ಪರಿಧಿಯೇ ಇಲ್ಲದ ಪ್ರೀತಿ, ನಿಷ್ಕಲ್ಮಶ ನಗು: ಹೊಸ ವರ್ಷಕ್ಕೆ ಫ್ಯಾಮಿಲಿ ಫೋಟೋ ಶೇರ್ ಮಾಡಿ ಶುಭಾಶಯ ಕೋರಿದ ರಾಕಿಂಗ್​ ದಂಪತಿ​!

Published : Jan 02, 2024, 02:30 AM IST

ಹೊಸ ವರ್ಷ ಹರುಷವನ್ನು ತಂದಿದೆ. ಅನೇಕರು ನ್ಯೂ ಇಯರ್​ ಅನ್ನು ಅದ್ಧೂರಿಯಾಗಿ ಆಚರಿಸುವ ಮೂಲಕ 2024ನ್ನು ಬರಮಾಡಿಕೊಂಡಿದ್ದಾರೆ. ಅದರಂತೆಯೇ ಸ್ಯಾಂಡಲ್​ವುಡ್​ ರಾಕಿಂಗ್​ ದಂಪತಿ ಯಶ್​ ಹಾಗೂ ರಾಧಿಕಾ ಪಂಡಿತ್ ಹೊಸ ವರ್ಷಕ್ಕೆ ವಿಭಿನ್ನವಾಗಿ ಶುಭಾಶಯ ಕೋರಿದ್ದಾರೆ.

PREV
15
ಪರಿಧಿಯೇ ಇಲ್ಲದ ಪ್ರೀತಿ, ನಿಷ್ಕಲ್ಮಶ ನಗು: ಹೊಸ ವರ್ಷಕ್ಕೆ ಫ್ಯಾಮಿಲಿ ಫೋಟೋ ಶೇರ್ ಮಾಡಿ ಶುಭಾಶಯ ಕೋರಿದ ರಾಕಿಂಗ್​ ದಂಪತಿ​!

ನ್ಯಾಷನಲ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್  ತಮ್ಮ ಅಭಿಮಾನಿಗಳಿಗೆ ವಿಶೇಷವಾಗಿ ಶುಭಕೋರಿದ್ದಾರೆ. ಹೊಸ ವರ್ಷಕ್ಕೆ ಚೆಂದದ ಫೋಟೋ ಶೇರ್ ಮಾಡುವ ಮೂಲಕ ಯಶ್ ದಂಪತಿ ಸ್ಪೆಷಲ್‌ ಆಗಿ ವಿಶ್ಸ್ ತಿಳಿಸಿದ್ದಾರೆ.

25

ರಾಧಿಕಾ ಪಂಡಿತ್​​ ಇನ್​ಸ್ಟಾಗ್ರಾಂನಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ. ರಾಕಿಂಗ್​ ಸ್ಟಾರ್​ ಯಶ್​ ಹಾಗೂ ಮಕ್ಕಳಾದ ಐರಾ ಮತ್ತು ಯಥರ್ವ್​ ಜೊತೆಗೆ ಫೋಟೋ ಶೂಟ್​ ಮಾಡಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ವೈರಲ್​ ಆಗಿದೆ.

35

ರಾಧಿಕಾ ಪಂಡಿತ್​ ತಮ್ಮ ಇನ್​ಸ್ಟಾ ಖಾತೆಯಲ್ಲಿ, ಪರಿಧಿಯೇ ಇಲ್ಲದ ಪ್ರೀತಿ, ನಿಷ್ಕಲ್ಮಶ ನಗು, ಕನಸುಗಳನ್ನ ಸಾಕಾರಗೊಳಿಸಬಲ್ಲದು ನಮ್ಮ ಕುಟುಂಬದಿಂದ ನಿಮ್ಮೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

45

ಈ ಸಂದೇಶದ ಜತೆಗೆ 'ನಮ್ಮ ಕುಟುಂಬದಿಂದ ನಿಮ್ಮೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು' ಎಂದು ವಿಶ್‌ ಮಾಡಿದ್ದಾರೆ. 'ನಿಮ್ಮನ್ನು ಮತ್ತೆ ಹಿರಿತೆರೆ ಮೇಲೆ ನೋಡಲು ಕಾಯುತ್ತಿದ್ದೇವೆ' ಎಂದು ಹಲವು ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ. 

55

ಯಶ್ ಕಪ್ಪು ಬಣ್ಣದ ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಧರಿಸಿದ್ರೆ, ಮೆರುನ್ ಬಣ್ಣದ ಡ್ರೆಸ್‌ನಲ್ಲಿ ರಾಧಿಕಾ ಪಂಡಿತ್ ಮಿಂಚಿದ್ದಾರೆ. ಯಶ್ ಕುಟುಂಬದಲ್ಲಿ ಪ್ರತಿ ಹಬ್ಬವನ್ನು ಸಡಗರದಿಂದ ಆಚರಿಸಿಕೊಳ್ಳುತ್ತಾರೆ. ಹಬ್ಬದ ಸಂಭ್ರಮದ ಫೋಟೋಗಳನ್ನ ನಟಿ ರಾಧಿಕಾ ಪಂಡಿತ್ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories