ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ವರ್‌ಲಾಲ್ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ‘ಡೆವಿಲ್’ ಸಿನಿಮಾದಲ್ಲಿನ ದರ್ಶನ್ ಈ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ.
26
1981ರಲ್ಲಿ ತೆರೆಕಂಡ ‘ಅಂತ’ ಸಿನಿಮಾದಲ್ಲಿ ಅಂಬರೀಶ್ ಕನ್ವರ್‌ಲಾಲ್ ಪಾತ್ರದಲ್ಲಿ ಮಿಂಚಿದ್ದರು. ಇಂದಿಗೂ ಚಿತ್ರರಂಗದಲ್ಲಿ ಕನ್ವರ್‌ಲಾಲ್ ಪಾತ್ರಕ್ಕೆ ವಿಶಿಷ್ಠ ಐಡೆಂಟಿಟಿ ಇದೆ. ಇದೀಗ ದರ್ಶನ್ ಅದೇ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ‘ಡೆವಿಲ್’ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿಸಿದೆ.
36
ಥೇಟ್ ಕನ್ವರ್ ಲಾಲ್ ಪಾತ್ರದಲ್ಲಿನ ಅಂಬರೀಶ್ ಅವರ ರೀತಿಯೇ ಗಡ್ಡ ಬಿಟ್ಟು, ಕೈಯಲ್ಲಿ ಸಿಗರೇಟು ಹಿಡಿದು, ಪೋಸ್ಟರ್‌ನಲ್ಲಿ ದರ್ಶನ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.
ʻದಿ ಡೆವಿಲ್ʼ ಸಿನಿಮಾದ ಮಾತಿನ ಭಾಗ ಸಂಪೂರ್ಣವಾಗಿ ಮುಗಿದಿದೆ ಎಂದು ಚಿತ್ರತಂಡ ಅನೌನ್ಸ್ ಮಾಡಿದೆ. ಉಳಿದ ಕೆಲಸಗಳನ್ನೆಲ್ಲಾ ಮುಗಿಸಿ ಆದಷ್ಟು ಬೇಗ ತೆರೆಗೆ ಬರಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.
56
ಇನ್ನೊಂದೆಡೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಆಗಿರುವ ದರ್ಶನ್‌ಗೆ ವಿದೇಶದಲ್ಲಿ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಲು ಕೋರ್ಟ್ ಅನುಮತಿ ನೀಡಿದೆ. ಸದ್ಯ ‘ಡೆವಿಲ್’ ಟೀಮ್ ಯುರೋಪ್ ಹಾಗೂ ದುಬೈನಲ್ಲಿ ಜೂ.25ರವರೆಗೆ ಚಿತ್ರೀಕರಣ ನಡೆಸಲಿದೆ.
66
ಜೈ ಮಾತಾ ಕಂಬೈನ್ ಪ್ರೊಡಕ್ಷನ್ ಅಡಿ ನಿರ್ಮಾಣವಾಗುತ್ತಿರುವ ದಿ ಡೆವಿಲ್ ಸಿನಿಮಾವನ್ನು ಪ್ರಕಾಶ್ ವೀರ್ ನಿರ್ದೇಶನ ಮಾಡುತ್ತಿದ್ದಾರೆ ಇನ್ನು. ʻಬೆಂಗಳೂರು, ಮೈಸೂರು, ರಾಜಸ್ಥಾನ ಸೇರಿದಂತೆ ಹಲವೆಡೆ ʻದಿ ಡೆವಿಲ್ʼ ಸಿನಿಮಾದ ಶೂಟಿಂಗ್ ಮಾಡಲಾಗಿದೆ.