ಕನ್ನಡದಲ್ಲಿ ಉತ್ತಮ ಕಥೆಯುಳ್ಳ Movies ಬರಲ್ಲ ಅನ್ನೋರು ಈ ಸಿನಿಮಾಗಳನ್ನೊಮ್ಮೆ ನೋಡಿ

Published : May 21, 2026, 04:49 PM IST

Must watch Kannada Movies: ಕನ್ನಡದಲ್ಲಿ ಉತ್ತಮ ಸಿನಿಮಾಗಳೇ ಬರೋದಿಲ್ಲ ಎಂದು ಪದೇ ಪದೇ ಹೇಳುವ ಜನರು ಇದನ್ನು ತಪ್ಪದೇ ನೋಡಬೇಕು. ಯಾಕಂದ್ರೆ ಇವು ಕನ್ನಡದ ಅತ್ಯುತ್ತಮ ಸಿನಿಮಾಗಳು. ಆದರೆ ಜನ ಮಾತ್ರ ಇವುಗಳ ಕಡೆಗೆ ಅಷ್ಟು ಗಮನ ಕೊಡಲೇ ಇಲ್ಲ. ಹಾಗಿದ್ರೆ ಆ ಸಿನಿಮಾಗಳು ಯಾವುವು ನೋಡೋಣ.

PREV
17
ತೀರ್ಥರೂಪ ತಂದೆಯವರಿಗೆ

ಒಬ್ಬ ಟ್ರಾವೆಲ್ ವ್ಲಾಗರ್ ತನ್ನ ದೂರವಾದ ತಂದೆಯನ್ನು ಹುಡುಕುತ್ತಿರುವಾಗ ತನ್ನ ಕುಟುಂಬದ ಬಗ್ಗೆ ದುಃಖಕರ ಸತ್ಯಗಳನ್ನು ಕಂಡುಕೊಳ್ಳುತ್ತಾನೆ, ಇದರಿಂದ ಆತನ ಜೀವನದಲ್ಲಿ ವೈಯಕ್ತಿಕವಾಗಿ ಏನೆಲ್ಲಾ ಬದಲಾವಣೆ ಆಗುತ್ತೆ? ಯಾವ ರೀತಿ ಸಂಬಂಧದಲ್ಲಿ ಸಾಮರಸ್ಯ ತುಂಬುತ್ತೆ ಅನ್ನೋದು ಕಥೆ.

27
BTS

ಇದೊಂದು ಆಂಥಾಲಾಜಿ ಸಿನಿಮಾ. ಈ ಸಿನಿಮಾದಲ್ಲಿ ಐದು ಕಥೆಗಳನ್ನು ನೋಡಬಹುದು. ಸೃಷ್ಟಿಕರ್ತರು ಮತ್ತು ವೀಕ್ಷಕರ ಜೀವನದ ಮೇಲೆ ಸಿನಿಮಾ ಬೀರುವಂತಹ ಆಳವಾದ ಪ್ರಭಾವವನ್ನು ತೋರಿಸುವ ಚಲನಚಿತ್ರ ಇದಾಗಿದೆ.

37
ಕೋಳಿ ಎಸ್ರು

ಕುಡುಕ ಗಂಡನ ಜೊತೆ ಬದುಕುವ ಬಡ ಮಹಿಳೆಯರ ಕಥೆ ಇದು. ತನ್ನ ಪುಟ್ಟ ಮಗಳ ಕೋಳಿ ಎಸ್ರು (ಮಾಂಸ) ತಿನ್ನಬೇಕೆನ್ನುವ ದೊಡ್ಡ ಆಸೆಯನ್ನು ಈಡೇರಿಸಲು, ಆಕೆ ಏನೆಲ್ಲಾ ಕಷ್ಟಪಡುತ್ತಾಳೆ, ಮಗಳ ಆಸೆಯನ್ನು ಕೊನೆಗಾದರೂ ಈಡೇರಿಸುತ್ತಾಳೆಯೇ ಅನ್ನೋದನ್ನು ಸಿನಿಮಾ ನೋಡಿ ತಿಳಿಯಬೇಕು.

