ರವಿಚಂದ್ರನ್​ ಮೇಲೆ ರೇ*ಪ್​ ಆರೋಪ: 34 ವರ್ಷಗಳ ಬಳಿಕ 'ಹಳ್ಳಿಮೇಷ್ಟ್ರು' ಬೆಡಗಿ ಬಿಂದಿಯಾ ಹೇಳಿದ್ದೇನು

Published : May 29, 2026, 02:17 PM IST

'ಹಳ್ಳಿಮೇಷ್ಟ್ರು' ಚಿತ್ರದ ನಾಯಕಿ ಬಿಂದಿಯಾ, ನಟ ರವಿಚಂದ್ರನ್ ಮೇಲೆ ಗಂಭೀರ ಆರೋಪ ಮಾಡಿದ್ದರು, ಇದು ಮಾನನಷ್ಟ ಮೊಕದ್ದಮೆಗೆ ಕಾರಣವಾಗಿತ್ತು. ಇದೀಗ 34 ವರ್ಷಗಳ ನಂತರ, ತಮ್ಮ ಹೇಳಿಕೆಯನ್ನು ಮಾಧ್ಯಮಗಳು ತಿರುಚಿದ್ದವು ಎಂದು ಹೇಳಿ, ಬಿಂದಿಯಾ ಬಹಿರಂಗವಾಗಿ ಕ್ಷಮೆ ಕೋರಿದ್ದಾರೆ.

PREV
16
ಹಳ್ಳಿಮೇಷ್ಟ್ರು ಸಿನಿಮಾ

ಕ್ರೇಜಿಸ್ಟಾರ್​ ರವಿಚಂದ್ರನ್​ ಅವರ ಜೊತೆ 1992ರಲ್ಲಿ ಬಿಡುಗಡೆಯಾದ ಹಳ್ಳಿಮೇಷ್ಟ್ರು ಚಿತ್ರದಲ್ಲಿ ಮಿಂಚಿದ್ದ ಬಿಂದಿಯಾ ಉರ್ಫ್​ ಫರ್ಹೀನ್ ಬಾಲಿವುಡ್, ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡಿದರು. ಮಾಧುರಿ ದೀಕ್ಷಿತ್ ಅವರನ್ನು ಹೋಲುವ ಅವರ ಗಮನಾರ್ಹ ಲುಕ್ಕು ಅಪಾರ ಅಭಿಮಾನಿಗಳನ್ನು ಗಳಿಸುವಂತೆ ಮಾಡಿತು. ಅವರ ಮೊದಲ ಚಿತ್ರದ ನಂತರ, ಫರ್ಹೀನ್ ಜನಪ್ರಿಯತೆ ಗಳಿಸಿದರು ಮತ್ತು ಮಾಧ್ಯಮಗಳಲ್ಲಿ 'ಮಾಧುರಿ ದೀಕ್ಷಿತ್ ಅವರ ನಂ.2' ಆಗಿದ್ದರು. ಅಂಥ ಬಿಂದಿಯಾ ರವಿಚಂದ್ರನ್​ ಅವರ ಮೇಲೆಯೇ ರೇ*ಪ್ ಕೇಸ್​ ಆರೋಪ ಮಾಡಿಬಿಟ್ಟಿದ್ದರು. ​

26
ನಾಯಕಿ ಬಿಂದಿಯಾ ಗಲಾಟೆ

ಹಳ್ಳಿಮೇಷ್ಟ್ರು ಸಿನಿಮಾದಲ್ಲಿ ಪರಿಮಳಾ ಪಾತ್ರದಲ್ಲಿ ಹೀರೋಯಿನ್​ ಆಗಿದ್ದ ಬಿಂದಿಯಾ, ಈ ಚಿತ್ರದಿಂದ ರಾತ್ರೋರಾತ್ರಿ ದಕ್ಷಿಣದಲ್ಲಿಯೂ ಸ್ಟಾರ್​ ಆದರು. ಈ ಚಿತ್ರ ಸಕತ್​ ಹಿಟ್​ ಆಗಿತ್ತು. ತಮಿಳಿನಲ್ಲಿಯೂ ಡಬ್​ ಆದ ಚಿತ್ರವಿದು. ಆದರೆ, ಈ ಸಮಯದಲ್ಲಿಯೇ ಬಿಂದಿಯಾ ರವಿಚಂದ್ರನ್​ ತಮ್ಮ ಮೇಲೆ ಅತ್ಯಾ*ಚಾರ ಮಾಡಲು ಟ್ರೈಮಾಡಿದ್ರು ಎಂದು ಹೇಳಿ ಹಲ್​ಚಲ್​ ಸೃಷ್ಟಿಸಿದ್ದರು.

36
ರವಿಚಂದ್ರನ್​ ಮೇಲೆ ರೇ*ಪ್​ ಆರೋಪ

ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಈ ರೀತಿ ಹೇಳಿದ್ದ ನಟಿಯ ಮಾತಿಗೆ ರವಿಚಂದ್ರನ್​ ಶಾಕ್​ ಆಗಿಹೋಗಿದ್ದರು. ಇದೇ ಕಾರಣಕ್ಕೆ ಅವರು ನಟಿಯ ವಿರುದ್ಧ ಕೇಸ್​​ ಹಾಕಿದ್ದರು. ತಮ್ಮ ಮೇಲೆ ಮಾಡಿರುವ ಆರೋಪವನ್ನ ಸಾಬೀತು ಪಡಿಸುವಂತೆ ಸವಾಲು ಹಾಕಿ ಬಿಂದಿಯಾ ವಿರುದ್ಧ ರವಿಚಂದ್ರನ್‌ ಒಂದು ರೂಪಾಯಿಗೆ ಮಾನನಷ್ಟ ಮೊಕದ್ದಮೆ ಹಾಕಿದ್ದು ಆಗ ಭಾರಿ ಸದ್ದು ಮಾಡಿತ್ತು. ಆಗ ನಟಿ ವಿಚಾರಣೆ ವೇಳೆ ನಾನು ಹೇಳಿದ್ದೇ ಬೇರೆ, ಮಾಧ್ಯಮಗಳಲ್ಲಿ ಬಂದಿದ್ದೆ ಬೇರೆ, ನನ್ನ ಮೇಲೆ ಹೀಗೆಲ್ಲಾ ನಟ ಮಾಡಿಲ್ಲ ಎಂದಿದ್ದರು. ಆ ವಿಷ್ಯ ಆಮೇಲೆ ಅಲ್ಲಿಗೇ ತಣ್ಣಗಾಗಿತ್ತು.

46
34 ವರ್ಷಗಳ ಬಳಿಕ ಕ್ಷಮೆ

ಘಟನೆ ನಡೆದು ಈಗ 34 ವರ್ಷವಾಗಿದೆ. ಇದೀಗ ಮತ್ತೊಮ್ಮೆ ನಟಿ ಬಿಂದಿಯಾ ಬಹಿರಂಗವಾಗಿ ಕ್ಷಮೆ ಕೋರಿದ್ದಾರೆ. ತಾವು ಅಂದು ಮಾಡಿದ್ದು ತಪ್ಪು ಎಂದು ನಟ, ನಿರ್ದೇಶಕ ರಘುರಾಮ್‌ ಅವರ ಯೂಟ್ಯೂಬ್‌ ಚಾನೆಲ್‌ನಲ್ಲಿ ಕಣ್ಣೀರು ಹಾಕಿದ್ದಾರೆ ಬಿಂದಿಯಾ. ನಾನು ‘‘ಜಾನ್ ತೇರೆ ನಾಮ್’ ಸಿನಿಮಾದಲ್ಲಿ ನಟಿಸಿದ್ದೆ. ಅದು ಸೂಪರ್​ ಹಿಟ್​ ಅಗಿತ್ತು. ಆಗ ರವಿ ಸರ್‌ ಬಾಂಬೆಯಲ್ಲಿದ್ದರು. ‘ಹಳ್ಳಿಮೇಷ್ಟ್ರು’ ಸಿನಿಮಾಗೆ ನಾಯಕಿಗಾಗಿ ಹುಡುಕಾಟ ನಡೆಸುತ್ತಿದ್ದರು. ನನ್ನನ್ನು ಆಯ್ಕೆ ಮಾಡಲಾಗಿತ್ತು ಎನ್ನುತ್ತ, ರೇ*ಪ್ ಬಗ್ಗೆ ನಾನು ಹೇಳಲಿಲ್ಲ. ನಾನು ಹೇಳಿದ್ದೇ ಒಂದು, ಅವರು ಬರೆದದ್ದೇ ಇನ್ನೊಂದು ಎಂದು ಕ್ಷಮೆ ಕೋರಿ ಕಣ್ಣೀರಾಗಿದ್ದಾರೆ.

56
ನಾನು ಹೇಳಿದ್ದೇ ಒಂದು

ನನ್ನ ಹೇಳಿಕೆಯನ್ನ ಮ್ಯಾಗಝೀನ್‌ನವರು ತಿರುಚಿದ್ದರು. ಇದರಿಂದ ರವಿ ಸರ್‌ಗೆ ಬಂದ ಇಂಪ್ರೆಷನ್ ಸಹ ಕೆಟ್ಟದಾಗಿತ್ತು. ಇದು ನನ್ನ ತಪ್ಪು ಖಂಡಿತ ಅಲ್ಲ.. ರವಿಚಂದ್ರನ್ ಸರ್ ಬಗ್ಗೆ ನಾನು ಯಾವುದೇ ರೀತಿಯ ತಪ್ಪು ಹೇಳಿಕೆ ನೀಡಿರಲಿಲ್ಲ. ಐ ಆಮ್ ಸಾರಿ ಎಲ್ಲರಿಗೂ’’ ಎಂದಿದ್ದಾರೆ ನಟಿ.

66
ನಟಿಯ ಕುರಿತು

ಫರ್ಹೀನ್ 90 ರ ದಶಕದ ಅನೇಕ ಪ್ರಮುಖ ನಾಯಕರೊಂದಿಗೆ ಕೆಲಸ ಮಾಡಿದರು, ಉದಾಹರಣೆಗೆ ದಿಲ್ ಕಿ ಬಾಜಿ, ಸೈನಿಕ್ ಮತ್ತು ನಜರ್ ಕೆ ಸಾಮ್ನೆ, ತಹ್ಕಿಕಾತ್‌ನಲ್ಲಿ ಜೀತೇಂದ್ರ, ಜಾನ್ ಸೆ ಪ್ಯಾರಾದಲ್ಲಿ ಗೋವಿಂದ ಮತ್ತು ಇತರ ಅನೇಕರು. ಬಾಲಿವುಡ್‌ನಲ್ಲಿ ಮಾತ್ರವಲ್ಲದೆ, ಫರ್ಹೀನ್ ದಕ್ಷಿಣ ಭಾರತೀಯ ಚಲನಚಿತ್ರಗಳಲ್ಲಿಯೂ ಜನಪ್ರಿಯತೆಯನ್ನು ಗಳಿಸಿದರು. 17 ಚಿತ್ರಗಳ ನಂತರ, ಫರ್ಹೀನ್ ನಟನೆಯನ್ನು ತೊರೆದು ಭಾರತೀಯ ಮಾಜಿ ಕ್ರಿಕೆಟಿಗ ಮನೋಜ್ ಪ್ರಭಾಕರ್ ಅವರನ್ನು ವಿವಾಹವಾದರು. ತನ್ನ ಪತಿ ಮತ್ತು ಮಕ್ಕಳಿಗಾಗಿ ತನ್ನ ಸಮಯವನ್ನು ಮೀಸಲಿಡಲು ಗ್ಲಾಮರ್ ಜಗತ್ತನ್ನು ತೊರೆಯಲು ನಿರ್ಧರಿಸಿದಾಗ ಅವರು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories