ಬಿಡುಗಡೆಯ ಹಂತಕ್ಕೆ ಬಂದಿರುವ ‘ಎಕ್ಸ್ ಆಂಡ್ ವೈ’ ಚಿತ್ರದಲ್ಲಿ ‘ಆಂಬು ಆಟೋ‘ ಹೆಸರಿನ ಆಟೋ ಪಾತ್ರವನ್ನು ವಿಶೇಷವಾಗಿ ಪರಿಚಯಿಸಲಾಗಿದೆ. ಈ ಪಾತ್ರಕ್ಕೆ ಆಟೋ ಚಾಲಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
25
ಆಟೋ ಚಾಲಕ ಟಗರು ಶಿವ ಅವರ ಸಾರಥ್ಯದಲ್ಲಿ ಅನೇಕ ಆಟೋ ಚಾಲಕರು ರೀಲ್ಸ್ ಮೂಲಕ ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಮೂಲಕ ಚಿತ್ರಕ್ಕೆ ವಿಶೇಷವಾಗಿ ಪ್ರಚಾರ ಕೊಡುತ್ತಿದ್ದಾರೆ. ಇದು ‘ರಾಮಾ ರಾಮಾ ರೇ’ ಚಿತ್ರದ ನಿರ್ದೇಶಕ ಸತ್ಯ ಪ್ರಕಾಶ್ ನಟಿಸುತ್ತಿರುವ ಚಿತ್ರ.
35
ಈ ಚಿತ್ರದಲ್ಲಿ ಸತ್ಯ ಪ್ರಕಾಶ್ ಅವರು ಆಟೋ ಚಾಲನಕನ ಪಾತ್ರ ಮಾಡುತ್ತಿದ್ದಾರೆ. ‘ಆಂಬು ಆಟೋ’ದಲ್ಲಿ ಆ್ಯಂಬುಲೆನ್ಸ್‌ನಲ್ಲಿ ಎಲ್ಲ ಸೌಲಭ್ಯಗಳಿವೆ. ಆಟೋದಲ್ಲೂ ಇಷ್ಟು ಸೌಲಭ್ಯಗಳನ್ನು ಅಳವಡಿಸಬಹುದು ಎಂಬುದನ್ನು ಈ ಚಿತ್ರದ ಮೂಲಕ ತೋರಿಸಲಾಗಿದೆ.
ಇದು ಇವತ್ತಿನ ಜನರೇಷನ್ ಕಥೆ. ಅಪ್ಪ-ಅಮ್ಮ ಆದವರ, ಅಪ್ಪ-ಅಮ್ಮ ಆಗುತ್ತಿರುವವರ, ಅಪ್ಪ –ಅಮ್ಮ ಆಗಬೇಕು ಎಂದುಕೊಂಡವರ ಕಥೆ. ಹಾಗೆಯೇ ಇವತ್ತಿನ ಹುಡುಗ-ಹುಡುಗಿಯರ ಕಥೆ, ಇವತ್ತಿನ ಮಕ್ಕಳ ಕಥೆ.
55
ಇದೊಂದು ಕಾಮಿಡಿ ಜಾನರ್ ಸಿನಿಮಾ ಆಗಿದ್ದು ಅತಿ ಸೂಕ್ಷ್ಮ ವಿಚಾರಗಳನ್ನು ಅಷ್ಟೇ ಸರಳವಾಗಿ ಅದರಲ್ಲೂ ನಗುನಗುತ್ತಾ ನೋಡುವಂತಹ ಕಥೆಯಾಗಿ ನಿಮ್ಮ ಮುಂದೆ ತರುತ್ತಿದ್ದೇವೆ ಎಂದರು ನಿರ್ದೇಶಕ ಸತ್ಯ ಪ್ರಕಾಶ್.