‘ಕವಲುದಾರಿ, ಆಪರೇಶನ್ ಅಲುಮೇಲಮ್ಮದಂಥಾ ಸಿನಿಮಾಗಳನ್ನು ನೋಡಿ ರಿಷಿ ಸರ್ ಜೊತೆ ನಾಯಕಿಯಾಗಿ ನಟಿಸುವ ಕನಸು ಕಾಣುತ್ತಿದ್ದೆ. ಪ್ರಶಾಂತ್ ರಾಜಪ್ಪ ಅವರ ಪ್ರಾಜೆಕ್ಟ್ ಅನ್ನು ಒಪ್ಪಿಕೊಳ್ಳಲು ಮೊದಲ ಕಾರಣ ರಿಷಿ ಸರ್ ಹೀರೋ ಅನ್ನೋದು.’
25
‘ಮನದ ಕಡಲು’ ಸಿನಿಮಾದ ನಾಯಕ ನಟಿ ಅಂಜಲಿ ಅನೀಶ್ ಮಾತುಗಳಿವು. ನಿರ್ದೇಶಕಿಯಾಗುವ ಕನಸು ಹೊತ್ತು ಇಂಡಸ್ಟ್ರಿಗೆ ಬಂದ ಅಂಜಲಿ ಇದೀಗ ಪ್ರಶಾಂತ್ ರಾಜಪ್ಪ ನಿರ್ದೇಶನದ ಸಿನಿಮಾದಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
35
‘ನಾನು ಹೈಟ್ ಆಗಿರೋ ಹುಡುಗಿ. ನಂಗೆ ಹೀರೋ ಆಗೋರು ಇನ್ನಷ್ಟು ಎತ್ತರ, ಅಮಿತಾಬ್ ಬಚ್ಚನ್ ಥರ ಇರ್ಬೇಕು ಅಂತಾಸೆ. ರಿಷಿ ಹಾಗೆ ಇದ್ದಾರೆ. ಇದರ ಜೊತೆಗೆ ನನಗೆ ಪಕ್ಕಾ ಕಮರ್ಷಿಯಲ್ ಸಿನಿಮಾಗಳಲ್ಲಿ ದೊಡ್ಡ ದೊಡ್ಡ ಸ್ಟಾರ್‌ಗಳ ಜೊತೆಗೆ ನಟಿಸಬೇಕು ಅನ್ನೋ ಕನಸೂ ಇದೆ’ ಎಂದಿದ್ದಾರೆ.
ಕಮರ್ಷಿಯಲ್ ಎಂಟರ್‌ಟೈನ್‌ಮೆಂಟ್ ಹಾಗೂ ಎಮೋಷನ್ ಸಿನಿಮಾಗಳು ಇಷ್ಟ. ನಾವು ಸಿನಿಮಾ ನೋಡೋದೇ ನಮ್ಮ ಲೈಫ್‌ನಿಂದ ಒಂದಿಷ್ಟು ಸಮಯ ಎಸ್ಕೇಪ್ ಆಗಲು. ಹೀಗಾಗಿ ಮನರಂಜನೆ ಮುಖ್ಯ ಕೂಡಾ ಎಂದಿದ್ದಾರೆ.
55
‘ಇನ್ನೆರಡು ವಾರದಲ್ಲಿ ಸಿನಿಮಾದ ಟೈಟಲ್ ಲಾಂಚ್ ಮಾಡ್ತೀವಿ. ಒಂದೊಳ್ಳೆ ಟೈಟಲ್ ಫೈನಲ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಇನ್ನೊಂದು ಕಡೆ ಶೂಟಿಂಗ್ ಮುಕ್ತಾಯದ ಹಂತ ತಲುಪುತ್ತಿದೆ. ಇದೊಂದು ಕಂಪ್ಲೀಟ್ ಮನರಂಜನಾ ಸಿನಿಮಾ’ ಎಂದು ರಿಷಿ ಹೇಳಿದ್ದಾರೆ.