ನೆದರ್ ಲ್ಯಾಂಡ್‌ನಲ್ಲಿ ಪತ್ನಿ ಜೊತೆ ವೆಕೇಶನ್ ಮೂಡಲ್ಲಿ ನಿಖಿಲ್ ಕುಮಾರಸ್ವಾಮಿ!

Published : Dec 31, 2023, 05:13 PM IST

ಸಿನಿಮಾ, ರಾಜಕಾರಣದಲ್ಲಿ ಮಿಂಚುತ್ತಿರುವ ನಿಖಿಲ್ ಕುಮಾರಸ್ವಾಮಿ, ಹೆಚ್ಚಾಗಿ ಗುರುತಿಸಿಕೊಳ್ಳುತ್ತಿರುವುದು ಫ್ಯಾಮಿಲಿ ಮ್ಯಾನ್ ಆಗಿ. ಇದೀಗ ಪತ್ನಿ ಜೊತೆ ವಿದೇಶ ಪ್ರವಾಸ ಎಂಜಾಯ್ ಮಾಡ್ತಿದ್ದಾರೆ. 

PREV
17
ನೆದರ್ ಲ್ಯಾಂಡ್‌ನಲ್ಲಿ ಪತ್ನಿ ಜೊತೆ ವೆಕೇಶನ್ ಮೂಡಲ್ಲಿ ನಿಖಿಲ್ ಕುಮಾರಸ್ವಾಮಿ!

ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ವೆಕೇಶನ್ ಮೂಡ್ ನಲ್ಲಿದ್ದು, ಪತ್ನಿ ರೇವತಿ ಜೊತೆ ನೆದರ್‌ಲ್ಯಾಂಡ್ ಪ್ರವಾಸ ಮಾಡ್ತಿದ್ದಾರೆ.  ಅಲ್ಲಿನ ಸುಂದರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

27

ನೆದರ್ ಲ್ಯಾಂಡ್ ನ ಫೇಮಸ್ ಸಿಟಿ ಆಮ್ ಸ್ಟ್ರಾಡ್ಯಾಮ್ ನ ಬೀದಿ ಬೀದಿಯನ್ನು ಸುತ್ತುತ್ತಾ ಎಂಜಾಯ್ ಮಾಡ್ತಿರೋ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಜೋಡಿ ಅಲ್ಲಿನ ಚಳಿಗಾಲವನ್ನು ಎಂಜಾಯ್ ಮಾಡ್ತಿದ್ದಾರೆ. 

37

ಕ್ರಿಸ್ಮಸ್ ರಜೆಯನ್ನು ಎಂಜಾಯ್ ಮಾಡಿ ನಿಖಿಲ್ ದಂಪತಿಗಳು ವಿದೇಶ ಪ್ರವಾಸಕ್ಕೆ ಹೋದಂತೆ ಕಾಣುತ್ತಿದೆ. ಅಲ್ಲಿನ ಸುಂದರವಾದ ಪ್ರದೇಶಗಳನ್ನು ಫೋಟೋಗಳನ್ನು ಸೆರೆ ಹಿಡಿದು ಸೋಶಿಯಲ್ ಮೀಡೀಯಾದಲ್ಲಿ ಹಂಚಿಕೊಂಡಿದ್ದಾರೆ. 

47

ನಿಖಿಲ್ ಕುಮಾರಸ್ವಾಮಿ ಅವರು ನಟನೆ, ರಾಜಕಾರಣದ ಜೊತೆಗೆ ಫ್ಯಾಮಿಲಿ ಜೊತೆಗೂ ಹೆಚ್ಚಾಗಿ ಸಮಯ ಕಳೆಯುತ್ತಿರುತ್ತಾರೆ. ಈಗ ಅವರು ಪತ್ನಿ, ಮಗನ ಜೊತೆ ವಿದೇಶಿ ಪ್ರವಾಸ ಮಾಡಿದ್ದಾರೆ.

57

2020 ರಲ್ಲಿ ರೇವತಿ ಅವರ ಜೊತೆ ವೈವಾಹಿಕ ಜೀವನಕ್ಕೆ (married life) ಕಾಲಿಟ್ಟ ನಿಖಿಲ್ ಕುಮಾರಸ್ವಾಮಿ ಹೆಚ್ಚಾಗಿ ನ್ಯೂಸ್ ನಿಂದ ದೂರ ಇದ್ದು, ಸುಂದರವಾದ ಸಂಸಾರ ನಡೆಸುತ್ತಿದ್ದಾರೆ. ಇವರಿಗೆ ಕಳೆದ ವರ್ಷ ಗಂಡು ಮಗು ಜನಿಸಿತ್ತು. 

67

ನಿಖಿಲ್ ಕುಮಾರಸ್ವಾಮಿ-ರೇವತಿ ಪುತ್ರನಿಗೆ ಅವರು ಅವ್ಯಾನ್ ದೇವ್ ಎಂದು ಹೆಸರಿಟ್ಟಿದ್ದು. ನಿಖಿಲ್  ಹೆಚ್ಚಾಗಿ ಹೆಂಡತಿ ಮತ್ತು ಮಗನ ಜೊತೆಗೆ ಸಮಯ ಕಳೆಯುತ್ತಿದ್ದು, ಅದರ ಮುದ್ದಾದ ಫೋಟೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

77

ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಚಿತ್ರರಂಗ, ರಾಜಕಾರಣದಿಂದ ದೂರ ಇದ್ದರೂ ಕೂಡ ನಿಖಿಲ್ ಕುಮಾರಸ್ವಾಮಿಯ ಪ್ರತಿ ಹೆಜ್ಜೆಯಲ್ಲೂ ಸಾಥ್ ನೀಡುತ್ತ ಜೊತೆಗೆ ತಮ್ಮ ಸೌಂದರ್ಯದಿಂದಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಇಬ್ಬರ ಜೋಡಿ ನೋಡಿ ಜನರು ಭಲೇ ಜೋಡಿ ಎನ್ನುತ್ತಿದ್ದಾರೆ. 

click me!

Recommended Stories