ಕಾಂತಾರ ಚಾಪ್ಟರ್ 1 ಮೂಲಕ ದೇಶಾದ್ಯಂತ ಖ್ಯಾತಿ ಪಡೆದು ನ್ಯಾಷನಲ್ ಕ್ರಶ್ ಆಗಿರುವ ನಟಿ ರುಕ್ಮಿಣಿ ವಸಂತ್ ಸೋಸಿಯಲ್ ಮೀಡಿಯಾದಲ್ಲಿ ಸುಂದರವಾದ ಫೋಟೊಗಳನ್ನು ಶೇರ್ ಮಾಡಿದ್ರೆ, ಜನ ಲೈಕ್ ಕೊಡೋದು ಬಿಟ್ಟು ಅಂದದ ಹಿಂದೆ ಬಿದ್ರೆ ಮೋಸ ಹೋಗ್ತೀರಿ ಅಂತಿದ್ದಾರಲ್ಲ.
ಕಾಂತಾರ ಚಾಪ್ಟರ್ 1 ಬಿಡುಗಡೆಯಾದ ಮೇಲೆ ಜನರು ರುಕ್ಮಿಣಿ ವಸಂತ್ ಅಂದ ಹೊಗಳೋದನ್ನು ನಿಲ್ಲಿಸ್ತಾನೆ ಇಲ್ಲ. ಸೋಶಿಯಲ್ ಮೀಡಿಯಾ ಪೇಜ್ ಗಳನ್ನು ತೆರೆದರೆ ಸಾಕು, ಎಲ್ಲಾ ಕಡೆ ರುಕ್ಮಿಣಿ ವಸಂತ್ ಅವರ ಫೋಟೊಗಳೇ ಕಾಣ ಸಿಗುತ್ತಿವೆ. ಜನರಲ್ಲಿ ಅಷ್ಟೊಂದು ಕ್ರೇಜ್ ಹುಟ್ಟಿಸಿದ್ದಾರೆ ರುಕ್ಮಿಣಿ.
27
ಕನಕವತಿಯನ್ನು ಮೆಚ್ಚಿಕೊಂಡ ಜನ
ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ರುಕ್ಮಿಣಿ ವಸಂತ್ ರಾಣಿ ಕನಕವತಿಯ ಪಾತ್ರದಲ್ಲಿ ನಟಿಸಿದ್ದು, ಆ ಮೂಲಕ ತಮ್ಮ ನಟನೆ, ಸೌಂದರ್ಯದಿಂದ ಅಭಿಮಾನಿಗಳ ಮನಸ್ಸು ಗೆದ್ದಿದ್ದು, ಸದ್ಯ ನ್ಯಾಷನಲ್ ಕ್ರಶ್ ಸ್ಥಾನವನ್ನು ಪಡೆದುಕೊಂಡಿದ್ದಾರೆ ಈ ಕನ್ನಡತಿ.
37
ಹೊಸ ಫೋಟೊ ಶೂಟ್
ಇದೀಗ ರುಕ್ಮಿಣಿ ಸೋಶಿಯಲ್ ಮೀಡಿಯಾದಲ್ಲಿ ಹೊಸದಾಗಿ ಫೋಟೊಶೂಟ್ ಮಾಡಿಸಿ ಹಂಚಿಕೊಂಡಿದ್ದು, ಸುಂದರವಾದ ನೀಲಿ ಬಣ್ಣದ ಮೇಲೆ ಫ್ಲೋರಲ್ ಪ್ರಿಂಟ್ ಇರುವ ಸಿಲ್ಕ್ ಸೀರೆಯಲ್ಲಿ ರುಕ್ಕು ದೇವತೆಯಂತೆ ಕಾಣುತ್ತಿದ್ದಾರೆ. ಆದರೆ ಜನರು ನಟಿಯ ಫೋಟೊ ನೋಡಿ ಹೊಗಳುವ ಬದಲಾಗಿ ಮೋಸಗಾತಿ ಅಂದಿದ್ದಾರಲ್ಲ.
