ಸಿಂಹ ಸುಮ್ಮನೆ ಕುಳಿತಿದೆ ಅಂದ್ರೆ ಸುಸ್ತಾಗಿದೆ ಅಂತಲ್ಲ: ಸುದೀಪ್ ಪೋಸ್ಟ್ ಗುಟ್ಟೇನು?

Published : Aug 27, 2026, 02:59 PM IST

ನಟ ಕಿಚ್ಚ ಸುದೀಪ್ ತಮ್ಮ ಹುಟ್ಟುಹಬ್ಬದ ಆಚರಣೆ ಬಗ್ಗೆ ಮಾಹಿತಿ ನೀಡಿದ್ದು, ಅಭಿಮಾನಿಗಳೊಂದಿಗೆ ಇರುವುದಿಲ್ಲ ಎಂದು ತಿಳಿಸಿದ್ದಾರೆ. ಆದರೆ, 'ಸಿಂಹ ಮುಂದಿನ ಬೇಟೆಗೆ ರೆಡಿ ಆಗ್ತಿದೆ' ಎಂಬ ಅವರ ಸಾಲುಗಳು, ಹೊಸ ಬಿಗ್ ಬಜೆಟ್ ಸಿನಿಮಾದ ಸುಳಿವು ನೀಡಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

PREV
15
ಕಿಚ್ಚ ಸುದೀಪ್

ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿಕೊಂಡಿದ್ದು, ಹುಟ್ಟುಹಬ್ಬದ ದಿನ ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುತ್ತಿಲ್ಲ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆದ್ರೆ ಸುದೀರ್ಘವಾದ ಪೋಸ್ಟ್‌ನಲ್ಲಿ ಕೆಲ ಸಾಲು ಹೈಲೈಟ್ ಆಗಿವೆ. ಆ ಸಾಲುಗಳು ಏನು ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.

25
ಮುಂದಿನ ಬೇಟೆಗೆ ರೆಡಿ

ಕಳೆದ 30 ವರ್ಷದಿಂದ ಕನ್ನಡ, ತೆಲಗು, ತಮಿಳು ಮತ್ತು ಹಿಂದಿ ಭಾಷೆಯ ಸಿನಿಮಾಗಳಲ್ಲಿ ಸುದೀಪ್ ಬ್ಯುಸಿಯಾಗಿದ್ದಾರೆ. 30 ವರ್ಷದಿಂದ ತಮಗೆ ಆಶೀರ್ವಾದ ನೀಡಿದ್ದಕ್ಕೆ ಧನ್ಯವಾದ ಸಲ್ಲಿಸಿರುವ ಸುದೀಪ್, ಸಿಂಹ ಸುಮ್ಮನೆ ಕುಳಿತಿದೆ ಎಂದರೆ ಸುಸ್ತಾಗಿದೆ ಅಂತಲ್ಲ. ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ ಎಂದಿದ್ದಾರೆ. ಈ ಸಾಲುಗಳನ್ನು ನೋಡಿದ ಅಭಿಮಾನಿಗಳು, ಮುಂದಿನ ದಿನಗಳಲ್ಲಿ ಸುದೀಪ್ ಬಿಗ್‌ ಪ್ರೊಜೆಕ್ಟ್ ಜೊತೆ ಬರೋ ಸುಳಿವು ನೀಡಿದ್ದಾರೆ ಎಂದು ಡಿಕೋಡ್ ಮಾಡುತ್ತಿದ್ದಾರೆ.

35
ಸ್ಯಾಂಡಲ್‌ವುಡ್

ಇತ್ತೀಚಿನ ದಿನಗಳಲ್ಲಿ ಸ್ಟಾರ್‌ ನಟರ ಸಿನಿಮಾಗಳು ಬರುತ್ತಿಲ್ಲ. ಸ್ಟಾರ್‌ ಕಲಾವಿದರು ನಟನೆಯ ಸಿನಿಮಾಗಳು ವರ್ಷಕ್ಕೆ ಎರಡ್ಮೂರು ಬರಬೇಕು ಎಂಬ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ. ಹೀಗೆ ಸಿನಿಮಾಗಳು ಬಂದ್ರೆ ಮಾತ್ರ ಸ್ಯಾಂಡಲ್‌ವುಡ್ ಉಳಿಯಲಿದೆ ಎಂಬ ಅಭಿಪ್ರಾಯವನ್ನು ಹಲವು ನಿರ್ಮಾಪಕರು ಮತ್ತು ನಿರ್ದೇಶಕರು ವ್ಯಕ್ತಪಡಿಸಿದ್ದಾರೆ. ಇದೀಗ ಸುದೀಪ್ ಅವರ ಈ ಸಾಲು ಚರ್ಚೆಗೆ ಗ್ರಾಸವಾಗುವ ಸಾಧ್ಯತೆಗಳು ಕಾಣಿಸುತ್ತಿವೆ.

45
ಬಿಗ್‌ಬಾಸ್ ಸೀಸನ್ 13

ಇತ್ತೀಚೆಗೆ ಸುದೀಪ್ ಅವರು ಕನ್ನಡದ ಬಿಗ್‌ಬಾಸ್ ಸೀಸನ್ 13ರ ಕುರಿತು ಮಹತ್ವದ ಅಪ್‌ಡೇಟ್ ನೀಡಿದ್ದರು. ಇದೇ ಸೆಪ್ಟೆಂಬರ್ 6ರಂದು ಅದ್ಧೂರಿಯಾಗಿ ಬಿಗ್‌ಬಾಸ್ ಸೀಸನ್ 13 ಲಾಂಚ್ ಆಗಲಿದೆ. ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದ ಅಭಿಮಾನಿಗಳು, ನಿಮ್ಮ ಸಿನಿಮಾಗಾಗಿ ಕಾಯುತ್ತಿದ್ದೇವೆ ಎಂದು ಕಮೆಂಟ್ ಮಾಡಿದ್ದರು. ಸುದೀಪ್ ನಟನೆಯ ಪ್ಯಾನ್ ಇಂಡಿಯಾ ಕಲ್ಪನೆಯ ಸಿನಿಮಾ ನೋಡಲು ಅಭಿಮಾನಿಗಳು ಇಂಗಿತ ವ್ಯಕ್ತಪಡಿಸಿದ್ದರು.

55
ಸುದೀಪ್ ಸಿನಿಮಾಗಾಗಿ ಕಾಯ್ತಿರೋ ಅಭಿಮಾನಿಗಳು

ಇದೀಗ ಸಿಂಹದ ಸಾಲುಗಳ ಮೂಲಕ ಬಿಗ್‌ ಪ್ರಾಜೆಕ್ಟ್ ಬರೋ ಸುಳಿವು ನೀಡಿದ್ದಾರೆ ಎಂದು ಕಿಚ್ಚನ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ ಡಿಸೆಂಬರ್ 2024ರಲ್ಲಿ ಬಿಡುಗಡೆಯಾಗಿತ್ತು. ಒಂದೂವರೆ ವರ್ಷದಿಂದ ಸುದೀಪ್ ಅವರ ಸಿನಿಮಾ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories