಲ್ಲಿ ಸ್ಕೂಬಾ ಡೈವಿಂಗ್ ಮಾಡಿದ್ದಾರೆ.
ಇನ್ನು ನಿಶ್ವಿಕಾ ನಾಯ್ಡು ಕರಿಯರ್ ಬಗ್ಗೆ ಹೇಳೋದಾದರೆ ಕನ್ನಡದಲ್ಲಿ ಕಳೆದ ಒಂದು ವರ್ಷದಿಂದ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಆದರೆ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ (Mega Star Chiranjivi) ಜತೆಗೆ ‘ವಿಶ್ವಂಭರ’ ಸಿನಿಮಾದಲ್ಲಿ ಐಟಂ ಸ್ಪೆಷಲ್ ಹಾಡೀಗೆ ಹೆಜ್ಜೆ ಹಾಕಲಿದ್ದಾರೆ ಎನ್ನುವ ಸುದ್ದಿ ಇದೆ. ಕನ್ನಡದಲ್ಲಿ ಸೂಪರ್ ಹಿಟ್ ಆಗಿರುವ ‘ಹಿತಲಕ ಕರಿಬ್ಯಾಡ ಮಾವ’ ಹಾಡಿನಲ್ಲಿ ನಿಶ್ವಿಕಾ ನಾಯ್ಡು ಅವರ ಡ್ಯಾನ್ಸ್ ನೋಡಿಯೇ ‘ವಿಶ್ವಂಭರ’ ತಂಡ ನಿಶ್ವಿಕಾರನ್ನು ಆಯ್ಕೆ ಮಾಡಿದೆ ಎನ್ನಲಾಗಿದೆ.