‘ಪ್ರೇಮದ ಊರಲಿ’ ಸಿನಿಮಾದಲ್ಲಿ ಆರಾಧ್ಯಾ ನಾಯರ್ ಹೇಳುವ 'ನೀನೇನ್ ದೊಡ್ಡ ಸೊನ್ನೆನಾ' ಎಂಬ ಡೈಲಾಗ್ ಸಿನಿಪ್ರಿಯರ ಗಮನ ಸೆಳೆದಿದೆ. ನಟಿಯ ಪಾತ್ರದ ಬಗ್ಗೆ ಸಾಮಾಜಿಕ ವಲಯದಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ. ಒಂದೇ ಸಿನಿಮಾದ ಮೂಲಕ ತಮ್ಮದೇ ಆದ ಗುರುತು ಮೂಡಿಸಿದ ಆರಾಧ್ಯಾ ಈಗ ಹೊಸ ಚಾನ್ಸ್ ಪಡೆದಿದ್ದಾರೆ.
ಸದ್ಯ ಕನ್ನಡ ಚಿತ್ರರಂಗದಲ್ಲಿ 'ಪ್ರೇಮದ ಊರಲಿ' ಸಿನಿಮಾದ ಯಶಸ್ಸಿನ ಸಂಭ್ರಮ ಜೋರಾಗಿದೆ. ಬಾಕ್ಸ್ ಆಫೀಸ್‌ನಲ್ಲೂ ಉತ್ತಮ ಪ್ರದರ್ಶನ ನೀಡುತ್ತಿರುವ ಈ ಚಿತ್ರದಲ್ಲಿ ನಾಯಕಿ ರುಕ್ಮಿಣಿ ಪಾತ್ರಧಾರಿ ತಪಸ್ವಿನಿ ಪೂಣಚ್ಚ ಅವರ ಗೆಳತಿಯಾಗಿ ಆರಾಧ್ಯಾ ನಾಯರ್ (Aradhya Nair) ಕಾಣಿಸಿಕೊಂಡಿದ್ದಾರೆ. ತೆರೆಮೇಲೆ ಅವರ ಲವಲವಿಕೆಯ ಅಭಿನಯ ಪ್ರೇಕ್ಷಕರಿಗೆ ಇಷ್ಟವಾಗಿದ್ದು, ಚಿತ್ರದ ಮೂಲಕ ಅವರಿಗೆ ಉತ್ತಮ ಜನಪ್ರಿಯತೆ ಸಿಕ್ಕಿದೆ.
25
ವಿಶೇಷವಾಗಿ ಸಿನಿಮಾದಲ್ಲಿ ಆರಾಧ್ಯಾ ಹೇಳುವ 'ನೀನೇನ್ ದೊಡ್ಡ ಸೊನ್ನೆನಾ' ಎಂಬ ಡೈಲಾಗ್ ಸಿನಿಪ್ರಿಯರ ಗಮನ ಸೆಳೆದಿದೆ. ಈ ಸಂಭಾಷಣೆ ಪ್ರೇಕ್ಷಕರಿಗೆ ಸಖತ್ ಮನರಂಜನೆ ನೀಡಿದ್ದು, ನಟಿಯ ಪಾತ್ರದ ಬಗ್ಗೆ ಸಾಮಾಜಿಕ ವಲಯದಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ. ಒಂದೇ ಸಿನಿಮಾದ ಮೂಲಕ ತಮ್ಮದೇ ಆದ ಗುರುತು ಮೂಡಿಸಿಕೊಳ್ಳುವಲ್ಲಿ ಆರಾಧ್ಯಾ ಯಶಸ್ವಿಯಾಗಿದ್ದಾರೆ.
ಮೂಲತಃ ಬೆಳಗಾವಿಯವರಾದ ಆರಾಧ್ಯಾ ಅವರಿಗೆ ಉತ್ತರ ಕರ್ನಾಟಕದ ಭಾಷೆ ಮತ್ತು ಅಲ್ಲಿನ ಆಡುಮಾತಿನ ಶೈಲಿಯ ಮೇಲೆ ವಿಶೇಷ ಒಲವಿದೆ. ಈಗಾಗಲೇ ಉತ್ತರ ಕರ್ನಾಟಕದ ಭಾಷಾ ಸೊಗಡಿನ ಸಿನಿಮಾದಲ್ಲೂ ಅವರು ನಟಿಸಿದ್ದು, ಆ ಚಿತ್ರ ಬಿಡುಗಡೆಯ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆ, ಅವರ ತಾಯಿ ಕೇರಳದವರಾಗಿರುವುದರಿಂದ ಆರಾಧ್ಯಾಗೆ ಮಲಯಾಳಂ ಭಾಷೆಯೂ ಚೆನ್ನಾಗಿ ತಿಳಿದಿದೆ. ಈ ಭಾಷಾ ಸಾಮರ್ಥ್ಯವೇ ಇದೀಗ ಅವರಿಗೆ ಹೊಸ ಅವಕಾಶವೊಂದನ್ನು ತಂದುಕೊಟ್ಟಿದೆ.
ಹೌದು, ಆರಾಧ್ಯಾ ನಾಯರ್ ಮಲಯಾಳಂ ಧಾರಾವಾಹಿಯೊಂದರಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಈ ಧಾರಾವಾಹಿ ಪ್ರಸಾರವಾಗುವ ಸಾಧ್ಯತೆಯಿದ್ದು, ಕನ್ನಡ ಸಿನಿಮಾಗಳ ಜೊತೆಗೆ ಮಲಯಾಳಂ ಕಿರುತೆರೆಯಲ್ಲೂ ಅವರು ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ.
55
ಇನ್ನು ಮುಂದಿನ ದಿನಗಳಲ್ಲಿ ವಿಭಿನ್ನ ಕಥೆ ಮತ್ತು ಪಾತ್ರಗಳಿರುವ ಕನ್ನಡ ಸಿನಿಮಾಗಳಲ್ಲಿ ನಟಿಸುವ ಆಸೆ ಆರಾಧ್ಯಾಗೆ ಇದೆ. ಅದರಲ್ಲೂ ಯಶ್ ಅವರ ಜೊತೆ ತೆರೆ ಹಂಚಿಕೊಳ್ಳುವುದು ತಮ್ಮ ದೊಡ್ಡ ಕನಸು ಎಂದು ಅವರು ಹೇಳಿಕೊಂಡಿದ್ದಾರೆ. 'ಪ್ರೇಮದ ಊರಲಿ' ಮೂಲಕ ಆರಂಭವಾದ ಈ ಜನಪ್ರಿಯತೆ ಈಗ ಮಲಯಾಳಂ ಕಿರುತೆರೆಯ ಹೊಸ ಅವಕಾಶದವರೆಗೆ ತಲುಪಿದ್ದು, ಆರಾಧ್ಯಾ ಅವರ ಮುಂದಿನ ಸಿನಿಮಾ ಪಯಣದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.