‘ಒಳ್ಳೆ ಕಾಲ ಬಂದೇ ಬರುತ್ತೆ’.. ಜೈಲಿನಲ್ಲಿರುವ ದರ್ಶನ್ ನೆನೆದು ವಿಜಯಲಕ್ಷ್ಮಿ ಭಾವುಕ ಪೋಸ್ಟ್ ವೈರಲ್!

Published : May 27, 2026, 06:52 PM IST

ದರ್ಶನ್ ಅವರನ್ನು ನೆನೆದು ಪತ್ನಿ ವಿಜಯಲಕ್ಷ್ಮಿ ಮತ್ತೆ ಭಾವುಕರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಗಾಗ ದರ್ಶನ್ ಕುರಿತ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ವಿಜಯಲಕ್ಷ್ಮಿ, ಇದೀಗ ವಿಶೇಷ ಫೋಟೋ ಹಂಚಿಕೊಂಡಿದ್ದಾರೆ.

PREV
14
ವಿಶೇಷ ಫೋಟೋ ವೈರಲ್

ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ನೆನೆದು ಪತ್ನಿ ವಿಜಯಲಕ್ಷ್ಮಿ ಮತ್ತೆ ಭಾವುಕರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಗಾಗ ದರ್ಶನ್ ಕುರಿತ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ವಿಜಯಲಕ್ಷ್ಮಿ, ಇದೀಗ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ವಿಶೇಷ ಫೋಟೋ ಹಂಚಿಕೊಂಡು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.

24
ಬೋಟ್ ಮೇಲೆ ನಿಂತ ದರ್ಶನ್

ಇದು ‘ಡೆವಿಲ್’ ಚಿತ್ರದ ಹಾಡಿನ ಚಿತ್ರೀಕರಣದ ವೇಳೆ ತೆಗೆದ ಫೋಟೋವಾಗಿದ್ದು, ಬೋಟ್ ಮೇಲೆ ನಿಂತು ದೂರದ ದ್ವೀಪದತ್ತ ನೋಡುವ ದರ್ಶನ್ ಅವರ ಬ್ಯಾಕ್‌ಲುಕ್ ಚಿತ್ರವನ್ನು ವಿಜಯಲಕ್ಷ್ಮಿ ಪೋಸ್ಟ್ ಮಾಡಿದ್ದಾರೆ.

34
ನಂಬಿಕೆ ಹೆಸರಲಿ ನಗುತಿರಬೇಕು

ಜೊತೆಗೆ 'ಒಳ್ಳೆ ಕಾಲ ಬಂದೆ ಬರುತ್ತೇ ಅಲ್ಲಿವರೆಗೂ ನಂಬಿಕೆ ಹೆಸರಲಿ ನಗುತಿರಬೇಕು' ಎಂದು ಕ್ಯಾಪ್ಶನ್ ಕೊಟ್ಟಿದ್ದು, ಭಾವನಾತ್ಮಕ ಹಾಡೊಂದನ್ನು ಹಿನ್ನೆಲೆಯಾಗಿ ಬಳಸಿದ್ದಾರೆ. ದರ್ಶನ್ ಅವರನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಅಭಿಮಾನಿಗಳ ಗಮನ ಸೆಳೆದಿದೆ.

44
ಅಭಿಮಾನಿಗಳಲ್ಲೂ ಭಾವುಕತೆ

ದರ್ಶನ್ ಜೈಲು ಜೀವನಕ್ಕೆ ಸುಮಾರು ಒಂದು ವರ್ಷ ಸಮೀಪಿಸುತ್ತಿರುವ ನಡುವೆಯೇ, ವಿಜಯಲಕ್ಷ್ಮಿ ಆಗಾಗ ಹಳೆಯ ನೆನಪುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಹಂಚಿಕೊಂಡಿರುವ ಈ ಪೋಸ್ಟ್ ಅಭಿಮಾನಿಗಳಲ್ಲೂ ಭಾವುಕತೆ ಮೂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories