ಇದು ನಿಜಕ್ಕೂ ಹೃದಯವಿದ್ರಾವಕ: ಆರ್‌ಸಿಬಿ ದುರಂತಕ್ಕೆ ಸ್ಯಾಂಡಲ್‌ವುಡ್‌ ಸ್ಟಾರ್ಸ್‌ ಕಣ್ಣೀರು

Published : Jun 06, 2025, 06:07 PM IST

ಗೆಲುವಿನ ಸಂಭ್ರಮಕ್ಕೆ ಸಾವಿನ ಸೂತಕ ತುಂಬಾ ನೋವಿನ ಸಂಗತಿ. ನೊಂದ ಕುಟುಂಬಸ್ಥರಿಗೆ ನೋವನ್ನು ಭರಿಸುವ ಶಕ್ತಿ ಸಿಗಲಿ. ಅಭಿಮಾನ, ಪ್ರೀತಿ ನಮ್ಮ ಕುಟುಂಬದ ನೋವಿಗೆ ಕಾರಣವಾಗಬಾರದು.

PREV
16

ಕ್ರಿಕೆಟ್‌ ಜೊತೆ ಜೊತೆಗೇ ಗುರುತಿಸಿಕೊಳ್ಳುವ ಸಿನಿಮಾ ಕ್ಷೇತ್ರದಲ್ಲಿ ‘ಆರ್‌ಸಿಬಿ’ ಸಂಭ್ರಮಾಚರಣೆಯ ದುರಂತ ತಿರುವಿಗೆ ಆಘಾತ ವ್ಯಕ್ತವಾಗಿದೆ. ಸಿನಿಮಾರಂಗದ ಅನೇಕರು ಅಮಾಯಕರ ನೋವಿಗೆ ಮಿಡಿದಿದ್ದಾರೆ.

26

ಶಿವರಾಜ್‌ ಕುಮಾರ್‌, ‘ಗೆಲುವಿನ ಸಂಭ್ರಮಕ್ಕೆ ಸಾವಿನ ಸೂತಕ ತುಂಬಾ ನೋವಿನ ಸಂಗತಿ. ನೊಂದ ಕುಟುಂಬಸ್ಥರಿಗೆ ನೋವನ್ನು ಭರಿಸುವ ಶಕ್ತಿ ಸಿಗಲಿ. ಅಭಿಮಾನ, ಪ್ರೀತಿ ನಮ್ಮ ಕುಟುಂಬದ ನೋವಿಗೆ ಕಾರಣವಾಗಬಾರದು. ನಿಮ್ಮ ಅಭಿಮಾನ, ನಿಮ್ಮ ಪ್ರೀತಿ ಎಲ್ಲರನ್ನು ಕಾಪಾಡುತ್ತದೆ. ನಿಮ್ಮ ಕುಟುಂಬದವರನ್ನು ನೀವು ಮಾತ್ರ ಕಾಪಾಡಲು ಸಾಧ್ಯ’ ಎಂದಿದ್ದಾರೆ.

36

ನಟಿ ರಮ್ಯಾ, ‘ಸಂಭ್ರಮವೊಂದು ಹೇಗೆ ದುರಂತವಾಗಿ ತಿರುವು ಪಡೆದುಕೊಂಡಿತು! ಇದು ನಿಜಕ್ಕೂ ಹೃದಯವಿದ್ರಾವಕ’ ಎಂದಿದ್ದಾರೆ. ಕಲಾವಿದರಾದ ಸಪ್ತಮಿ ಗೌಡ, ನಿಶ್ವಿಕಾ ನಾಯ್ಡು, ರಘು ದೀಕ್ಷಿತ್‌ ಮೊದಲಾದವರು ಕಂಬನಿ ಮಿಡಿದಿದ್ದಾರೆ.

46

ಉಸಿರುಗಟ್ಟಿದ ಅನುಭವ, ದೈವವಶಾತ್‌ ಪಾರಾದೆ, ಚಂದನ್‌ ಶೆಟ್ಟಿ: ನಾನು ಆರ್‌ಸಿಬಿ ಸಂಭ್ರಮಾಚರಣೆಗೆ ಒಬ್ಬ ಸಾಮಾನ್ಯ ಫ್ಯಾನ್‌ ಆಗಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗಿದ್ದೆ. ಆರಂಭದಲ್ಲಿ ಎಲ್ಲ ಸರಿಯಿತ್ತು.

56

ಒಂದು ಹಂತದಲ್ಲಿ ಜನಸಂದಣಿ ಹೆಚ್ಚಾಗತೊಡಗಿತು. ಜನ ನನ್ನ ಜೊತೆ ಸೆಲ್ಫಿಗೆ ಮುಗಿಬಿದ್ದರು. ಏನಾಗ್ತಿದೆ ಅನ್ನೋದನ್ನೇ ಮರೆತರು. ನನಗೆ ಉಸಿರು ಕಟ್ಟತೊಡಗಿತು. ಆದರೂ ಜನ ಅಲ್ಲಾಡುತ್ತಿಲ್ಲ, ಬದಲಿಗೆ ಹೆಚ್ಚೆಚ್ಚು ಮಂದಿ ನೆರೆಯುತ್ತಿದ್ದಾರೆ. ದೂರ ನಿಲ್ಲಿ ಅಂತ ನಾನೇ ಜನರನ್ನು ತಳ್ಳಬೇಕಾಯಿತು.

66

ಕೊನೆಗೆ ನನ್ನ ಸ್ನೇಹಿತ ಹೇಗೋ ಅಲ್ಲಿಂದ ಪಾರುಮಾಡಿ ಪಕ್ಕದಲ್ಲಿದ್ದ ಮೆಟ್ರೋ ಸ್ಟೇಶನ್‌ಗೆ ಕರೆತಂದೆ. ಅಲ್ಲಿ ಗಾಯಗೊಂಡ ಕೆಲವರಿದ್ದರು. ಮೆಟ್ರೋ ಸಿಬ್ಬಂದಿ ನಮ್ಮ ಸಹಾಯಕ್ಕೆ ಬಂದರು. ನಾವು ಕ್ರೌಡ್‌ ಮ್ಯಾನೇಜ್‌ಮೆಂಟ್‌ ಕಲಿಯಲೇಬೇಕಿದೆ.

Read more Photos on
click me!

Recommended Stories