ನಟನಾಗಿ ಕನ್ನಡ ಚಿತ್ರರಂಗದಲ್ಲಿ ಮಿಂಚಿದ ಸ್ಟಾರ್ ನಟರಲ್ಲಿ ಹಲವಾರು ಜನ, ನಾಯಕನಾಗಿ ಗೆದ್ದ ಬಳಿಕ, ಸಿನಿಮಾ ನಿರ್ದೇಶನಕ್ಕೆ ಇಳಿದು, ಮೊದಲ ಸಿನಿಮಾ ಮೂಲಕವೇ ಗೆದ್ದಿದ್ದಾರೆ. ಶಂಕರ್ ನಾಗ್ ಅವರಿಂದ ಹಿಡಿದು, ದುನಿಯಾ ವಿಜಯ್ ವರೆಗೂ ಮೊದಲ ಸಿನಿಮಾ ನಿರ್ದೇಶನದ ಮೂಲಕವೇ ಗೆದ್ದ ನಟರಿವರು.
ರಂಗಭೂಮಿ ಕಲಾವಿದರಾಗಿರುವ ಶಂಕರ್ ನಾಗ್, ನಾಯಕನಾಗಿ ತಮ್ಮ ನಟನೆಯ ಮೂಲಕ ಭಾರಿ ಪ್ರಮಾಣದಲ್ಲಿ ಜನಮನ್ನಣೆ ಪಡೆದರು. ಬಳಿಕ ಶಂಕರ್ ನಾಗ್ ನಿರ್ದೇಶನಕ್ಕೆ ಕಾಲಿಟ್ಟು 'ಮಿಂಚಿನ’ ಓಟ ಸಿನಿಮಾ ನಿರ್ದೇಶನ ಮಾಡಿ ಯಶಸ್ಸು ಪಡೆದರು.
27
ವಿ ರವಿಚಂದ್ರನ್ - ಪ್ರೇಮಲೋಕ
ಕನ್ನಡ ಚಿತ್ರರಂಗದ ಲವರ್ ಬಾಯ್ ಆಗಿದ್ದ ನಟ ವಿ ರವಿಚಂದ್ರನ್. ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದ ಸಮಯದಲ್ಲಿ ತಾವು ನಟನೆ ಮಾತ್ರವಲ್ಲ್ ನಿರ್ದೇಶನಕ್ಕೂ ಸೈ ಎನ್ನುತ್ತಾ ‘ಪ್ರೇಮಲೋಕ’ ಸಿನಿಮಾ ನಿರ್ದೇಶನ ಮಾಡಿದರು. ಈ ಸಿನಿ ರಸಿಕರಿಗೆ ಫೇವರಿಟ್ ಫಿಲಂ.
37
ರಮೇಶ್ ಅರವಿಂದ್ -ರಾಮ ಶಾಮ ಭಾಮ
ಕನ್ನಡದ ಎವರ್ ಗ್ರೀನ್ ನಟರಲ್ಲಿ ರಮೇಶ್ ಅರವಿಂದ್ ಒಬ್ಬರು. ತಮ್ಮ ಪ್ರೇಮಕಥೆ, ತ್ಯಾಗರಾಜರಾಗಿ ಗುರುತಿಸಿಕೊಂಡ ರಮೇಶ್, ರಾಮ ಶಾಮ ಭಾಮ ಸಿನಿಮಾ ಮೂಲಕ ನಿರ್ದೇಶಕರಾಗಿ ಜನರು ಹೊಟ್ಟೆ ಹುಣ್ಣಾಗುವಂತೆ ನಗುವಂತೆ ಮಾಡಿ ಗೆದ್ದರು.
ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದ ರಿಷಬ್ ಶೆಟ್ಟಿ, ಬಳಿಕ ‘ರಿಕ್ಕಿ’ ಸಿನಿಮ ಮೂಲಕ ನಿರ್ದೇಶನಕ್ಕಿಳಿದು ಗೆದ್ದರು. ನಂತರ ಸಾಲು ಸಾಲು ನಿರ್ದೇಶನ ಮಾಡಿ, ನಿರ್ದೇಶನ ಮಾಡಿದ ಎಲ್ಲಾ ಸಿನಿಮಾ ಸೂಪರ್ ಹಿಟ್ ಆಗಿ ಗೆದ್ದಿತು. ನಟನಾಗಿಯೂ ಯಶಸ್ವಿಯಾದರು.
57
ರಕ್ಷಿತ್ ಶೆಟ್ಟಿ -ಉಳಿದವರು ಕಂಡಂತೆ
ರಕ್ಷಿತ್ ಶೆಟ್ಟಿ ಅಂದಿಗೂ ಇಂದಿಗೂ ಸಿನಿಮಾ ಮಾಡೋದ್ರಲ್ಲಿ, ನಟಿಸೋದ್ರಲ್ಲಿ ತುಂಬಾನೆ ಚೂಸಿ. ನಟರಾಗಿ ಮೊದಲ ಎರಡು ಸಿನಿಮಾದಲ್ಲೇ ಗೆದ್ದಿದ್ದರು. ನಿರ್ದೇಶಕರಾಗಿ ‘ಉಳಿದವರು ಕಂಡಂತೆ’ ಮೂಲಕ ಮೊದಲ ಹೆಜ್ಜೆ ಇಟ್ಟರು. ಆ ಸಿನಿಮಾ ಸೂಪರ್ ಹಿಟ್ ಆಗದಿದ್ದರು, ಒಂದು ಅದ್ಭುತ ಸಿನಿಮಾವಾಗಿ ಇಂದಿಗೂ ಜನ ಅದನ್ನು ಕೊಂಡಾಡುತ್ತಾರೆ.
67
ಕಿಚ್ಚ ಸುದೀಪ್- ಮೈ ಆಟೋಗ್ರಾಫ್
ಕಿಚ್ಚ ಸುದೀಪ್ ನಟನಾಗಿ ಮೊದಲ ಸಿನಿಮಾದಿಂದಲೇ ಗೆದ್ದಿದ್ದರು. ಆದರೆ ನಿರ್ದೇಶಕರಾಗಿ ಯಶಸ್ವಿಯಾಗುವರೋ ಎನ್ನುವ ಸಂಶಯ ಇತ್ತು. ಆದರೆ, ತಮಿಳಿನ ಮೈ ಆಟೋಗ್ರಾಫ್ ಸಿನಿಮಾವನ್ನು ಕನ್ನಡದಲ್ಲಿ ಸುಂದರವಾಗಿ ಕಟ್ಟಿಕೊಟ್ಟು ಗೆದ್ದಿದ್ದರು ಸುದೀಪ್.
77
ದುನಿಯಾ ವಿಜಯ್ -ಸಲಗ
ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿ, ಪೋಷಕ ಪಾತ್ರಗಳಿಗೆ ಜೀವ ತುಂಬಿ ನಟಿಸಿ, ಬಳಿಕ ದುನಿಯಾ ಸಿನಿಮಾ ಮೂಲಕ ನಾಯಕನಾಗಿ ಭಡ್ತಿ ಪಡೆದ ನಟ ವಿಜಯ್. ಸ್ಟಾರ್ ನಟನಾಗಿರುವಾಗಲೇ, ಕ್ಯಾಮೆರಾ ಹಿಂದೆ ನಿಂತು ‘ಸಲಗ’ ಸಿನಿಮಾವನ್ನು ನಿರ್ದೇಶಿಸಿ ಗೆದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.