Actor Rakshit Shetty New Home: ಕಳೆದ ಮೂರು ವರ್ಷಗಳ ಹಿಂದೆಯೇ ರಕ್ಷಿತ್ ಶೆಟ್ಟಿ ಅವರು 25 ಕೋಟಿ ರೂಪಾಯಿ ವೆಚ್ಚದಲ್ಲಿ ಮನೆ ಕಟ್ಟಿಸುತ್ತಿದ್ದರು ಎಂದು ವರದಿಯಾಗಿತ್ತು. ಆ ಮನೆಯ ವಿಡಿಯೋ, ಫೋಟೋಗಳು ವೈರಲ್ ಆಗಿದ್ದವು. ಈಗ ಆ ಮನೆ ಸ್ಥಿತಿ ಏನಾಗಿದೆ? ಭೂತಬಂಗಲೆ ಆಗಿದ್ಯಾ?
ರಕ್ಷಿತ್ ಶೆಟ್ಟಿ ಅವರು ಕಳೆದ ಮೂರು ವರ್ಷಗಳಿಂದ ತೆರೆ ಮೇಲೆ ಕಾಣಿಸಿಕೊಂಡಿಲ್ಲ, 2023ರಲ್ಲಿ ಅವರ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ತೆರೆ ಕಂಡಿತ್ತು. ಮೂರು ವರ್ಷಗಳ ಬಳಿಕ ಅವರು ಕನ್ನಡಪ್ರಭಕ್ಕೆ ಒಂದು ಸಂದರ್ಶನ ನೀಡಿದ್ದರು.
26
ರಶ್ಮಿಕಾ ಶೆಟ್ಟಿ ಜೊತೆಗೆ ಬ್ರೇಕಪ್
ನಟಿ ರಶ್ಮಿಕಾ ಮಂದಣ್ಣ ಜೊತೆಗೆ ರಕ್ಷಿತ್ ಶೆಟ್ಟಿ ಎಂಗೇಜ್‌ಮೆಂಟ್ ಆಗಿದ್ದು, ಬ್ರೇಕಪ್ ಆಗಿದ್ದು ಎಲ್ಲರಿಗೂ ಗೊತ್ತಿರುವುದೇ. ಈಗ ವಿಜಯ್ ದೇವರಕೊಂಡ ಜೊತೆಗೆ ರಶ್ಮಿಕಾ ಮಂದಣ್ಣ ಮದುವೆ ಆಗುತ್ತಿದ್ದಂತೆ ಒಂದೊಂದು ಗಾಸಿಪ್‌ಗಳು ಸೃಷ್ಟಿ ಆಗಿವೆ.
36
25 ಕೋಟಿ ರೂಪಾಯಿ ಮನೆ
ರಶ್ಮಿಕಾ ಮಂದಣ್ಣಗೋಸ್ಕರ ರಕ್ಷಿತ್ ಶೆಟ್ಟಿ ಅವರು 25 ಕೋಟಿ ರೂಪಾಯಿ ವೆಚ್ಚದಲ್ಲಿ ಮನೆ ಕಟ್ಟಿಸುತ್ತಿದ್ದರು, ಬ್ರೇಕಪ್ ಆಗುತ್ತಿದ್ದಂತೆ ಆ ಮನೆ ಕೆಲಸ ಹಾಗೆಯೇ ಉಳಿದಿದೆ. ಅದು ಭೂತ ಬಂಗಲೆ ಆಗಿದೆ ಎಂಬ ಪೋಸ್ಟ್‌ಗಳು ಹರಿದಾಡುತ್ತಿವೆ.
ಅಸಲಿಗೆ ಈಗ ವೈರಲ್ ಆಗ್ತಿರೋದು ಮೂರು ವರ್ಷಗಳ ಹಿಂದಿನ ಮನೆಯ ಫೋಟೋ. ಆ ಮನೆಯನ್ನು ರಕ್ಷಿತ್ ಶೆಟ್ಟಿ ಅವರು ರಶ್ಮಿಕಾಗೋಸ್ಕರ ಕಟ್ಟಿಸುತ್ತಿದ್ದೇನೆ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ.
56
ಗಾಸಿಪ್‌ಗೋಸ್ಕರ ಮಾಡ್ತಾರೆ
ಅಂದಹಾಗೆ ಈಗ ಆ ಮನೆ ಹೇಗಿದೆ ಎಂಬ ಬಗ್ಗೆಯೂ ಮಾಹಿತಿ ಇಲ್ಲ, ಯಾವ ಕಾರಣಕ್ಕೆ ಆ ಮನೆಯ ಕೆಲಸವನ್ನು ನಿಲ್ಲಿಸಿದ್ದಾರೆ ಎಂದು ಕೂಡ ಗೊತ್ತಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್‌ಗೋಸ್ಕರ ಕೆಲ ಗಾಸಿಪ್‌ಗಳು ಹರಡುತ್ತಿರುತ್ತವೆ.
66
ಮನೆ ಬಗ್ಗೆ ರಕ್ಷಿತ್ ಢನ
2023 ರಲ್ಲಿ ಮಾಧ್ಯಮದ ಜೊತೆ ಮಾತನಾಡಿದ್ದ ರಕ್ಷಿತ್ ಶೆಟ್ಟಿ ಅವರು, ಮುಂದಿನ ವರ್ಷದೊಳಗಡೆ ಮನೆ ಮುಗಿಸ್ತೀನಿ ಎಂದು ಹೇಳಿದ್ದಾರೆ. ಥಿಯೇಟರ್‌ನಿಂದ ವರ್ಕೌಟ್, ಡಬ್ಬಿಂಗ್ ಎಂದು ಕಲಾವಿದನಾಗಿ ನನಗೆ ಯಾವ ರೀತಿ ಇರಬೇಕೋ, ಆ ರೀತಿಯ ಸೆಟಪ್ ಮಾಡಿಕೊಂಡಿದ್ದೀನಿ ಎಂದು ಹೇಳಿದ್ದಾರೆ. ರಿಚರ್ಡ್ ಆಂಟನಿ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನು ನನ್ನ ಮನೆಯಲ್ಲಿಯೇ ಮಾಡಬೇಕು ಎಂದು ರಕ್ಷಿತ್ ಶೆಟ್ಟಿ ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.