ನಾಚಿಕೆಯ ನೋಟ, ಮುದ್ದಾದ ನಗು: ಸೀರೆಯಲ್ಲಿ ಆಶಿಕಾ ರಂಗನಾಥ್ ಸೌಂದರ್ಯಕ್ಕೆ ನೆಟ್ಟಿಗರು ಫಿದಾ

Published : Aug 24, 2026, 11:36 PM IST

Kannada Actress Ashika Ranganath ತಮ್ಮ ಹೊಸ ಫೋಟೋಶೂಟ್ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಸಾಂಪ್ರದಾಯಿಕ ಸೀರೆಯುಟ್ಟರೂ ಅದಕ್ಕೆ ಮಾಡರ್ನ್ ಟಚ್ ನೀಡಿರುವ ನಟಿಯ ಸ್ಟೈಲಿಶ್ ಲುಕ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

PREV
16
ಫ್ಲೋರಲ್ ಸೀರೆಯಲ್ಲಿ ಆಶಿಕಾ ಕಮಾಲ್

ಫ್ಲೋರಲ್ ಪ್ರಿಂಟ್‌ನ ಸುಂದರ ಸೀರೆಯಲ್ಲಿ ಕಾಣಿಸಿಕೊಂಡಿರುವ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್, ಕಿಟಕಿ ಬಳಿ ನಿಂತು ವಿಭಿನ್ನ ಭಂಗಿಗಳಲ್ಲಿ ಪೋಸ್ ನೀಡಿದ್ದಾರೆ. ಸರಳತೆ ಹಾಗೂ ಸೌಂದರ್ಯದ ಕಾಂಬಿನೇಷನ್‌ನಂತಿರುವ ಈ ಫೋಟೋಶೂಟ್‌ನಲ್ಲಿ ನಟಿಯ ಲುಕ್‌ ಗಮನ ಸೆಳೆಯುವಂತಿದೆ.

26
ಸೀರೆಯುಟ್ಟು ನಾಚಿಕೆಯ ನೋಟ!

ಸೀರೆಯುಟ್ಟು ಕೆಳಗೆ ನೋಡುತ್ತಾ ನಾಚಿಕೆಯ ನಗುವಿನೊಂದಿಗೆ ಆಶಿಕಾ ನೀಡಿರುವ ಪೋಸ್‌ ಅಭಿಮಾನಿಗಳ ಮನ ಗೆದ್ದಿದೆ. ಯಾವುದೇ ಅತಿಯಾದ ಗ್ಲಾಮರ್ ಇಲ್ಲದೆ ನ್ಯಾಚುರಲ್ ಆಗಿ ಕಾಣಿಸಿಕೊಂಡಿರುವ ನಟಿಯ ಈ ಲುಕ್‌ಗೆ ನೆಟ್ಟಿಗರು ಫಿದಾ ಆಗಿದ್ದಾರೆ.

36
ಟ್ರೆಡಿಷನಲ್ ಲುಕ್‌ಗೆ ಮಾಡರ್ನ್ ಟಚ್

ಸಾಂಪ್ರದಾಯಿಕ ಸೀರೆಗೆ ಬ್ಯಾಕ್‌ಲೆಸ್ ಹಾಗೂ ಸ್ಲೀವ್‌ಲೆಸ್ ಬ್ಲೌಸ್‌ ಆಯ್ಕೆ ಮಾಡಿಕೊಂಡಿರುವ ಆಶಿಕಾ, ತಮ್ಮದೇ ಆದ ಮಾಡರ್ನ್ ಸ್ಟೈಲ್‌ ಮೂಲಕ ಲುಕ್‌ಗೆ ಗ್ಲಾಮರಸ್ ಟಚ್ ನೀಡಿದ್ದಾರೆ. ಸೀರೆ ಮತ್ತು ಮಾಡರ್ನ್ ಬ್ಲೌಸ್‌ನ ಕಾಂಬಿನೇಷನ್‌ ನಟಿಯ ಸ್ಟೈಲ್ ಸೆನ್ಸ್‌ಗೆ ಮತ್ತೊಂದು ಉದಾಹರಣೆಯಾಗಿದೆ.

46
ನಗುವಿನಲ್ಲೇ ಗೆದ್ದ ಆಶಿಕಾ

ಮತ್ತೊಂದು ಫೋಟೋದಲ್ಲಿ ಕೈಗಳನ್ನು ಚಾಚಿ ಮನಸಾರೆ ನಗುತ್ತಾ ಪೋಸ್ ನೀಡಿರುವ ಆಶಿಕಾ, ತಮ್ಮ ಖುಷಿಯ ನಗುವಿನಿಂದಲೇ ಫೋಟೋಗೆ ಮತ್ತಷ್ಟು ಕಳೆ ತಂದಿದ್ದಾರೆ. ನಟಿಯ ಈ ನ್ಯಾಚುರಲ್ ಎಕ್ಸ್‌ಪ್ರೆಶನ್‌ಗಳು ಫೋಟೋಶೂಟ್‌ನ ಹೈಲೈಟ್ ಆಗಿವೆ.

56
ಬಳೆ, ಜುಮುಕಿಯಿಂದ ಹೆಚ್ಚಿದ ಸೀರೆ ಸೊಬಗು

ಕೈಗಳಿಗೆ ಬಣ್ಣಬಣ್ಣದ ಬಳೆಗಳು ಹಾಗೂ ಕಿವಿಗೆ ಜುಮುಕಿ ಧರಿಸಿರುವ ಆಶಿಕಾ, ತಮ್ಮ ಸಾಂಪ್ರದಾಯಿಕ ಲುಕ್‌ಗೆ ಮತ್ತಷ್ಟು ಮೆರುಗು ನೀಡಿದ್ದಾರೆ. ಸಿಂಪಲ್ ಮೇಕಪ್‌ನೊಂದಿಗೆ ಕಾಣಿಸಿಕೊಂಡಿರುವ ಅವರು, ‘ಕಡಿಮೆ ಅಲಂಕಾರದಲ್ಲೂ ಹೆಚ್ಚು ಸೌಂದರ್ಯ’ ಎಂಬಂತೆ ಕಾಣಿಸಿಕೊಂಡಿದ್ದಾರೆ.

66
ಆಶಿಕಾ ಲುಕ್‌ಗೆ ನೆಟ್ಟಿಗರು ಫಿದಾ

ಆಶಿಕಾ ರಂಗನಾಥ್‌ ಅವರ ಈ ಹೊಸ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದ್ದು, ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್‌ಗಳ ಮೂಲಕ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಸೀರೆ, ನಗು ಹಾಗೂ ಎಲಿಗಂಟ್ ಲುಕ್‌ನಿಂದ ಮತ್ತೊಮ್ಮೆ ಸದ್ದು ಮಾಡಿರುವ ಆಶಿಕಾ ಅವರ ಫೋಟೋಶೂಟ್ ಸದ್ಯ ನೆಟ್ಟಿಗರ ಗಮನದ ಕೇಂದ್ರವಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories