ಕೆಜಿಎಫ್ ಚಾಪ್ಟರ್ 1 ಮತ್ತು 2 ಬಳಿಕ ತಮಿಳಿನಲ್ಲಿ ವಿಕ್ರಮ್ ಜೊತೆ ಕೋಬ್ರಾ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು ಶ್ರೀನಿಧಿ. ಇದಾದ ಬಳಿಕ ಅವಕಾಶ ಸಿಗದೆ ನಟನೆಯಿಂದ ದೂರ ಉಳಿದಿದ್ದರು ಶ್ರೀನಿಧಿ.
29
ಶ್ರೀನಿಧಿ ಕೊನೆಯದಾಗಿ ತೆಲುಗಿನ ಹಿಟ್ 3 ಸಿನಿಮಾದಲ್ಲಿ ನಾನಿ ಗೆ ನಾಯಕಿಯಾಗಿ ಎಎಸ್ ಪಿ ಮೃದುಲಾ ಐಪಿಎಸ್ ಪಾತ್ರದಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದರು. ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು.
39
ಹಿಟ್ ಸಿನಿಮಾ ಬಳಿಕ ಬ್ರೇಕ್ ಪಡೆದಿದ್ದ ಶ್ರೀನಿಧಿ, ಆದಿ ಯೋಗಿ ಸೆಂಟರ್ ನಲ್ಲಿ ಕೆಲವು ದಿನಗಳ ಕಾಲ ಉಳಿದು ಯೋಗ, ಧ್ಯಾನ ಮಾಡಿ ರಿಫ್ರೇಶ್ ಮಾಡಿಕೊಂಡಿದ್ದರು. ಅಲ್ಲಿನ ಫೋಟೊಗಳನ್ನು ಸಹ ಶೇರ್ ಮಾಡಿದ್ದರು.
ಈ ವರ್ಷ ನಟಿ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗಿನಲ್ಲಿ ತೆಲುಸು ಕಾದ ಸಿನಿಮಾದಲ್ಲಿ ಸಿದ್ದು ಜೊನ್ನಲಗದ್ದ ಮತ್ತು ರಾಶಿ ಖನ್ನಾ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ ಶ್ರೀನಿಧಿ. ಕನ್ನಡದಲ್ಲೂ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
59
ಕಿಚ್ಚ ಸುದೀಪ್ ಅಭಿನಯಿಸಲಿರುವ ಕಿಚ್ಚ 47 ಸಿನಿಮಾಗೆ ಶ್ರೀನಿಧಿ ಶೆಟ್ಟಿ ನಾಯಕಿಯಾಗಿದ್ದಾರೆ. ಅಲ್ಲದೇ ತೆಲುಗಿನಲ್ಲಿ ಅಜಿತ್ ಅಭಿನಯಿಸಲಿರುವ ಹೊಸ ಸಿನಿಮಾಗೂ ಶ್ರೀನಿಧಿ ಆಯ್ಕೆಯಾಗಿದ್ದಾರೆ ಎನ್ನುವ ಗುಸು ಗುಸು ಕೇಳಿ ಬರುತ್ತಿದೆ.
69
ಇದೆಲ್ಲದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಶ್ರೀನಿಧಿ ತಮ್ಮ ಸಿಂಪಲ್ ಫೋಟೊಗಳ ಮೂಲಕವೇ ಅಭಿಮಾನಿಗಳ ಮನಸು ಕದಿಯುತ್ತಾರೆ. ಇದೀಗ ಪ್ಯಾರ್ ಕಿಯಾ ತೋ ಡರ್ನಾ ಕ್ಯಾ ಎನ್ನುವ ಹಾಡನ್ನು ಹಿನ್ನೆಲೆಯಲ್ಲಿ ಹಾಕಿ, ಒಂದಷ್ಟು ಕ್ಯಾಂಡಿಡ್ ಮೂಮೆಂಟ್ ಗಳನ್ನು ಸೆರೆಹಿಡಿದ್ದಾರೆ.
79
ಸಿನಿಮಾ ಶೂಟಿಂಗ್ ನಿಂದ ಹಿಡಿದು, ಈಗಷ್ಟೇ ಎದ್ದಿರುವ, ಸೀರೆಯುಟ್ಟಿರುವ ಹೀಗೆ ಎಲ್ಲಾ ರೀತಿಯ ಸೆಲ್ಫಿಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಮುದ್ದು ಮುದ್ದಾದ ಮುಖದ ಎಕ್ಸ್ ಪ್ರೆಶನ್ ಕೊಟ್ಟಿದ್ದು ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ.
89
ತಮ್ಮ ಫೋಟೊಗಳ ಜೊತೆಗೆ ಶ್ರೀನಿಧಿ ಅಷ್ಟೇ ಕ್ಯೂಟ್ ಆಗಿ ಕ್ಯಾಪ್ಶನ್ ಕೂಡ ಬರೆದಿದ್ದು, ಕೆಟ್ಟದಾದ ಸೆಲ್ಫಿ ತೆಗೆದ ಮೇಲೆ, ಅದನ್ನ ಪೋಸ್ಟ್ ಮಾಡೋದಕ್ಕೆ ಹೆದರಿಕೆ ಯಾಕೆ ಎಂದಿದ್ದಾರೆ. ವಿಯರ್ಡ್ ಫೇಸಸ್, ಕೆಟ್ಟದಾದ ಆಂಗಲ್ ಮತ್ತು ಅಗ್ಲಿ ಸೆಲ್ಫಿ ಎಂದು ಸಹ ಬರೆದುಕೊಂಡಿದ್ದಾರೆ.
99
ಶ್ರೀನಿಧಿಯ ಮುದ್ದಾದ ಫೋಟೊಗಳನ್ನು ನೋಡಿ ಅಭಿಮಾನಿಗಳು ಸೋ ಕ್ಯೂಟ್, ಬ್ಯೂಟಿಫುಲ್, ನ್ಯಾಚುರಲ್ ಬ್ಯೂಟಿ ಎನ್ನುತ್ತಿದ್ದಾರೆ. ಅಷ್ಟೇ ಅಲ್ಲ ಆದಷ್ಟು ಬೇಗನೆ ನಿಮ್ಮ ಹೊಸ ಸಿನಿಮಾದ ಅಪ್ ಡೇಟ್ ನೀಡಿ ಎಂದು ಸಹ ಕೇಳಿಕೊಂಡಿದ್ದಾರೆ.