ಕೆಂಪು ಸೀರೆಯುಟ್ಟು, ಕಾವೇರಿ ನೀರಲ್ಲಿ ಪಟಪಟನೇ ಓಡಾಡಿ ಫೋಟೋಶೂಟ್‌ಗೆ ಫೋಸ್ ಕೊಟ್ಟ ಭಾವನಾ ರಾವ್! ಸೀಕ್ರೆಟ್ ಏನು?

Published : Oct 02, 2026, 10:35 PM IST

ನಟಿ ಭಾವನಾ ರಾವ್ ಅಂದರೆ ಮೊಟ್ಟಮೊದಲು ನೆನಪಿಗೆ ಬರೋದು ಕನ್ನಡದ ಸೂಪರ್ ಹಿಟ್ ಚಿತ್ರ, ಯೋಗರಾಜ್ ಭಟ್ ಅವರ ನಿರ್ದೇಶಣದ 'ಗಾಳಿಪಟ'.. ಹೌದು, ಆ ಚಿತ್ರದಲ್ಲಿ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಜೋಡಿಯಾಗಿ 'ನಧೀಂ ಧೀಂ ತನಾ..' ಎಂದವರು ಇದೇ ಭಾವನಾ!

PREV
16

ನಟಿ ಭಾವನಾ ರಾವ್ ಕನ್ನಡ ಪ್ರೇಕ್ಷಕರಿಗೆ ಚಿರಪರಿಚಿತ.. ನಟಿ ಭಾವನಾ ರಾವ್ ಅಂದರೆ ಮೊಟ್ಟಮೊದಲು ನೆನಪಿಗೆ ಬರೋದು ಕನ್ನಡದ ಸೂಪರ್ ಹಿಟ್ ಚಿತ್ರ, ಯೋಗರಾಜ್ ಭಟ್ ಅವರ ನಿರ್ದೇಶನದ 'ಗಾಳಿಪಟ'..

26

ಹೌದು, ಆ ಚಿತ್ರದಲ್ಲಿ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಜೋಡಿಯಾಗಿ 'ನಧೀಂ ಧೀಂ ತನಾ..' ಎಂದು ಭರತನಾಟ್ಯದ ಸ್ಟೈಲಿನಲ್ಲೂ ಕುಣಿದು ಕುಪ್ಪಳಿಸಿ ಕನ್ನಡ ಪ್ರೇಕ್ಷಕರ ಮನಸೂರೆಗೊಂಡಿದ್ದ ನಟಿ ಇದೇ ಭಾವನಾ ರಾವ್. ಕನ್ನಡ ಮಾತ್ರವಲ್ಲದೇ ತಮಿಳು ಹಾಗೂ ಹಿಂದಿಯಲ್ಲೂ ನಟಿಸಿ ಅಲ್ಲೂ ತಮ್ಮ ಛಾಪನ್ನು ಮೂಡಿಸಿದವರು ಈ ನಟಿ!

36

ಇತ್ತೀಚಿನ ಚಿತ್ರಗಳ ನಟನೆಯ ಬಳಿಕ, ನಟಿ ಭಾವನಾ ರಾವ್ ಅವರು ಇದೀಗ ರೆಡ್ ಸಾರಿಯುಟ್ಟು ಕೂರ್ಗ್‌ನ ಕಾವೇರಿ ನದಿಯ ಹರಿಯುತ್ತಿರುವ ನದಿಯಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಖ್ಯಾತ ಫೋಟೋಗ್ರಾಫರ್ 'ಸಂದೀಪ್' ಅವರು ಕ್ಲಿಕ್ಕಿಸಿರುವ ಈ ಫೋಟೋಶೂಟ್ ಬಹಳಷ್ಟು ಚೆಂದವಾಗಿ, ವಿಭಿನ್ನವಾಗಿದ್ದು ಅಪರೂಪದಲ್ಲಿ ಅಪರೂಪ ಎನ್ನುವಂತಿದೆ.

46

ಅದರಲ್ಲೀ ಆಲ್‌ಮೋಸ್ಟ್ ನ್ಯಾಚುರಲ್ ಎಂಬಷ್ಟು ಸಿಂಪಲ್ ಮೇಕ್‌ಅಪ್‌ನಲ್ಲಿ ಭಾವನಾರ ಈ ಫೋಟೋಶೂಟ್ ಮಾಡಲಾಗಿದೆ.

ಕೆಂಪು ಸೀರೆಯಲ್ಲಿ, ಕೂರ್ಗ್‌ನ ಪ್ರಕೃತಿ ಮಡಿಲಲ್ಲಿ ನಟಿ ಭಾವನಾ ರಾವ್ ಮಾಡಿರುವ ಫೋಟೋಶಾಟ್‌ ನೋಡಿದ್ರೆ 'ಅರೇ, ವಾವ್..' ಎನ್ನುವಂತಿದೆ.

56

'ಗಾಳಿಪಟ' ಚಿತ್ರದ ಬಳಿಕ, ತಮಿಳಿನಲ್ಲಿ ನಟಿಸಿ, ಆ ಬಳಿಕ ಹಿಂದಿಯ 'ಧಾರಾವಿ ಬ್ಯಾಂಕ್' (Dharavi Bank - 2022) ವೆಬ್ ಸರಣಿ ಹಾಗೂ ಬಾಲಿವುಡ್‌ನ 'ಬೈಪಾಸ್ ರೋಡ್' (Bypass Road - 2019) ಚಿತ್ರದಲ್ಲೂ ಬಣ್ಣ ಹಚ್ಚಿದ್ದಾರೆ ಭಾವನಾ.

ಕನ್ನಡದಲ್ಲಿ ಭಾವನಾ ರಾವ್ ನಟಿಸಿರುವ ಸಿನಿಮಾಗಳು ಇವು:- ತುರ್ತು ನಿರ್ಗಮನ (Thurthu Nirgamana - 2022): ಹೇಮಂತ್ ಕುಮಾರ್ ಎಲ್ ನಿರ್ದೇಶನದ ಈ ಫ್ಯಾಂಟಸಿ ಡ್ರಾಮಾ ಚಿತ್ರ.

• ಹೊಂದಿಸಿ ಬರೆಯಿರಿ (Hondisi Bareyiri - 2023): ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ ಈ ಫೀಲ್ ಗುಡ್ ಸಿನಿಮಾದಲ್ಲಿ ಇವರು 'ಭೂಮಿಕಾ' ಎಂಬ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.

• ಗ್ರೇ ಗೇಮ್ಸ್ (Grey Games - 2024): ಗಂಗಾಧರ್ ಸಾಲಿಮಠ್ ನಿರ್ದೇಶನದ ಈ ಸಸ್ಪೆನ್ಸ್ ಥ್ರಿಲ್ಲರ್ ಮತ್ತು ಕೌಟುಂಬಿಕ ಚಿತ್ರದಲ್ಲಿ ನಟಿನೆ.

• ಲ್ಯಾಂಡ್‌ಲಾರ್ಡ್ (Landlord - 2026): ಇದು ಇತ್ತೀಚೆಗೆ ಬಿಡುಗಡೆಯಾದ ಗ್ರಾಮೀಣ ಹಿನ್ನೆಲೆಯ ಆಕ್ಷನ್ ಡ್ರಾಮಾ ಸಿನಿಮಾವಾಗಿದ್ದು, ಇದರಲ್ಲಿ ಭಾವನಾ ರಾವ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

66

ಆದರೆ, ಈಗ ಭಾವನಾ ಇಷ್ಟು ವಿಭಿನ್ನವಾಗಿ, ಹರಿಯುವ ನದಿಯಲ್ಲಿ ಸಾಂಪ್ರದಾಯಿಕ ಸೀರೆಯ ಲುಕ್ಕಲ್ಲಿ ಈ ಫೋಟೋಶೂಟ್ ಮಾಡಿಸಿರುವ ಸೀಕ್ರೆಟ್ ಏನು? ಅದು ಸದ್ಯಕ್ಕೆ ಸಸ್ಪೆನ್ಸ್.. ಮುಂದೆ ಟೈಂ ಬಂದಾಗ ಅವರೂ ಹೇಳುತ್ತಾರೆ, ಅದನ್ನು ನಾವೂ ರಿವೀಲ್ ಮಾಡುತ್ತೇವೆ. ಅಲ್ಲಿಯವರೆಗೂ ಕಾಯುತ್ತಿರಿ..!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories