Survey Number 45: ಬಿಗ್​ಬಾಸ್​ ಗಿಲ್ಲಿಗೆ ಜೊತೆಯಾದ ಮಹಾನಟಿ ಬ್ಯೂಟಿ: ಹೊಸ ಸಿನಿಮಾದ ರೋಚಕ ಸ್ಟೋರಿ

Published : May 22, 2026, 12:50 PM IST

ಬಿಗ್​ಬಾಸ್​ 12ರ ವಿಜೇತ ಗಿಲ್ಲಿ ನಟ, 'ಸರ್ವೇ ನಂಬರ್ 45' ಎಂಬ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹಳ್ಳಿ ಸೊಗಡಿನ ಈ ಕಥೆಯಲ್ಲಿ, ಮಹಾನಟಿ ಖ್ಯಾತಿಯ ಪ್ರವಳಿಕಾ ನಾಯಕಿಯಾಗಿದ್ದು, ರೈತನೊಬ್ಬ ತನ್ನ ಜಮೀನಿನ ಸರ್ವೇ ನಂಬರ್ ಸಮಸ್ಯೆಯನ್ನು ಹೇಗೆ ಬಗೆಹರಿಸಿಕೊಳ್ಳುತ್ತಾನೆ ಎಂಬುದೇ ಚಿತ್ರದ ಕಥಾವಸ್ತು.

PREV
16
ಗಿಲ್ಲಿ ಕ್ರೇಜ್​

ಬಿಗ್​ಬಾಸ್​​ 12ರಲ್ಲಿ ಅತ್ಯಧಿಕ ಮತವನ್ನು ಗಳಿಸಿ ದಾಖಲೆ ಬರೆದವರು ಗಿಲ್ಲಿ ನಟ. ಬಿಗ್​ಬಾಸ್​​ಗೆ ಹೋಗುವ ಮುನ್ನ ಅವರು ಒಂದು ಸಿನಿಮಾದಲ್ಲಿ ನಟಿಸಿದ್ದರು. ಬಿಗ್​ಬಾಸ್​ ಗೆಲುವಿನ ಬಳಿಕ ಅವರಿಗೆ ಡಿಮಾಂಡ್​ ಹೆಚ್ಚಾಗಿದ್ದು, ಇದೀಗ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಹೆಸರು ಸರ್ವೇ ನಂಬರ್​ 45 (Survey Number 45 Kannada Movie).

26
ಮಹಾನಟಿ ಪ್ರವಳಿಕಾ ಸಾಥ್​

ಕುತೂಹಲದ ವಿಷಯ ಎಂದರೆ, ಇದೀಗ ಗಿಲ್ಲಿ ನಟನ ಜೊತೆಯಾಗಿದ್ದು, ಮಹಾನಟಿ ಖ್ಯಾತಿಯ ಪ್ರವಳಿಕಾ. ಗಿಲ್ಲಿ ನಟ ಎಂದರೆ ಕಾಮಿಡಿ. ಕಾಮಿಡಿ ಮಾಡಿಯೇ ಮನಸ್ಸನ್ನು ಗೆದ್ದವರು ಗಿಲ್ಲಿ. ಇದೇ ಕಾರಣಕ್ಕೆ ಹಳ್ಳಿ ಸೊಗಡಿನ ಕಥೆ ಇರುವ ಹೊಸ ಸಿನಿಮಾ ಇದಾಗಿದೆ ಎನ್ನಲಾಗಿದೆ. ಸರ್ವೇ ನಂಬರ್​ ಎನ್ನುವುದು ಕೃಷಿ ಜಾಗಕ್ಕೆ ನೀಡುವ ಸಂಖ್ಯೆ. ಅದರ ಸುತ್ತ ಸುತ್ತತ್ತೆ ಈ ಸ್ಟೋರಿ. ಹಲವು ಸವಾಲುಗಳನ್ನ ಎದುರಿಸಿ, ನಾಯಕ ಹೇಗೆ ಸರ್ವೇ ನಂಬರ್‌ನ ಸಮಸ್ಸೆ ಬಗೆಹರಿಸಿಕೊಳ್ಳುತ್ತಾನೆ ಎಂಬುವುದರ ಜೊತೆಗೆ ಭಾವುಕ ಸನ್ನಿವೇಶಗಳು ಈ ಚಿತ್ರದಲ್ಲಿ ಇವೆ.

