ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ನಟಿ ಅದ್ವಿತಿ ಶೆಟ್ಟಿ ಇದೀಗ ತುಳು ಚಿತ್ರರಂಗಕ್ಕೆ ಎಂಟ್ರಿ ಕೊಡಲು ಕಾಯುತ್ತಿದ್ದಾರೆ. ಸಿನಿಮಾ ಬಿಡುಗಡೆಯಾಗುವ ಹಿನ್ನೆಲೆಯಲ್ಲಿ ನಟಿ ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಬಂದಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಕೆಲವೊಂದು ಸಿನಿಮಾಗಳಲ್ಲಿ ಗುರುತಿಸಿಕೊಂಡಿರುವ ಮಂಗಳೂರು ಬೆಡಗಿ ಅದ್ವಿತಿ ಶೆಟ್ಟಿ (Adwithi Shetty) ಇದೀಗ ತುಳು ಚಿತ್ರರಂಗಕ್ಕೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ.
25
ಜೈ ಚಿತ್ರದಲ್ಲಿ ಅದ್ವಿತಿ
ಅದ್ವಿತಿ ಶೆಟ್ಟಿ ಜೈ ಸಿನಿಮಾ ಮೂಲಕ ತುಳು ಚಿತ್ರರಂಗಕ್ಕೆ ಕಾಲಿಡಲಿದ್ದಾರೆ. ಈ ಸಿನಿಮಾದಲ್ಲಿ ಬಿಗ್ ಬಾಸ್ ಕನ್ನಡ ವಿನ್ನರ್ ಆಗಿದ್ದ ರೂಪೇಶ್ ಶೆಟ್ಟಿ ನಾಯಕನಾಗಿ ನಟಿಸಲಿದ್ದಾರೆ. ಜೊತೆಗೆ ಸುನಿಲ್ ಶೆಟ್ಟಿ ಕೂಡ ನಟಿಸುತ್ತಿದ್ದಾರೆ.
35
ಕದ್ರಿ ಮಂಜುನಾಥನ ಸನ್ನಿಧಿಯಲ್ಲಿ ನಟಿ
ಸಿನಿಮಾ ಮುಂದಿನ ತಿಂಗಳು ಬಿಡುಗಡೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ಅದ್ವಿತಿ ಶೆಟ್ಟಿ ಮಂಗಳೂರಿನ ಕದ್ರಿ ಮಂಜುನಾಥ ದೇವಾಲಯಕ್ಕೆ ತೆರಳಿದ್ದು ಮಂಜುನಾಥನ ದರ್ಶನ ಪಡೆದು ಬಂದಿದ್ದಾರೆ.
ನನ್ನ ಮೊದಲ ತುಳು ಚಿತ್ರ ಜೈ ಪ್ರೀಮಿಯರ್ ಇಂದು ಮಸ್ಕತ್‌ನಲ್ಲಿ ನಡೆಯುತ್ತಿದೆ. ನಾನು ತುಳು ಚಿತ್ರರಂಗಕ್ಕೆ ಕಾಲಿಡುತ್ತಿದ್ದಂತೆ ಕದ್ರಿ ಶ್ರೀ ಮಂಜುನಾಥನ ಆಶೀರ್ವಾದ ಪಡೆಯಲೇಬೇಕಾಯಿತು. ನನ್ನ ಬೇರುಗಳನ್ನು ಅನುಸರಿಸಲು ನಾನು ಯಾವಾಗಲೂ ನಂಬುತ್ತೇನೆ ಮತ್ತು ಪ್ರತಿಯೊಂದು ಅವಕಾಶಕ್ಕೂ ಕೃತಜ್ಞನಾಗಿದ್ದೇನೆ. ನವೆಂಬರ್ 14 ರಿಂದ ಚಿತ್ರಮಂದಿರಗಳಲ್ಲಿ ಜೈ ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲ ಬೇಕು.
55
ಅದ್ವಿತಿ ಶೆಟ್ಟಿ ನಟಿಸಿದ ಸಿನಿಮಾಗಳು
ಅದ್ವಿತಿ ಶೆಟ್ಟಿ ಮತ್ತು ಅಶ್ವದಿ ಶೆಟ್ಟಿ ಇಬ್ಬರು ಜೊತೆಯಾಗಿ ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ ಸಿನಿಮಾದಲ್ಲಿ ನಟಿಸಿದ್ದರು. ಇದಲ್ಲದೇ ಅದ್ವಿತಿ ಧೀರ ಸಾಮ್ರಾಟ್, ಶುಗರ್ ಫ್ಯಾಕ್ಟರಿ, ಐರವನ್, 1888, ಫ್ಯಾನ್, ಕಾರ್ಮೋಡ ಸರಿದು, ಸುಳಿ ಸಿನಿಮಾದಲ್ಲಿ ನಟಿಸಿದ್ದಾರೆ.