ನನ್ನ ಸಿನಿಮಾ ನೋಡಿದ ಚೀನಾ ಪ್ರೇಕ್ಷಕರ ಕಣ್ಣಲ್ಲಿ ನೀರು ಬಂತು: ನಟ ಶೈನ್ ಶೆಟ್ಟಿ ಖುಷ್

Published : Nov 16, 2026, 03:39 PM IST

ಸುಮಂತ್ ಭಟ್ ನಿರ್ದೇಶನದ ಶೈನ್ ಶೆಟ್ಟಿ ನಾಯಕನಾಗಿ ನಟಿಸಿರುವ ಹಾರರ್-ಕಾಮಿಡಿ ಕಥಾಹಂದರದ ‘ಶಂಕರಾಭರಣ’ ಸಿನಿಮಾ ನವೆಂಬರ್ 20ರಂದು ತೆರೆಗೆ ಬರಲು ಸಜ್ಜಾಗಿದೆ. ನಟನೆಯ ಜೊತೆಗೆ ಕಥೆ ಬರೆದು ನಿರ್ಮಾಣದಲ್ಲೂ ಕೈಜೋಡಿಸಿದ್ದಾರೆ.

PREV
15
ಹಾರರ್-ಕಾಮಿಡಿ ಕಥಾಹಂದರ

ಶೈನ್ ಶೆಟ್ಟಿ ನಾಯಕನಾಗಿ ನಟಿಸಿರುವ ಹಾರರ್-ಕಾಮಿಡಿ ಕಥಾಹಂದರದ ‘ಶಂಕರಾಭರಣ’ ಚಿತ್ರ ನ. 20ರಂದು ತೆರೆಗೆ ಬರಲು ಸಜ್ಜಾಗಿದೆ. ವಿಶೇಷವೆಂದರೆ, ನಟನೆಯ ಜೊತೆಗೆ ಈ ಚಿತ್ರಕ್ಕೆ ಶೈನ್ ಶೆಟ್ಟಿ ಅವರೇ ಕಥೆ ಬರೆದಿದ್ದು, ದಿವಾಕರ್ ಶೆಟ್ಟಿ ಅವರೊಂದಿಗೆ ಕೈಜೋಡಿಸಿ ಬಂಡವಾಳವನ್ನೂ ಹೂಡಿದ್ದಾರೆ.

25
ವಿಭಿನ್ನ ಮಾದರಿಯ ಹಾಸ್ಯ

ಈ ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಸುಮಂತ್ ಭಟ್, ‘ಚಿತ್ರದಲ್ಲಿ ವಿಭಿನ್ನ ಮಾದರಿಯ ಹಾಸ್ಯವಿದ್ದು, ಟ್ರೇಲರ್‌ನಲ್ಲಿ ತೋರಿಸಿರುವ ಅಂಶಗಳು ಇಡೀ ಸಿನಿಮಾದಲ್ಲಿ ಮನರಂಜನೆ ನೀಡಲಿವೆ’ ಎಂದರು.

35
ಅತೀವ ಖುಷಿ

ನಟ ಶೈನ್ ಶೆಟ್ಟಿ ಮಾತನಾಡಿ, ‘ಇತ್ತೀಚೆಗೆ ಚೀನಾ ಸಿನಿಮಾ ಉತ್ಸವಕ್ಕೆ ನಮ್ಮ ಚಿತ್ರ ಆಯ್ಕೆಯಾಗಿತ್ತು. ಅಲ್ಲಿ ಕನ್ನಡದಲ್ಲೇ ಸಿನಿಮಾ ನೋಡಿದ ವಿದೇಶಿ ಪ್ರೇಕ್ಷಕರ ಕಣ್ಣಲ್ಲಿ ನೀರು ಬಂದಿದ್ದು ನಮಗೆ ಅತೀವ ಖುಷಿ ನೀಡಿತು’ ಎಂದರು.

45
ಸಂಭಾಷಣೆಯ ಶೈಲಿ ಬಹಳ ಇಷ್ಟ

ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ಹಿರಿಯ ಕಲಾವಿದ ಸಂಪತ್ ರಾಜ್ ಮಾತನಾಡಿ, ‘ಚಿತ್ರೀಕರಣ ಆರಂಭಕ್ಕೂ ಮುನ್ನ ಶೈನ್ ಶೆಟ್ಟಿ ಮತ್ತು ಸುಮಂತ್ ಬಂದು ಇಡೀ ಸಿನಿಮಾದ ಕುರಿತು 18 ನಿಮಿಷಗಳ ಸಾರಾಂಶ ವಿವರಿಸಿದ್ದರು. ನನ್ನ ಪಾತ್ರ ಹಾಗೂ ಸಂಭಾಷಣೆಯ ಶೈಲಿ ಬಹಳ ಇಷ್ಟವಾಯಿತು’ ಎಂದರು.

55
ತಾರಾಗಣದಲ್ಲಿ ಯಾರ್ಯಾರಿದ್ದಾರೆ?

ನಿರ್ಮಾಪಕ ದಿವಾಕರ್ ಶೆಟ್ಟಿ ಮಾತನಾಡಿ, ಚಿತ್ರತಂಡದ ಪ್ರತಿಯೊಬ್ಬರ ಪ್ರತಿಭೆ ಹಾಗೂ ಶ್ರಮವನ್ನು ಶ್ಲಾಘಿಸಿದರು. ತಾರಾಗಣದಲ್ಲಿ ಕೃತಿ ಶೆಟ್ಟಿ, ಅನಿಲ್ ಕುಮಾರ್ ಚೌಹಾಣ್, ಅರ್ಜುನ್ ಕಜೆ ಸೇರಿದಂತೆ ಹಲವು ಕಲಾವಿದರು ಬಣ್ಣ ಹಚ್ಚಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories