Love Mocktail 2 ನಟಿ ಮೂಗುತ್ತಿ ಸುಂದರಿ ಸುಶ್ಮಿತಾ ಗೌಡ ಅದ್ದೂರಿ ಸೀಮಂತ
ಲವ್ ಮಾಕ್ಟೇಲ್ 2 ಸಿನಿಮಾದಲ್ಲಿ ಜಂಕಿ ಪಾತ್ರದ ಮೂಲಕ ಜನಪ್ರಿಯತೆ ಪಡೆದ ನಟಿ ಸುಶ್ಮಿತಾ ಗೌಡ ತಮ್ಮ ಚೊಚ್ಚಲ ತಾಯ್ತನದ ಸಂಭ್ರಮದಲ್ಲಿದ್ದು, ಇತ್ತೀಚೆಗೆ ಅದ್ಧೂರಿಯಾಗಿ ಸೀಮಂತ ಮಾಡಿಕೊಂಡಿದ್ದಾರೆ.

ಲವ್ ಮಾಕ್ಟೇಲ್ 2 (love mocktail 2) ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸೋಷಿಯಲ್ ಮೀಡಿಯಾ ಸ್ಟಾರ್ ಸುಶ್ಮಿತಾ ಗೌಡ. ಇದೀಗ ತಾಯಿಯಾಗುವ ಸಂಭ್ರಮದಲ್ಲಿದ್ದಾರೆ. ತುಂಬು ಗರ್ಭಿಣಿಯಾಗಿರುವ ಸುಶ್ಮಿತಾ ಇತ್ತೀಚೆಗಷ್ಟೇ ಅದ್ದೂರಿಯಾಗಿ ಸೀಮಂತ ಮಾಡಿಕೊಂಡಿದ್ದಾರೆ.
ಲವ್ ಮಾಕ್ಟೇಲ್ 2 ಚಿತ್ರದಲ್ಲಿ ಜಂಕಿ ಪಾತ್ರದಲ್ಲಿ ಸುಶ್ಮಿತಾ ಕಾಣಿಸಿಕೊಂಡಿದ್ದರು. ಇದು ಮ್ಯಾಚ್ ಮೇಕಪ್ ಪಾತ್ರವಾಗಿತ್ತು. ಸಣ್ಣ ಪಾತ್ರವಾಗಿದ್ದರೂ ಸಹ ಜನರು ಈ ಪಾತ್ರದ್ ಪಂಚಿಂಗ್ ಡೈಲಾಗ್ ಗಳನ್ನು ಕಾಮಿಡಿಯನ್ನು ಇಷ್ಟಪಟ್ಟಿದ್ದರು.
ಲವ್ ಮಾಕ್ಟೇಲ್ ಸಿನಿಮಾ ಬಳಿಕ ಹಲವಾರು ಸಿನಿಮಾ ಆಫ ರ್ ಗಳು ಬಂದರೂ ಸುಶ್ಮಿತಾ ಸ್ವೀಕರಿಸಿರಲಿಲ್ಲ. ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಕಂಟೆಂಟ್ ಕ್ರಿಯೇಟ್ ಮಾಡೊದರಲ್ಲಿ ಬ್ಯುಸಿಯಾಗಿದ್ದರು. ಈವಾಗಲೂ ಸಹ ಇನ್’ಸ್ಟಾಗ್ರಾಂನಲ್ಲಿ ವಿವಿಧ ರೀತಿಯ ಕಾಮಿಡಿ ರೀಲ್ಸ್ ಗಳನ್ನು ಮಾಡಿಕೊಳ್ಳುತ್ತಿರುತ್ತಾರೆ.
2022ರಲ್ಲಿ ಸುಶ್ಮಿತಾ ಅವರು ತಮ್ಮ ಗೆಳೆಯ ಅಶ್ವಿನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇಬ್ಬರು ವಿದೇಶದಲ್ಲಿ ಕೆಲವು ವರ್ಷ ನೆಲೆಸಿದ್ದರು. ಸದ್ಯ ಬೆಂಗಳೂರು ಮತ್ತು ವಿದೇಶ ಎಂದು ಅಲ್ಲಿ ಇಲ್ಲಿ ಎರಡು ಕಡೆಗಳಲ್ಲೂ ಓಡಾಡುತ್ತಿರುತ್ತಾರೆ. ಸದ್ಯ ಸೀಮಂತ ಸಂಭ್ರಮದಲ್ಲಿದ್ದಾರೆ ನಟಿ.
ಸುಶ್ಮಿತಾ ಸೀಮಂತ ಶಾಸ್ತ್ರದ ವಿಡಿಯೋ ಮತ್ತು ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಟಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಕೆಂಪು ಸೀರೆಯಲ್ಲಿ ಸುಶ್ಮಿತಾ ತುಂಬಾನೆ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.
ಸುಶ್ಮಿತಾ ಕೆಲವು ತಿಂಗಳ ಹಿಂದೆ ಯಕ್ಷಗಾನದ ಥೀಮ್ ಮೂಲಕ ತಮ್ಮ ಪತಿ ಜೊತೆ ಪ್ರೆಗ್ನೆನ್ಸಿ ನ್ಯೂಸ್ ರಿವೀಲ್ ಮಾಡಿದ್ದರು. ಇವರಿಬ್ಬರ ಫೋಟೊ ಶೂಟ್ ವೈರಲ್ ಆಗಿತ್ತು. ಇದೀಗ ಬೆಂಗಳೂರಿನಲ್ಲೇ ಅದ್ಧೂರಿಯಾಗಿ ಸಂಪ್ರದಾಯಬದ್ಧವಾಗಿ ಸೀಮಂತ ಮಾಡಿದ್ದಾರೆ.
ಸುಷ್ಮಿತಾ ಗೌಡ ಮಂಡ್ಯದ ಹುಡುಗಿಯಾಗಿದ್ದು. ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಂದ ಹೊರ ಬಿದ್ದ ಬಳಿಕ ತಮ್ಮದೇ ಆದ ಹೇರ್ ಆಯಿಲ್ ಬ್ರ್ಯಾಂಡ್ ತೆರೆದರು. ಆನಂತರ ಫೇಸ್ ಕ್ರೀಮ್ ಮತ್ತು ಮೂಗುತ್ತಿಯ ಬ್ಯುಸಿನೆಸ್ ಕೂಡ ಆರಂಭ ಮಾಡಿ ಯಶಸ್ವಿಯಾಗಿದ್ದರು.