Bytwo love film release; ಧನ್ವೀರ್ ಶ್ರೀಲೀಲಾ ಸ್ಟೈಲಿಶ್ ಪ್ರೇಮಕತೆ

First Published | Feb 18, 2022, 11:24 AM IST

ಸ್ಯಾಂಡಲ್‌ವುಡ್‌ ಕ್ಯೂಟ್‌ ಜೋಡಿ ನಟಿಸಿರುವ ಬೈಟು ಲವ್ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಸಿನಿಮಾ ಹೇಗಿದೆ? ನಿರೀಕ್ಷೆ ಎಷ್ಟಿದೆ ಎಂದು ಚಿತ್ರತಂಡ ಹಂಚಿಕೊಂಡಿದೆ.

ಧನ್ವೀರ್ ಹಾಗೂ ಶ್ರೀಲೀಲಾ ಜೋಡಿಯಾಗಿ ನಟಿಸಿರುವ ‘ಬೈಟು ಲವ್’ ಸಿನಿಮಾ ಇಂದು (ಫೆ.18) ತೆರೆ ಮೇಲೆ ಮೂಡುತ್ತಿದೆ. ಸಿನಿಮಾ ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರದ ಕುರಿತು ಹೇಳಿಕೊಳ್ಳಲು ನಿರ್ದೇಶಕ ಹರಿ ಸಂತು, ನಾಯಕ ಧನ್ವೀರ್, ನಾಯಕಿ ಶ್ರೀಲೀಲಾ, ನಿರ್ಮಾಪಕ ಸುಪ್ರಿತ್ ಅವರ ಜತೆಗೆ ಮುಖ್ಯ ಅತಿಥಿಗಳಾಗಿ ಕ್ರೇಜಿಸ್ಟಾರ್ ರವಿಚಂದ್ರ, ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಜೋಡಿ ಆಗಮಿಸಿದ್ದರು.

ಚಿತ್ರದ ಹಾಡು ಹಾಗೂ ಟ್ರೇಲರ್ ಪ್ರದರ್ಶನದ ಜತೆಗೆ ಚಿತ್ರತಂಡದ ಮಾತು. ‘ಇದೊಂದು ಸಾಂಸಾರಿಕ ಪ್ರೇಮ ಕತೆಯ ಸಿನಿಮಾ. ಪ್ರೀತಿಯನ್ನು ಧಿಕ್ಕರಿಸುವ ಜೋಡಿ, ಕೊನೆಗೂ ಅದೇ ಪ್ರೀತಿಗೆ ಸಿಲುಕಿ ಹೇಗೆ ಜೀವನ ಸಾಗಿಸುತ್ತಾರೆ ಎಂಬುದನ್ನು ತುಂಬಾ ಆಪ್ತವಾಗಿ ಈ ಚಿತ್ರದಲ್ಲಿ ಕಟ್ಟಿ ಕೊಡಲಾಗಿದೆ. ಹೀಗಾಗಿ ಎಲ್ಲಾ ವರ್ಗದ ಪ್ರೇಕ್ಷಕರಿಗೆ ಈ ಸಿನಿಮಾ ಮೆಚ್ಚುಗೆ ಆಗುತ್ತದೆಂಬ ನಂಬಿಕೆ ಇದೆ’ ಎನ್ನುತ್ತಾರೆ ಹರಿ ಸಂತು.

Tap to resize

ಚಿತ್ರದ ನಾಯಕಿ ಶ್ರೀಲೀಲಾ ಸದ್ಯಕ್ಕೆ ತೆಲುಗಿನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಇದರ ನಡುವೆಯೂ ‘ಬೈ ಟು ಲವ್’ ಚಿತ್ರದ ಬಿಡುಗಡೆಯ ಸಂಭ್ರಮಕ್ಕೆ ಸಾಕ್ಷಿಯಾಗಲು ಚಿತ್ರದ ಪ್ರಚಾರಕ್ಕೆ ಬಂದಿದ್ದರು. 

‘ತುಂಬಾ ಫ್ರೆಶ್ ಆಗಿರುವ ಪ್ರೇಮ ಕತೆಯನ್ನು ಈ ಚಿತ್ರದಲ್ಲಿ ನೋಡಬಹುದು. ನಿರ್ದೇಶಕರು ಈ ಮೊದಲು ಹೇಳಿದಂತೆ ಇಡೀ ಕತೆಯನ್ನು ತುಂಬಾ ಚೆನ್ನಾಗಿ ನಿರೂಪಣೆ ಮಾಡಿದ್ದಾರೆ. ಚಿತ್ರದ ಪ್ರತಿ ಪಾತ್ರವೂ ಹೊಸತನದಿಂದ ಕೂಡಿರುತ್ತದೆ’ ಎಂದು ಶ್ರೀಲೀಲಾ ಹೇಳಿಕೊಂಡರು. 

ನಿರ್ಮಾಪಕ ಸುಪ್ರಿತ್ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವುದಕ್ಕೆ ತಯಾರ  ಮಾಡಿಕೊಳ್ಳುತ್ತಿದ್ದಾರೆ. ‘ಚಿತ್ರದ ಮೇಲೆ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದೇವೆ. ಅದಕ್ಕೆ ಕಾರಣ ಚಿತ್ರದ ಕತೆ. ನಿರ್ದೇಶಕ ಹರಿ ಸಂತು, ಧನ್ವೀರ್, ಶ್ರೀಲೀಲಾ ಕಾಂಬಿನೇಶನ್ ಈ ಚಿತ್ರಕ್ಕೆ ತುಂಬಾ ಚೆನ್ನಾಗಿ ಕೆಲಸ ಮಾಡಿದೆ. ಚಿತ್ರವನ್ನು ನೋಡಿ ಎಲ್ಲರು ಬೆಂಬಲಿಸಿ’
ಎಂದು ನಿರ್ಮಾಪಕ ಸುಪ್ರಿತ್ ಮನವಿ ಮಾಡಿಕೊಂಡರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ರೇಜಿಸ್ಟಾರ್ ರವಿಚಂದ್ರ ಮಾತನಾಡಿ ಚಿತ್ರದ ಹಾಡು ಮತ್ತು ಟ್ರೇಲರ್ ಚೆನ್ನಾಗಿದೆ. ಸಿನಿಮಾ ಕೂಡ ಇದೇ ರೀತಿ ಯಶಸ್ಸು ಕಾಣಲಿ ಎಂದು ಚಿತ್ರತಂಡಕ್ಕೆ ಶುಭ ಕೋರಿದರು.

Latest Videos

click me!