ರುಕ್ಮಿಣಿ ವಸಂತ್ ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಶೇರ್ ಮಾಡುತ್ತಿದ್ದಂತೆ, 1.5 ಮಿಲಿಯನ್ ಗೂ ಹೆಚ್ಚು ಜನ ಲೈಕ್ ಮಾಡಿದ್ದು, 5.6 ಸಾವಿರ ಜನರು ಕಾಮೆಂಟ್ ಮಾಡಿದ್ದಾರೆ. ಆದರೆ ಹೆಚ್ಚಿನ ಜನರು beauty is always dangerous ಎಂದಿದ್ದಾರೆ. ಯಾಕೆ ಅಂದ್ರೆ ಅದು ಕಾಂತಾರದ ಕನಕವತಿ ಪಾತ್ರದ ಕಾರಣದಿಂದಲೇ ಅಷ್ಟೇ.
57
ಸಾಲು ಸಾಲು ಸಿನಿಮಾಗಳಲ್ಲಿ ರುಕ್ಮಿಣಿ
ಸಪ್ತಸಾಗರದಾಚೆ ಸಿನಿಮಾ ಬಳಿಕ ರುಕ್ಮಿಣಿ ವಸಂತ್ ಆಕಾಶದಲ್ಲಿ ಹಾರುತ್ತಿದ್ದಾರೆ ಎನ್ನಬಹುದು. ಯಾಕಂದ್ರೆ ಕನ್ನಡ ಮಾತ್ರವಲ್ಲ, ತಮಿಳು, ತೆಲುಗು ಸಿನಿಮಾ ಇಂಡಷ್ಟ್ರಿಯಿಂದಲೂ ಆಫರ್ ಗಳು ನಟಿಯನ್ನು ಹುಡುಕಿಕೊಂಡು ಬರುತ್ತಿವೆ. ಸದ್ಯದಲ್ಲೆ ಮತ್ತಷ್ಟು ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ರುಕ್ಮಿಣಿ ನಟಿಸಲಿದ್ದಾರೆ.
67
ಯಾವ ಸಿನಿಮಾಗಳಲ್ಲಿ ರುಕ್ಮಿಣಿ ವಸಂತ್ ನಟಿಸ್ತಿದ್ದಾರೆ
ಈಗಾಗಲೇ ರುಕ್ಮಿಣಿ ಒಂದು ಹಿಂದಿ, ಒಂದು ತೆಲುಗು ಮತ್ತು ಎರಡು ತಮಿಳು ಸಿನಿಮಾದಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೇ ರಾಕಿಂಗ್ ಸ್ಟಾರ್ ಯಶ್ ನಟಿಸುತ್ತಿರುವ ಟಾಕ್ಸಿಕ್ ಸಿನಿಮಾದಲ್ಲಿ ಹಾಗೂ ಎನ್ ಟಿಆರ್ ನಟಿಸುತ್ತಿರುವ ಡ್ರಾಗನ್ ಸಿನಿಮಾದಲ್ಲೂ ರುಕ್ಮಿಣಿ ನಟಿಸುತ್ತಿದ್ದಾರೆ ಎನ್ನಲಾಗಿದೆ.
77
ರುಕ್ಮಿಣಿ ನಟಿಸಿದ ಕನ್ನಡ ಸಿನಿಮಾಗಳು
ಲಂಡನ್ ನಲ್ಲಿ ನಟನೆ ಕಲಿತು ಬಂದಿರುವ ರುಕ್ಮಿಣಿ, ಎಂಜಿ ಶ್ರೀನಿವಾಸ ಅವರ ಬೀರ್ ಬಲ್ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟರು. ಬಳಿಕ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ, ಸೈಡ್ ಬಿ, ಬಾನ ದಾರಿಯಲ್ಲಿ, ಭೈರತಿ ರಣಗಲ್, ಬಘೀರ, ಕಾಂತಾರ ಚಾಪ್ಟರ್ 1 ರುಕ್ಮಿಣಿ ನಟಿಸಿದ ಕನ್ನಡ ಸಿನಿಮಾಗಳು.