2024ಕ್ಕೆ ನಾನು ಅಮ್ಮ, ಬೇಬಿ ಬಂಪ್‌ ಫೋಟೋ ಹಾಕಿ ಸಿಹಿ ಹಂಚಿಕೊಂಡ ನಟಿ ಅದಿತಿ ಪ್ರಭುದೇವ

Published : Jan 01, 2024, 12:06 PM IST

2024ರ ಹೊಸ ವರ್ಷದ ಮೊದಲ ದಿನ ನಟಿ ಅದಿತಿ ಪ್ರಭುದೇವ ಅವರು ಅಮ್ಮನಾಗುತ್ತಿರುವ ಸಂತಸದ ವಿಚಾರವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಹೊಸ ವರ್ಷದ ಮೊದಲ ದಿನವೇ ತಮ್ಮ ಅಭಿಮಾನಿಗಳಿಗೆ ಖುಷಿಯ ವಿಚಾರವನ್ನು ಇನ್‌ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡು ತಿಳಿಸಿದ್ದಾರೆ.

PREV
16
2024ಕ್ಕೆ ನಾನು ಅಮ್ಮ, ಬೇಬಿ ಬಂಪ್‌ ಫೋಟೋ ಹಾಕಿ ಸಿಹಿ ಹಂಚಿಕೊಂಡ ನಟಿ ಅದಿತಿ ಪ್ರಭುದೇವ

2024ರ ಹೊಸ ವರ್ಷದ ಮೊದಲ ದಿನ ನಟಿ ಅದಿತಿ ಪ್ರಭುದೇವ ಅವರು ಅಮ್ಮನಾಗುತ್ತಿರುವ ಸಂತಸದ ವಿಚಾರವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಹೊಸ ವರ್ಷದ ಮೊದಲ ದಿನವೇ ತಮ್ಮ ಅಭಿಮಾನಿಗಳಿಗೆ ಖುಷಿಯ ವಿಚಾರವನ್ನು ಇನ್‌ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡು ತಿಳಿಸಿದ್ದಾರೆ.

26

ಸಂಬಂಧಗಳಲ್ಲಿ ಶ್ರೇಷ್ಠವಾದದ್ದು , ಹುಟ್ಟಿದಾಗಿನಿಂದ ಸಾಯುವವರೆಗೂ ಪ್ರತಿಯೊಂದು ನೋವು ನಲಿವಿನಲ್ಲೂ ನಮ್ಮ ಬಾಯಿಂದ ಬರುವ ಏಕೈಕ ಪದ "ಅಮ್ಮ" ಜೀವನದಲ್ಲಿ ಪ್ರತಿಯೊಬ್ಬರೂ ಪ್ರೀತಿಯಿಂದ ಗೌರವದಿಂದ ಕಾಣುವ ಸಂಬಂಧ "ಅಮ್ಮ"  
ಪ್ರತಿಕ್ಷಣ ನಮಗಾಗಿ ಮಿಡಿಯುವ ಜೀವ "ಅಮ್ಮ" 2024 ಕ್ಕೆ ನಾನು " ಅಮ್ಮ"  ಎಂದು ಬರೆದುಕೊಂಡಿದ್ದಾರೆ.

36

ತಮ್ಮ ನೆಚ್ಚಿನ ನಟಿ ಸಂತಸದ ವಿಚಾರವನ್ನು ಹಂಚಿಕೊಂಡ ಬೆನ್ನಲ್ಲೇ   ಸೋಷಿಯಲ್‌ ಮೀಡಿಯಾದಲ್ಲಿ ಅವರ ಪೋಸ್ಟ್‌ಗೆ ಫ್ಯಾನ್ಸ್‌ ಖುಷಿ ವ್ಯಕ್ತಪಡಿಸಿ ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ. 

46

ಕೊಡಗಿನ ಕಾಫಿ ಬೆಳೆಗಾರ ಯಶಸ್ ಪಟ್ಲ ಜೊತೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದಿತಿ ಅದ್ಧೂರಿಯಾಗಿ ಹಸೆಮಣೆ ಏರಿದ್ರು. 2022ರ  ನವೆಂಬರ್  28 ರಂದು ಮದುವೆಯಾದ ಈ ಜೋಡಿ 2 ವರ್ಷಗಳ ಬಳಿಕ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
 

56

ಇನ್ನು ವಿ.ಚಂದ್ರು ನಿರ್ಮಾಣದ, ಜೀವ ನಿರ್ದೇಶನದ ಹಾಗೂ ಅದಿತಿ ಪ್ರಭುದೇವ ನಾಯಕಿಯಾಗಿ, ಪವನ್ ತೇಜ್ ನಾಯಕನಾಗಿ ನಟಿಸಿರುವ "ಅಲೆಕ್ಸಾ" ಚಿತ್ರ ಜನವರಿ 26 ಗಣರಾಜ್ಯೋತ್ಸವದಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. 
 

66

ಕ್ರೈಂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ವಿ.ಚಂದ್ರು ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಡಾ||ವಿ.ನಾಗೇಂದ್ರಪ್ರಸಾದ್ ಹಾಡುಗಳನ್ನು ಬರೆದಿದ್ದು, ಎ.ಪಿ.ಒ  ಸಂಗೀತ ನೀಡಿದ್ದಾರೆ. ಸಾಯಿಸತೀಶ್ ಛಾಯಾಗ್ರಹಣ, ಉಮೇಶ್ ಸಂಕಲನ, ಚಂದ್ರು, ರಾಮು, ಕಲೈ ನೃತ್ಯ ನಿರ್ದೇಶನ ಹಾಗೂ ರವಿವರ್ಮ, ಮಾಸ್ ಮಾದ, ವಿಕ್ರಮ್ ಮೋರ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories