ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಮೇಘನಾ ರಾಜ್ ತತ್ಸಮ ತದ್ಭವ ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡಲು ನಿರ್ಧರಿಸಿದ್ದರು. ಅದಾದ ಮೇಲೆ ಎರಡು ಮೂರು ಚಿತ್ರಗಳಿಗೆ ಸಹಿ ಮಾಡಿದ್ದಾರೆ.
ರಿಯಾಲಿಟಿ ಶೋ, ಯುಟ್ಯೂಬ್ ಚಾನೆಲ್ ಮತ್ತು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಮೇಘನಾ ರಾಜ್ ತಮ್ಮ ಪತಿ ಮತ್ತು ಮಗ ರಾಯನ್ ನೆನಪಿಸಿಕೊಳ್ಳದ ದಿನವೇ ಇಲ್ಲ. ತಮ್ಮ ಕಷ್ಟದ ದಿನದಲ್ಲಿ ಗರ್ಭದಲ್ಲಿದ್ದ ಮಗು ಹೇಗೆ ಶಕ್ತಿ ಕೊಟ್ಟಿತ್ತು ಎಂದು ಹಂಚಿಕೊಂಡಿದ್ದಾರೆ.
ಪ್ರತಿ ದಿನ ಚಿರು ಜೊತೆ ಮಾತನಾಡುತ್ತೀನಿ. ಮಾತನಾಡುವುದು ಅಂದ್ರೆ ಎದುರಿಗಿರುವ ವ್ಯಕ್ತಿ ಜೊತೆ ನೇರ ನೇರ ಮಾತನಾಡುವ ರೀತಿ ಅಲ್ಲ ನನ್ನ ತಲೆಯಲ್ಲಿ ನನ್ನ ಮನಸ್ಸಿನಲ್ಲಿ ಚಿರುಗೆ ಏನು ಹೇಳಬೇಕು ಅದನ್ನು ಮಾತನಾಡುವ ರೀತಿ ಹೇಳುವೆ.
ಚಿರು ಕೇಳಿಸಿಕೊಳ್ಳುತ್ತಿದ್ದಾರೆ. ಒಂದೊಂದು ಸಲ ಕೋಪ ಬಂದಾಗ ಬೈದಿರುತ್ತೀನಿ ಅದು ಅವರಿಗೆ ಗೊತ್ತಾಗಿರುತ್ತದೆ ಅವರಿಗೆ ಕೇಳಿಸಿರುತ್ತೆ ಅರ್ಥವಾಗುತ್ತದೆ ಅನ್ನೋದು ನನ್ನ ಅನಿಸಿಕೆ.
ಕೂತು ಮಾತನಾಡುವ ರೀತಿ ಅಲ್ಲ ಮನಸ್ಸಿನಲ್ಲಿ ಮಾತನಾಡುವುದು.ನಾಲ್ಕು ತಿಂಗಳ ಅಂತರದಲ್ಲಿ ಮರಣ ಮತ್ತು ಜನನ ನೋಡಿದ್ದೀನಿ ಎಂದು ಮೇಘನಾ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದರು.
ಆ ಸಮಯವನ್ನು ಹೇಗೆ ಎದುರಿಸಿದೆ ಗೊತ್ತಿಲ್ಲ ಆದರೆ ನನಗೆ ಮಗು ಹುಟ್ಟುತ್ತದೆ ನನ್ನ ಎಲ್ಲಾ ಗಮನ ಮಗು ಮೇಲೆ ಇರಬೇಕು ಎಂದು ಮಾತ್ರ ಗೊತ್ತಿತ್ತು.
ಮೆಡಿಕಲ್ ಆಗಿ ಕೆಲವರು ಹೇಳುತ್ತಾರೆ ಅಥವಾ ನನಗೆ ಅನಿಸುತ್ತಿತ್ತೋ ಗೊತ್ತಿಲ್ಲ ಆ ಸಮಯದಲ್ಲಿ ನನಗೆ ಶಕ್ತಿ ಎಲ್ಲಿಂದ ಬಂತು ನನಗೆ ಗೊತ್ತಿಲ್ಲ ಎಂದಿದ್ದರು ಮೇಘನಾ ರಾಜ್.
ಆದರೆ ತಾಯಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ನೋವಿನಲ್ಲಿದ್ದರೆ ಗರ್ಭದಲ್ಲಿರುವ ಮಗು ಒಂದು ವಿಶೇಷ ಹಾರ್ಮೋನ್ ರಿಲೀಸ್ ಮಾಡುತ್ತದೆ ಆ ಹಾರ್ಮೋನ್‌ನಿಂದ ನನಗೆ ಶಕ್ತಿ ಬಂತು.
ಸಿನಿಮಾರಂಗಕ್ಕೆ ನಾನು ಮತ್ತೆ ಬರಬೇಕು ಸಿನಿಮಾ ಮಾಡಬೇಕು ಜೀವನ ಚೆನ್ನಾಗಿ ನಡೆಸಬೇಕು ಅನ್ನೋದಕ್ಕೆ ಶಕ್ತಿ ಕೊಟ್ಟಿದ್ದು ರಾಯನ್' ಎಂದು ಮೇಘನಾ ರಾಜ್ ಹೇಳಿದ್ದರು.