47
ಬ್ಲಿಂಕ್

ಇದು ಸೈಂಟಿಫಿಕ್ ಥ್ರಿಲ್ಲರ್ ಸಿನಿಮಾ. ಇದು ಸಂಪೂರ್ಣವಾಗಿ ಅಪೂರ್ವನ ಕಥೆ. ಆತನಿಗೆ ಕಣ್ಣನ್ನು ಮಿಣುಕಿಸದೇ ಇರುವ ಸಮಸ್ಯೆ ಹಾಗೂ ಸಾಮರ್ಥ್ಯ ಇರುತ್ತದೆ. ಆ ಒಂದು ಸಾಮರ್ಥ್ಯ, ಅಪೂರ್ವನ ಜೀವನದಲ್ಲಿ ಏನೆಲ್ಲಾ ಬದಲಾವಣೆಯನ್ನು ತರುತ್ತದೆ ಅನ್ನೋದು ಕಥೆ.

57
ಶಾಖಾಹಾರಿ

ಇದು ಒಬ್ಬ ನಿಸ್ವಾರ್ಥ ಬಾಣಸಿಗನ ಹೋಟೆಲ್‌ನಲ್ಲಿ ಅನಿರೀಕ್ಷಿತವಾಗಿ ನಡೆಯುವ ಕೊಲೆ ಮತ್ತು ಅದರಿಂದ ಬಿಚ್ಚಿಕೊಳ್ಳುವ ರಹಸ್ಯಗಳ ಕುತೂಹಲಕಾರಿ ಕಥೆಯನ್ನು ಹೊಂದಿದೆ. ರಂಗಾಯಣ ರಘು ಮತ್ತು ಗೋಪಾಲಕೃಷ್ಣ ದೇಶಪಾಂಡೆಯವರ ಅದ್ಭುತ ಅಭಿನಯವನ್ನು ಕಣ್ತುಂಬಿಕೊಳ್ಳಬಹುದು.

67
ವಲವಾರ

ಕಾಣೆಯಾದ ಹಸುವನ್ನು ಹುಡುಕಲು ಹೊರಡುವ ಇಬ್ಬರು ಸಹೋದರರು ಮತ್ತು ಅವರ ಬಡತನದ ಗ್ರಾಮೀಣ ಜೀವನದ ಕಥೆಯೇ ಈ ಚಿತ್ರ. ಮುದ್ದಾದ ಬಾಲ್ಯದ ಕಥೆ, ವ್ಯಥೆ, ಬಡತನ ಎಲ್ಲವನ್ನೂ ತೆರೆದಿಡುವ ಸುಂದರ ಸಿನಿಮಾ ಇದು.

77
ಫೋಟೊ

ಭಾರತ ಸರ್ಕಾರ ದೇಶಾದ್ಯಂತ ಲಾಕ್ ಡೌನ್ ಹೇರಿಕೆ ಮಾಡಿದಾಗ, ಬೆಂಗಳೂರಿನಿಂದ ತನ್ನ ಮಗನೊಂದಿಗೆ ತಮ್ಮ ಊರಾದ ರಾಯಚೂರಿಗೆ ಹೊರಟು ನಿಂತ ಕೂಲಿ ಕಾರ್ಮಿಕನ ಕಥೆ. ಊರಿಗೆ ತಲುಪಲು ಯಾವುದೇ ವಾಹನ ಇಲ್ಲದೇ 450ಕೀ. ಮೀ ನಡೆಯುವಾಗ ಅವರು ಅನುಭವಿಸುವ ಸಮಸ್ಯೆಗಳನ್ನು ಬಿಂಬಿಸುವ ಸಿನಿಮಾ ಇದಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories