ಕನ್ನಡ ಚಿತ್ರರಂಗದ ಡಿಫರೆಂಟ್ ಡೈರೆಕ್ಟರ್ ಕಮ್ ಆಕ್ಟರ್ ರಾಜ್ ಬಿ ಶೆಟ್ಟಿ ತುಂಬಾ ಬ್ರಾಡ್ ಮೈಂಡೆಡ್ ವ್ಯಕ್ತಿಯಾಗಿ ಡಿವೋರ್ಸ್ ಪಡೆಯುವುದರಲ್ಲಿ ತಪ್ಪಿಲ್ಲ ಎಂದು ಹೇಳಿದ್ದಾರೆ.
ಸಂಬಂಧಗಳ ವಿಷಯಕ್ಕೆ ಬಂದಾಗ ಕಂಪ್ಲೀಟ್ ಕಮಿಟೆಡ್ ಜೀವನ ಬೆಸ್ಟ್. ಲಿವ್ ಇನ್ ರಿಲೇಶನ್ ಶಿಪ್ ಕೆಲವೊಮ್ಮೆ ಕೆಲವೊಂದು ರೀತಿಯ ಎಫರ್ಟ್‌ಗಳನ್ನು ಹಾಕಲು ಅಡ್ಡಿ ಪಡಿಸುತ್ತದೆ.
ಮ್ಯಾರೇಜ್ ಅಂದ್ರೆ ಅದಕ್ಕಿಂತ ಮೊದಲು ಲವ್ ಒಂದು ಎಕ್ಸ್‌ಪಿರೀಯನ್ಸ್ ಆಗಿರ್ಬೇಕು. ನಾನು ಈ ಮನುಷ್ಯನ ಜೊತೆ ಎಲ್ಲವನ್ನೂ ಕಳೆದುಕೊಳ್ಳಲು ರೆಡಿಯಾಗಿದ್ದೀನಿ ಎಂದು ತಿಳಿದಿರಬೇಕು. ಪಡೆದುಕೊಳ್ಳೋದಕ್ಕೆ ಅಲ್ಲ.
ಈ ರೀತಿ ಇಬ್ಬರೂ ಯೋಚಿಸಿದಾಗ ಜೊತೆಯಲ್ಲಿರಬಹುದು. ಅಲ್ಲದೆ ಡಿವೋರ್ಸ್ ಅನ್ನೋದು ನನಗೆ ತುಂಬಾ ಕೆಟ್ಟ ಶಬ್ದ ಅನಿಸುತ್ತದೆ. ಡಿವೋರ್ಸ್ ಪಡೆಯುವುದು ತಪ್ಪಲ್ಲ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.
ಡಿವೋರ್ಸ್ ಎಂದ ತಕ್ಷಣ ಗಂಡನನ್ನು ಬಿಟ್ಟು ಬಂದವಳು, ಹೆಂಡ್ತಿನಾ ಬಿಟ್ಟು ಬಂದವನು ಎಂದು ನೋಡಬೇಕಾದ ಅಗತ್ಯವಿಲ್ಲ. ಒಬ್ಬ ಮನುಷ್ಯ ಖುಷಿಯಾಗಿರಬೇಕು ಎಂದು ಡಿಸೈಡ್ ಮಾಡುವುದು ಯಾವುದೇ ಕಾರಣಕ್ಕೂ ತಪ್ಪಲ್ಲ.
ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿ, ಪ್ರೀತಿಯಲ್ಲಿ ಆದರೆ ಅದರಲ್ಲಿ, ಮದುವೆಯಲ್ಲಿ ಆದ್ರೆ ಮದುವೆಯಲ್ಲಿ ಅಷ್ಟೆ ಎಂದು ಹೇಳುತ್ತಾ ಕಾಜೇಲ್‌ನಲ್ಲಿ ಪ್ರೀತಿಯಲ್ಲಿ ಬಿದ್ದ ಕಥೆ ಬಿಟ್ಟಿದ್ದರು.
ಪ್ರೀತಿ ವಿಚಾರದಲ್ಲಿ ಅವರ ವ್ಯಾಖ್ಯಾನವೇ ಬೇರೆ. ಒಂದಲ್ಲ ಎರಡಲ್ಲ ಸುದೀರ್ಘ ಆರು ವರ್ಷ ಒಬ್ಬ ಹುಡುಗಿಯನ್ನ ಮನಸಾರೆ ಪ್ರೀತಿಸಿ ಬಳಿಕ ಆ ಪ್ರೀತಿಯನ್ನು ಕಳೆದುಕೊಂಡಿದ್ದರಂತೆ.
ಆ ಪ್ರೀತಿಯನ್ನು ಕಳೆದುಕೊಂಡ ಬಳಿಕ ಆದ ಬದಲಾವಣೆಗಳೇ ಇದೀಗ ಈ ಹಂತಕ್ಕೆ ಅವರನ್ನು ತಂದು ನಿಲ್ಲಿಸಿದೆ ಎಂದೂ ಹೇಳಿಕೊಳ್ಳುತ್ತಾರವರು. ಡಿಗ್ರಿಯಲ್ಲಿ ಒಬ್ಬಳು ಹುಡುಗಿ ಇದ್ದಳು.
ನನ್ನ ಮತ್ತು ಅವಳ ನಡುವೆ ಆರು ವರ್ಷದ ರಿಲೇಷನ್(Relationship) ಇತ್ತು. ಆವತ್ತೆ ನಾನು ಅವಳಿಗೆ ಹೇಳಿದ್ದೆ, ಒಂದು ವೇಳೆ ನೀನು ಬಿಟ್ಟು ಹೋಗುತ್ತಿಯಾ ಎಂದರೆ ನಾನು ಯಾವುದೇ ಕಾರಣಕ್ಕೂ ಕಾರಣ ಕೇಳಲ್ಲ ಎಂದಿದ್ದರಂತೆ.