36
ಬಿಗ್​ಬಾಸ್​ಗೂ ಹೋಗುವ ಮುನ್ನವೇ ಶೂಟಿಂಗ್​

ಅಂದಹಾಗೆ 2024ರಲ್ಲಿಯೇ ಇದರ ಶೂಟಿಂಗ್​ ಆರಂಭವಾಗಿತ್ತು. ಅಂದರೆ ಗಿಲ್ಲಿ ನಟ ಬಿಗ್​ಬಾಸ್​ಗೂ ಹೋಗುವ ಮುನ್ನವೇ ಶೂಟಿಂಗ್​ ಮುಗಿದಿತ್ತು. ಇದೀಗ ಡಬ್ಬಿಂಗ್​ ಮುಗಿದಿದ್ದು, ರೀ ರೆಕಾರ್ಡಿಂಗ್‌ ಮತ್ತು ಪೋಸ್ಟ್‌ ಪ್ರೊಡಕ್ಷನ್ ಕೆಲಸಗಳು ವೇಗ ಪಡೆಯುತ್ತಿವೆ.

46
ಪ್ರವಳಿಕಾ ಮೊದಲ ಸಿನಿಮಾ

ಮಹಾನಟಿ ಖ್ಯಾತಿಯ ಪ್ರವಳಿಕಾ ಅವರು ಸೀರಿಯಲ್​ನಲ್ಲಿ ಕಾಣಿಸಿಕೊಂಡಿದ್ದು, ಈ ಸಿನಿಮಾದ ಮೂಲಕ ಬೆಳ್ಳಿಪರದೆಗೆ ಎಂಟ್ರಿ ಕೊಟ್ಟಿದ್ದಾರೆ. ಎಮೋಷನಲ್​ ಪಾತ್ರ ಅವರದ್ದು, ಇದನ್ನು ನಿಭಾಯಿಸುವಾಗ ತಮಗೆ ಸ್ವಲ್ಪ ಕಷ್ಟವಾಯ್ತು ಎಂದು ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

56
ಯಾರ್ಯಾರು ಇದ್ದಾರೆ?

ಶಿವಕುಮಾರ್‌ ಶೆಟ್ಟಿಹಳ್ಳಿ ನಿರ್ದೇಶನ ಮತ್ತು ನಿರ್ಮಾಣದ ಅಡಿ ಚಿತ್ರ ನಡೆಯುತ್ತಿದೆ. ಗಿಲ್ಲಿ, ಪ್ರವಳಿಕಾ ಜೊತೆ ಚಿತ್ರದಲ್ಲಿ, ಮೌನ ಹಾಸನ್, ಕುಮಾರ್ ಅರಸೇಗೌಡ, ಮಾಲತಿ, ಮನು ಕಲ್ಲಹಳ್ಳಿ, ಶಿವಣ್ಣ, ಜ್ಯೂ. ದ್ವಾರಕೀಶ್, ಮಂಜು, ರಾಘವೇಂದ್ರ ಕುಮಾರ್, ವೀರೇಶ್, ಹನುಮಂತಪ್ಪ ಮುಂತಾದವರು ಇದ್ದಾರೆ.

66
ಸ್ಟೋರಿ ಏನು?

ಈ ಚಿತ್ರದ ಸ್ಟೋರಿ ಬಗ್ಗೆ ಇದಾಗಲೆ ಚಿತ್ರತಂಡ ರಿವೀಲ್ ಮಾಡಿದೆ. ರೈತನ ಜಮೀನಿಗೆ ಸರ್ಕಾರವು ಸರ್ವೇ ನಂಬರ್ ನೀಡಿರುತ್ತದೆ. ಇದರ ಮಧ್ಯೆ ಆತನಿಗೆ ಅನೇಕ ಕಷ್ಟ ಬರುತ್ತಲೇ ಇರುತ್ತದೆ. ಅದನ್ನು ಚಾಣಾಕ್ಷತನದಿಂದ ಒಳ್ಳೆತನದಲ್ಲಿ ಹೇಗೆ ಬಗೆ ಹರಿಸಿಕೊಳ್ಳುತ್ತಾನೆ ಎಂಬ ಕಹಾನಿ ಈ ಸಿನಿಮಾದಲ್ಲಿ ಇರಲಿದೆ. ನಾವು ಒಳಿತನ್ನು ಬಯಸಿದರೆ ಒಳ್ಳೆಯದೇ ನಡೆಯುತ್ತದೆ. ಕೆಟ್ಟತನವನ್ನು ಆಯ್ಕೆ ಮಾಡಿಕೊಂಡರೆ ಅದೇ ಆಗುತ್ತದೆ ಎಂಬ ಸಂದೇಶ ನೀಡುತ್ತದೆ ಎಂದು ತಂಡ ಹೇಳಿದೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories