Dhruva Sarja, ಸುಂದರ್ ರಾಜ್ ಅವರ ಬಳಿ ಸಿನಿಮಾದಲ್ಲಿ ಒಂದು ಪಾತ್ರ ನೀಡುವಂತೆ ಮನವಿ ಮಾಡಿದರು. 250ನೇ ಚಿತ್ರಕ್ಕೆ ಧ್ರುವ ಸರ್ಜಾ ಮೆಚ್ಚುಗೆ ವ್ಯಕ್ತಪಡಿಸಿ ಕುಟುಂಬದೊಂದಿಗೆ ಸಿನಿಮಾ ನೋಡುವುದಾಗಿ ಹೇಳಿದರು.
ಅಂಕಲ್ ಈ ವೇದಿಕೆಯಲ್ಲೇ ನೀವು ನನಗೊಂಡು ಪ್ರಾಮಿಸ್ ಮಾಡಬೇಕು, ನಿಮ್ಮ ಚಿತ್ರದಲ್ಲಿ ನನಗೆ ಒಂದು ಚಾನ್ಸ್ ಕೊಡಬೇಕು. ಯಾವುದಾದರೂ ಚಿಕ್ಕ ಪಾತ್ರವಾದರೂ ಸರಿ ಮಾಡುತ್ತೇನೆ.
25
ಟೇಕಾಫ್ ಮಾಡೋಣ
ನೀವು ಮತ್ತು ನನ್ನ ಅಣ್ಣ ಸೇರಿ ಪ್ಲ್ಯಾನ್ ಮಾಡಿದ್ದೀರಲ್ವ, ಆ ಚಿತ್ರವನ್ನು ಬೇಕಾದರೆ ನಾವು ಟೇಕಾಫ್ ಮಾಡೋಣ.- ಹೀಗೆ ಪ್ರಾಮಿಸರಿ ನೋಟ್ ಅನ್ನು ಹಿರಿಯ ನಟ ಸುಂದರ್ ರಾಜ್ ಅವರ ಬಳಿ ಕೇಳಿದ್ದು ನಟ ಧ್ರುವ ಸರ್ಜಾ ಅವರು.
35
ಟೀಸರ್ ಬಿಡುಗಡೆ
ಅದು ‘ಚಾರ್ಜ್ ಶೀಟ್ 03-08’ ಚಿತ್ರದ ಟೀಸರ್ ಬಿಡುಗಡೆ. ದಿನೇಶ್ ಕುಮಾರ್, ಲಕ್ಷ್ಮಣ್ ನಿರ್ಮಾಣ, ವೆಂಕಟ್ ಭಾರದ್ವಾಜ್ ನಿರ್ದೇಶನದ, ಸುಂದರ್‌ರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 250ನೇ ಚಿತ್ರವಿದು.
ಹರ್ಷ ಕಲಾಲ್, ಪ್ರಮೋದ್ ಹಿರೇಮಠ್ ಉಳಿದ ಪಾತ್ರಧಾರಿಗಳು. ಸುಂದರ್‌ರಾಜ್ ಅಂಕಲ್ ಅವರ ನನ್ನ ನೆಚ್ಚಿನ ಚಿತ್ರ ‘ಉದ್ಭವ’. ಅನಂತ್ ನಾಗ್ ಅವರ ಜೊತೆ ಇವರ ನಟನೆ ಅದ್ಭುತ. ಚಿತ್ರರಂಗದಲ್ಲಿ ಉಳಿಯಬೇಕೆಂದರೆ ಇರೋದು ಒಂದೇ ದಾರಿ, ಅದು ಟ್ಯಾಲೆಂಟ್.
55
ಫ್ಯಾಮಿಲಿ ಜೊತೆಗೆ ಹೋಗಿ ನೋಡುತ್ತೇನೆ
ಪ್ರತಿಭೆ ಇದ್ದಿದ್ದಕ್ಕೆ ಸುಂದರಾರಾಜ್ ಅಂಕಲ್ ಅವರು 250 ಚಿತ್ರಗಳವರೆಗೂ ಬಂದಿದ್ದಾರೆ. ‘ಚಾರ್ಜ್ ಶೀಟ್ 03-08’ ಚಿತ್ರವನ್ನು ಫ್ಯಾಮಿಲಿ ಜೊತೆಗೆ ಹೋಗಿ ನೋಡುತ್ತೇನೆ ಎಂದರು ಧ್ರುವ ಸರ್ಜಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.