ಉಪೇಂದ್ರ ನಟನೆಯ ‘ಭಾರ್ಗವ’ ಚಿತ್ರಕ್ಕೆ ಬಾಲಿವುಡ್‌ನ ಅರ್ಪಿತ್ ರಂಕಾ ವಿಲನ್ ಆಗಿ ಆಯ್ಕೆ ಆಗಿದ್ದಾರೆ. ಹಿಂದಿಯ ‘ಮಹಾಭಾರತ್’ ಧಾರಾವಾಹಿಯಲ್ಲಿ ದುರ್ಯೋಧನಾಗಿ ಜನಪ್ರಿಯರಾಗಿದ್ದವರು.
25
ತೆಲುಗಿನಲ್ಲಿ ನಟ ಅನುಷ್ಕಾ ಶೆಟ್ಟಿ ಜತೆಗೆ ‘ರುದ್ರಮ್ಮದೇವಿ’ ಚಿತ್ರದಲ್ಲಿ ನಟಿಸಿದವರು. ಈಗ ಬಹುಭಾಷೆಯಲ್ಲಿ ಬರುತ್ತಿರುವ ‘ಕಣ್ಣಪ್ಪ’ ಚಿತ್ರದಲ್ಲೂ ಅರ್ಪಿತ್ ರಂಕಾ ನಟಿಸಿದ್ದಾರೆ.
35
ಸಿನಿಮಾ, ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ, ಮೂಲತಃ ಮಾಡೆಲ್ ಕೂಡ ಆಗಿರುವ ಅರ್ಪಿತ್ ರಂಕಾ ಅವರನ್ನು ಉಪೇಂದ್ರ ಅವರ ಮುಂದೆ ಮುಖ್ಯ ಖಳನಾಯಕನನ್ನಾಗಿ ನಿಲ್ಲಿಸಲಾಗುತ್ತಿದೆ. ನಾಗಣ್ಣ ನಿರ್ದೇಶನದ, ಸೂರಪ್ಪ ಬಾಬು ನಿರ್ಮಾಣದ ಚಿತ್ರವಿದು.
ಸದ್ಯದಲ್ಲೇ ಚಿತ್ರತಂಡ ಶೂಟಿಂಗ್ ಹೊರಡಲಿದೆ. ಹೀಗಾಗಿ ‘ಭಾರ್ಗವ’ ಚಿತ್ರದ ಮುಖ್ಯ ಪಾತ್ರಧಾರಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದು, ಇತ್ತೀಚೆಗೆ ಚಿತ್ರದ ನಾಯಕಿಯಾಗಿ ಅಂಕಿತಾ ಅಮರ್ ಸೇರ್ಪಡೆಯಾಗಿದ್ದರು. ಈಗ ವಿಲನ್ ಆಗಿ ಅರ್ಪಿತ್ ರಂಕಾ ಎಂಟ್ರಿ ಆಗಿದ್ದಾರೆ.
55
ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಲಿದ್ದಾರೆ. ರಾಜರತ್ನಂ ಛಾಯಾಗ್ರಹಣ ಒದಗಿಸಲಿದ್ದಾರೆ. ಅವರು ಈ ಹಿಂದೆ ಕೋಟಿಗೊಬ್ಬ 2 ನಲ್ಲಿಯೂ ಕೆಲಸ ಮಾಡಿದ್ದಾರೆ. ಸ್ಕ್ರಿಪ್ಟ್ ಅಂತಿಮಗೊಂಡಿದೆ.