ಈ ಸಿನಿಮಾದಲ್ಲಿ ಪ್ರೇಮ ಕಥೆ ಇದೆ, ಕೌಟುಂಬಿಕ ಕಥಾಹಂದರವೂ ಇದೆ. ಈ ಸಿನಿಮಾದ ನಾಯಕನಾಗಿ "ಬಿಗ್ ಬಾಸ್ ಕನ್ನಡ ಸೀಸನ್ 7" ಖ್ಯಾತಿಯ ಶೈನ್ ಶೆಟ್ಟಿ ಹಾಗೂ ನಾಯಕಿಯಾಗಿ ಅಂಕಿತಾ ಅಮರ್ ನಟಿಸಿದ್ದಾರೆ. ದೇವರಾಜ್, ಅಚ್ಯುತ್‌ಕುಮಾರ್, ಮಾಳವಿಕಾ ಅವಿನಾಶ್, ಅನೂಪ್ ಭಂಡಾರಿ, ಶ್ರುತಿ ಹರಿಹರನ್, ಶ್ರುತಿ ಕೃಷ್ಣ, ಸಾಕ್ಷಿ ಅಗರವಾಲ್, ಶ್ರೀಮಾನ್, ರವಿಶಂಕರ್ ಗೌಡ, ರವಿ ಭಟ್, ವಾಣಿ ಹರಿಕೃಷ್ಣ, ಸಂಗೀತ, ಅನಿಲ್, ವೇದಿಕಾ ಕಾರ್ಕಳ್ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.