Kantara Turns 4: ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ ‘ಕಾಂತಾರ’. ಇದೀಗ ಸಿನಿಮಾ ರಿಲೀಸ್ ಆಗಿ ನಾಲ್ಕು ವರ್ಷವಾಗಿದ್ದು, ಈ ಹಿನ್ನೆಲೆಯಲ್ಲಿ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ, ಮಧುರ ಕ್ಷಣಗಳನ್ನು ಹಂಚಿಕೊಂಡು ಭಾವುಕರಾಗಿದ್ದಾರೆ.
ಕರಾವಳಿಯ ಸೊಬಗಿನ ಕಥೆಯನ್ನು ಹೇಳುವ ‘ಕಾಂತಾರ’ ಸಿನಿಮಾ ಬಿಡುಗಡೆಯಾಗಿ ಇದೀಗ ನಾಲ್ಕು ವರ್ಷಗಳು ಸಂದಿವೆ. ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡಿದಂತೆ ಮಾಡಿದ ಸಿನಿಮಾ ಕಾಂತಾರ. ನಾಲ್ಕು ವರ್ಷ ಸಂದ ಹಿನ್ನೆಲೆಯಲ್ಲಿ ರಿಷಬ್ ಶೆಟ್ಟಿ ಭಾವುಕರಾಗಿದ್ದಾರೆ.
28
ಡಿವೈನ್ ಸ್ಟಾರ್ ಭಾವುಕ
ಸಿನಿಮಾಗೆ ನಾಲ್ಕು ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಸಿನಿಮಾದ ನಟ ಹಾಗೂ ನಿರ್ದೇಶಕರಾಗಿರುವ ರಿಷಬ್ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಹಳೆಯ ಫೋಟೊಗಳನ್ನು ಪೋಸ್ಟ್ ಮಾಡಿ, ಭಾವುಕ ಮಾತುಗಳನ್ನಾಡಿದ್ದಾರೆ. ಅವರು ಹೇಳಿದ್ದೇನು ನೋಡಿ..
38
ಕಾಂತಾರ – ಒಂದು ದಂತಕಥೆ.
ಬೆಳ್ಳಿಪರದೆ ಮೇಲೆ 'ಕಾಂತಾರ' ಮೂಡಿಬಂದು ನಾಲ್ಕು ವರ್ಷಗಳೇ ಕಳೆದಿವೆ. ಮುಂದಿನದೆಲ್ಲವೂ ಇತಿಹಾಸ. ಎಲ್ಲೆಡೆಯಿಂದಲೂ ಪ್ರಶಸ್ತಿಗಳು ಹಾಗೂ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿತು; ಆದರೆ, ನೀವೆಲ್ಲರೂ ಈ ಚಿತ್ರದ ಮೇಲೆ ತೋರಿದ ಪ್ರೀತಿ ಮಾತ್ರ ಸಾಟಿಯಿಲ್ಲದ್ದು.
ಇದು ಕೇವಲ ನಾನು ನಿರ್ಮಿಸಿದ ಒಂದು ಚಲನಚಿತ್ರವಾಗಿರಲಿಲ್ಲ. ಇದೊಂದು ನಾನು ಬದುಕಿದ ಜಗತ್ತು, ನನ್ನೊಳಗೆ ನಾನು ಹೊತ್ತುಕೊಂಡಿದ್ದ ಕಥೆ ಮತ್ತು ನನ್ನ ವ್ಯಕ್ತಿತ್ವವನ್ನು ರೂಪಿಸಿದ ನಂಬಿಕೆ ಎಂದಿದ್ದಾರೆ ರಿಷಬ್.
58
ಹೃದಯಪೂರ್ವಕ ಧನ್ಯವಾದಗಳು
ಮನದಾಳದ ಕಥೆಯನ್ನು ಪರದೆ ಮೇಲೆ ತರಲು ನನ್ನೊಂದಿಗೆ ಹೆಜ್ಜೆ ಹಾಕಿದ, ಹಗಲಿರುಳು ಶ್ರಮಿಸಿದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದಗಳು. ನಿಮ್ಮ ಪರಿಶ್ರಮ, ನಂಬಿಕೆ ಮತ್ತು ಪ್ರೀತಿಯೇ ಕಾಂತಾರವನ್ನು ನನಗಿಂತ ದೊಡ್ಡದಾಗಿಸಿತು.
68
ಪ್ರತಿಯೊಬ್ಬ ಪ್ರೇಕ್ಷಕನಿಗೂ ಚಿರಋಣಿ
ನನ್ನ ಈ ಪ್ರಯತ್ನವನ್ನು ಕೊಂಡಾಡಿ, ಅದನ್ನು ಗಡಿದಾಟಿಸಿ , ಕನ್ನಡದ ಹೆಮ್ಮೆಯ ಸಿನಿಮಾವಾಗಿ ಇಡೀ ಪ್ರಪಂಚಕ್ಕೆ ತಲುಪಿಸಿದ ಪ್ರತಿಯೊಬ್ಬ ಪ್ರೇಕ್ಷಕನಿಗೂ ನಾನು ಎಂದೆಂದಿಗೂ ಚಿರಋಣಿ. ನಾಲ್ಕು ವರ್ಷಗಳ ನಂತರವೂ, ಆ ಪ್ರೀತಿ ಅಷ್ಟೇ ಗಾಢವಾಗಿ ಮತ್ತು ಅಪಾರವಾಗಿ ಭಾಸವಾಗುತ್ತಿದೆ.
78
ಈ ದಂತಕಥೆ ನಿಮ್ಮೆಲರಿಗೂ ಸೇರಿದ್ದು
'ಕಾಂತಾರ' ಚಿತ್ರವನ್ನು ನಂಬಿದ, ಅದನ್ನು ಸಂಭ್ರಮಿಸಿದ ಹಾಗೂ ನಮ್ಮ ನೆಲದಿಂದ ಜಗತ್ತಿನಾದ್ಯಂತ ಕೊಂಡೊಯ್ದ ಪ್ರತಿಯೊಬ್ಬರಿಗೂ ಸದಾ ಋಣಿಯಾಗಿದ್ದೇನೆ. ಈ ದಂತಕಥೆಯು ನಿಮ್ಮೆಲ್ಲರಿಗೂ ಸೇರಿದ್ದು ಎಂದು ಭಾವನಾತ್ಮಕವಾಗಿ ರಿಷಬ್ ಬರೆದುಕೊಂಡಿದ್ದಾರೆ.
88
16ಕೋಟಿ ಬಜೆಟ್ ಚಿತ್ರ ಗಳಿಸಿದ್ದು 450 ಕೋಟಿ
ಕಾಂತಾರ ಸಿನಿಮಾ ಕೇವಲ 16 ಕೋಟಿ ಬಜೆಟಲ್ಲಿ ನಿರ್ಮಾಣವಾದಂತಹ ಕರಾವಳಿಯ ನೆಲದ ಕಥೆ. ಆದರೆ ಈ ಸಿನಿಮಾ ದೇಶ, ಜೊತೆಗೆ ಪ್ರಪಂಚದ ಮೂಲೆ ಮೂಲೆಯಲ್ಲೂ ಸದ್ದು ಮಾಡಿತ್ತು, ಬರೋಬ್ಬರಿ 450 ಕೋಟಿ ಗಳಿಸಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.