ಯಾವ ಫೋಟೋ, ವಿಡಿಯೋ ನೋಡಿದರೂ ಐರಾ Foodie ಅಂತ ಗೊತ್ತಾಗುತ್ತೆ ನೋಡಿ!

First Published | Feb 20, 2022, 4:42 PM IST

 ರಾಕಿಂಗ್ ಕಪಲ್ ಮುದ್ದಾದ ಮಗಳು ಐರಾ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಸೆಲೆಬ್ರಿಟಿಗಳು ಎತ್ತಿ ಮುದ್ದಾಡುತ್ತಿರುವ ಈ ಕಂದಮ್ಮನ ಫೋಟೋ, ವೀಡಿಯೋ ನೋಡಿದಾಗ ಒಂದು ವಿಷಯ ಗಮನಿಸಬಹುದು. ಏನದು?
 

ರಾಕಿಂಗ್ ಸ್ಟಾರ್ ಯಶ್ ಮತ್ತು ಸಿಂಡ್ರೆಲಾ ರಾಧಿಕಾ ಪಂಡಿತ್ ಮುದ್ದಾದ ಮಗಳು ಐರಾ ಸೆಲೆಬ್ರಿಟಿ ಕಿಡ್‌ ಲಿಸ್ಟ್‌ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿರುವ ಕಂದಮ್ಮ.

ಕೆಲವು ದಿನಗಳ ಹಿಂದೆ ಗೋಲ್ಡನ್ ಕ್ವೀನ್ ಅಮೂಲ್ಯಗೆ ಬೇಬಿ ಶವರ್ ಮಾಡಲಾಗಿತ್ತು. ಸಿನಿಮಾ ಸ್ನೇಹಿತರಿಗೆ ಮಾತ್ರ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು.

Tap to resize

ಅಮೂಲ್ಯ ಸೀಮಂತ ಕಾರ್ಯಕ್ರಮದಲ್ಲಿ ರಾಧಿಕಾ ಪಂಡಿತ್, ಐರಾ, ಯಥರ್ವ್ ಮತ್ತು ರಾಧಿಕಾ ತಾಯಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಯಶ್‌ ಮಕ್ಕಳನ್ನು ಎಲ್ಲರೂ ಮುದ್ದಾಡಿದ್ದಾರೆ.

ಐರಾನ ಎಲ್ಲಾ ಸಿನಿಮಾ ಸೆಲೆಬ್ರಿಟಿಗಳು ಮುದ್ದಾಡಿದ್ದಾರೆ. ಫೋಟೋ ಕ್ಲಿಕ್ಕಿಸಿಕೊಂಡು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಪ್ರತಿಯೊಂದು ಫೋಟೋದಲ್ಲೂ ಐರಾ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾಳೆ.

ಐರಾ ಫೋಟೋಗಳಲ್ಲಿ ಅಭಿಮಾನಿಗಳು ಒಂದು ವಿಚಾರ ಗಮನಿಸಿದ್ದಾರೆ. ಐರಾ ಆಹಾರ ಪ್ರೀಯೆ ಎಂಬುವುದು. ಕೈಯಲ್ಲಿ ಕೇಕ್, ಚಾಕೋಲೇಟ್‌ ಅಥವಾ ಡಿಫರೆಂಟ್ ಆಗಿ ಕಾಣಿಸುವ ತಿನಿಸುಗಳನ್ನು ಹಿಡಿದುಕೊಂಡಿರುವುದು.

ಗ್ರೀನ್ ಬಣ್ಣದ ಗೌನ್‌ನಲ್ಲಿ ರಾಧಿಕಾ ಕಾಣಿಸಿಕೊಂಡರೆ, ಬೇಬಿ ಪಿಂಕ್ ಕಾಂಬಿನೇಷನ್‌ ಫ್ರಾಕ್‌ನಲ್ಲಿ ಐರಾ ಕಾಣಿಸಿಕೊಂಡಿದ್ದಾಳೆ. ತಮ್ಮ ಯಥರ್ವ್‌ ಮಾರ್ಡನ್‌ ಲುಕ್‌ನಲ್ಲಿದ್ದ.

Latest Videos

click me!