'ಪೇಮೆಂಟ್‌ ಬಂದಿಲ್ಲ, ಪುಷ್ಪ ಅರುಣ್‌ಕುಮಾರ್‌ಗೆ ಹೇಳಿ ಪ್ಲೇಸ್':‌ ಕೊತ್ತಲವಾಡಿ ಸಿನಿಮಾ ನಟ ಮಹೇಶ್‌ ಗುರು

Published : Sep 16, 2025, 01:01 PM IST

ಕೊತ್ತಲವಾಡಿ ಸಿನಿಮಾಕ್ಕೆ ಪುಷ್ಪ ಅರುಣ್‌ ಕುಮಾರ್‌ ಅವರು ಹಣ ಹೂಡಿದ್ದರು. ಅಷ್ಟೇ ಅಲ್ಲದೆ ‘ಘಾಟಿ’ ಸಿನಿಮಾದ ವಿತರಣೆ ಕೂಡ ಮಾಡಿದ್ದರು. ಈಗ ಸಿನಿಮಾದ ಸಂಭಾವನೆ ಕೊಟ್ಟಿಲ್ಲ ಅಂತ ನಟ ಮಹೇಶ್‌ ಗುರು ಅವರು ಆರೋಪ ಮಾಡಿದ್ದಾರೆ. 

PREV
15
ವಿಡಿಯೋ ಡಿಲಿಟ್

ವಿಡಿಯೋ ಮೂಲಕ ಸಂಭಾವನೆ ಬಂದಿಲ್ಲ ಅಂತ ನಟ ಮಹೇಶ್ ಗುರು ಆರೋಪ ಮಾಡಿದ್ದಾರೆ.

ಫೇಸ್‌ಬುಕ್‌ನಲ್ಲಿ ಅವರು ಹಾಕಿದ್ದ ವಿಡಿಯೋ ವೈರಲ್ ಆಗಿತ್ತು, ಈಗ ನೋಡಿದ್ರೆ ವಿಡಿಯೋ ಡಿಲೀಟ್ ಮಾಡಿದ್ದಾರೆ. ನಿರ್ಮಾಪಕಿ ಪುಷ್ಪ ಅವರ ಗಮನಕ್ಕೆ ತರೋದಿಕ್ಕೆ ವಿಡಿಯೋ ಮಾಡಿದ್ದೆ ಎಂದು ಮಹೇಶ್‌ ಹೇಳಿದ್ದಾರೆ.

25
ವಿಡಿಯೋ ಮೂಲಕ ಆರೋಪ

ನಟ ಮಹೇಶ್ ಗುರು ಅವರು ಖಳನಟನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ನಿರ್ದೇಶಕರ ಕಡೆಯಿಂದ ನಮಗೆ ಚಾನ್ಸ್ ಸಿಕ್ತು, ಆಗ ಒಂದು ಪ್ಯಾಕೇಜ್ ಮಾತಾಡಿದ್ರು, ಅಡ್ವಾನ್ಸ್ ದುಡ್ಡುಕೊಡ್ತೀವಿ ಅಂದ್ರು ಓಕೆ ಅಂತ ಒಪ್ಪಿಕೊಂಡೆ ಎಂದು ಮಹೇಶ್‌ ಹೇಳಿದ್ದಾರೆ.

35
ಪೇಮೆಂಟ್‌ ಆಗಿಲ್ಲ

“ಅದಾದ ನಂತ್ರ ಮುಹೂರ್ತ ಅಯ್ತು, ದುಡ್ಡು ಕೊಡ್ಲಿಲ್ಲ ಮೂರು ತಿಂಗಳು ಕೆಲಸ ಮಾಡಿದ್ವಿ, ಶೂಟಿಂಗ್ ಮುಗಿದ ಮೇಲೆಯೂ ಪೇಮೆಂಟ್ ಕೊಡ್ಲಿಲ್ಲ. ಡಬ್ಬಿಂಗ್ ಮಾಡಿ ಬಂದು ಮುಗಿದ್ಮೇಲೆ ಪೇಮೆಂಟ್ ಕೊಡ್ತೀನಿ ಅಂದ್ರು, ಆಮೇಲೆ ಪೇಮೆಂಟ್ ಕೊಡ್ಲಿಲ್ಲ” ಎಂದು ಮಹೇಶ್‌ ಹೇಳಿದ್ದಾರೆ.

45
ಫೋನ್‌ ನಂಬರ್‌ ಸಿಗಲಿಲ್ಲ

ಸಿನಿಮಾ ಪ್ರಮೋಷನ್ ಜೋರಾಗಿ ಮಾಡಿದ್ರು, ನಮ್ಮನ್ನು ಎಲ್ಲಿಗೂ ಕರೀಲಿಲ್ಲ, ದುಡ್ಡು ಕೊಡ್ಲಿಲ್ಲ. ಈಗ ಸಿನಿಮಾ ಒಟಿಟಿಗೆ ಬಂದಿದೆ ಆದ್ರು ದುಡ್ಡು ಕೊಟ್ಟಿಲ್ಲ, ಇದು ನಿರ್ಮಾಪಕರಿಗೆ ಗೊತ್ತೋ ಗೊತ್ತಿಲ್ಲವೋ, ಗೊತ್ತಿಲ್ಲ. ಪುಷ್ಪ ಅರುಣ್‌ ಕುಮಾರ್ ಅವರಿಗೆ ಹೇಳೋಣ ಅಂದ್ರೆ ಯಾರು ಕೂಡ ನಂಬರ್ ಕೂಡ ಕೊಡ್ತಿಲ್ಲ. ನಮಗೆ ಆಗಿರೋ ಮೋಸವನ್ನು ನಿರ್ಮಾಪಕಿಗೆ ತಿಳಿಸಿ ನಮಗೆ ಆಗಿರೋ ಅನ್ಯಾಯಕ್ಕೆ ನ್ಯಾಯ ಸಿಗ್ಬೇಕು ಅನ್ನೋದೇ ನಾನು ಈ ವಿಡಿಯೋ ಮಾಡಿರೋ ಉದ್ದೇಶ ಅಷ್ಟೇ ಎಂದು ಮಹೇಶ್‌ ಹೇಳಿದ್ದಾರೆ.

55
ಪುಷ್ಪ ನಿರ್ಮಾಣದ ಮೊದಲ ಸಿನಿಮಾ

ಆಗಸ್ಟ್ 1 ರಂದು ಕೊತ್ತಲವಾಡಿ ಸಿನಿಮಾ ಬಿಡುಗಡೆ ಆಗಿತ್ತು. ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ಅವ್ರ ಪಿಎ ಪ್ರೊಡಕ್ಷನ್ನಲ್ಲಿ ಸಿನಿಮಾ ಮೂಡಿ ಬಂದಿತ್ತು. ಶ್ರೀರಾಜ್ ನಿರ್ದೇಶನದ ಸಿನಿಮಾ ಇದಾಗಿದೆ.

Read more Photos on
click me!

Recommended Stories