ಸ್ಯಾಂಡಲ್ ವುಡ್‌ನ ಕನಸಿನ ರಾಣಿ, ಖ್ಯಾತಿ ನಟಿ ಮಾಲಾಶ್ರೀ ಪುತ್ರಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಖ್ಯಾತ ನಟಿಯ ಪುತ್ರಿ ಸಿನಿಮಾರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ ಎಂದರೆ ಸಹಜವಾಗಿ ಕುತೂಹಲ ಹೆಚ್ಚಾಗಿಯೇ ಇರುತ್ತೆ. ಸದ್ಯ ಮಾಲಾಶ್ರೀ ಪುತ್ರಿಯ ಎಂಟ್ರಿ ಕೂಡ ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಹುಟ್ಟಹಾಕಿದೆ.
ಕನಸಿನ ರಾಣಿ ಪುತ್ರಿ ಅನನ್ಯಾ, ರಾಧನಾ ರಾಮ್ ಆಗಿ ಬಣ್ಣದ ಲೋಕಕ್ಕೆ ಅದ್ದೂರಿ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಮೊದಲ ಸಿನಿಮಾದ ಮುಹೂರ್ತ ನೆರವೇರಿದ್ದು ರಾಧಿನಾ ಭರವಸೆಯ ನಟಿಯಾಗಿ ಕಾಣಿಸುತ್ತಿದ್ದಾರೆ. ರಾಧನಾ ಫೋಟೋಗಳು ಈಗಾಗಲೇ ವೈರಲ್ ಆಗಿವೆ.
ನಟಿ ಮಾಲಾಶ್ರೀ ಮತ್ತು ನಿರ್ಮಾಪಕ ರಾಮು ಅವರ ಪುತ್ರಿ ಅನನ್ಯಾ, ಸ್ಯಾಂಡಲ್ ವುಡ್‌ನ ಲಕ್ಕಿ 'ರ' ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಮೂಲಕ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ. ತಂದೆ ರಾಮು ಅವರ ಆಸೆಯಂತೆ ಅನನ್ಯಾ ಹೆಸರನ್ನು ರಾಧನಾ ಎಂದು ಬದಲಾಯಿಸಿಕೊಂಡು ಚಿತ್ರರಂಗ ಪ್ರವೇಶ ಮಾಡಿದ್ದಾರೆ. ತಾಯಿ ಮಾಲಾಶ್ರಿಯಂತೆ ರಾಧನಾ ಕೂಡ ಸ್ಟಾರ್ ನಟಿಯಾಗಿ ಹೊರಹೊಮ್ಮುವ ಕನಸು ಕಂಡಿದ್ದಾರೆ.
ರಾಧನಾ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲೂ ಸಖತ್ ಆಕ್ಟೀವ್ ಆಗಿದ್ದಾರೆ. ಟ್ವಿಟ್ಟರ್, ಇನ್ಸ್ಟಾಗ್ರಾಮ್ ಗೆ ಎಂಟ್ರಿ ಕೊಟ್ಟಿರುವ ರಾಧನಾ ಸುಂದರ ಫೋಟೋಗಳನ್ನು ಶೇರ್ ಮಾಡಿದ್ದಾರೆ. ರಾಧಾನಾ ಫೋಟೋಗೆ ಅಭಿಮಾನಿಗಳಿಂದ ಮೆಚ್ಚುಗೆಯ ಕಾಮೆಂಟ್ ಹರಿದುಬರುತ್ತಿದೆ.
ನಟಿ ರಾಧಾನಾ ಪಿಂಕ್ ಲೆಹಂಗಾ ಧರಿಸಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ತರಹೇವಾರಿ ಪೋಸ್ ನೀಡಿರುವ ರಾಧಾನಾ ಫೋಟೋಗೆ ಫೀಲಿಂಗ್ ಪಿಂಕ್ ಎಂದು ಕ್ಯಾಪ್ಷನ್ ಹಾಕಿದ್ದಾರೆ. ಅಭಿಮಾನಿಗಳು ಕ್ಯೂಟಿ, ಸೂಪರ್ ಎಂದು ಕಾಮೆಂಟ್ ಮಾಡಿ ಹಾರ್ಟ್ ಇಮೋಜಿ ಹಾಕುತ್ತಿದ್ದಾರೆ.
ಮಗಳ ಸಿನಿಮಾರಂಗ ಎಂಟ್ರಿ ಬಗ್ಗೆ ನಟಿ ಮಾಲಾಶ್ರೀ ಕೂಡ ಫುಲ್ ಖುಷ್ ಆಗಿದೆ. ಈಗಾಗಲೇ ಎಲ್ಲಾ ತಯಾರಿ ಮಾಡಿಕೊಂಡೇ ರಾಧನಾ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ. ಓದು ಮುಗಿಸಿ ರಾಧಾನಾ ಬೆಳ್ಳು ಪರದೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ತಾಯಿಯ ಹಾಗೆ ಮಗಳು ಕೂಡ ದೊಡ್ಡ ನಟಿಯಾಗಿ ಖ್ಯಾತಿಗಳಿಸಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.