ಒಂದು ಕಾಲದಲ್ಲಿ ನೀರು ಮಾರಾಟ ಮಾಡುತ್ತಿದ್ದ ನಟ ಈಗ ಪ್ಯಾನ್ ಇಂಡಿಯಾ ಸ್ಟಾರ್… ಯಾರು ಗೆಸ್ ಮಾಡಿ

Published : Jul 26, 2025, 02:37 PM IST

ಕೆಲವು ವರ್ಷಗಳ ಹಿಂದೆ ನೀರಿನ ಬಾಟಲಿಗಳನ್ನು ಮಾರುತ್ತಿದ್ದ ಮತ್ತು ನಾಟಕಗಳಲ್ಲಿ ಸಣ್ಣ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಇವರು ಇಂದು ದೇಶವೇ ಗುರುತಿಸುವ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. 

PREV
18

ಬಾಲಿವುಡ್‌ನಿಂದ ದಕ್ಷಿಣದವರೆಗೆ, ಬಹಳಷ್ಟು ಕಷ್ಟಪಟ್ಟು ಸ್ಟಾರ್ ಗಳಾದ ಅನೇಕ ತಾರೆಯರಿದ್ದಾರೆ. ಫೋಟೋದಲ್ಲಿ ಕಾಣುವ ಈ ನಟನ ಹೋರಾಟದ ಕಥೆಯು ಅಷ್ಟೇ ಸ್ಪೂರ್ತಿದಾಯಕವಾಗಿದೆ. 13 ವರ್ಷಗಳ ಹಿಂದಿನವರೆಗೂ ಈ ನಟನ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಆದರೆ ಇಂದು ಅವರು ಪ್ಯಾನ್ ಇಂಡಿಯಾ ಸ್ಟಾರ್ (Pan India Star)ಆಗಿ ಮೆರೆಯುತ್ತಿದ್ದಾರೆ.

28

ಒಂದು ಕಾಲದಲ್ಲಿ ಈ ನಟ ಹೊಟೇಲ್ ಗಳಿಗೆ ನೀರು ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಫೋಟೋದಲ್ಲಿರುವ ಈ ಹುಡುಗನನ್ನು ನೀವು ಗುರುತಿಸಬಲ್ಲಿರಾ? ಫೋಟೋದಲ್ಲಿರುವ ಹುಡುಗ ಬೇರೆ ಯಾರೂ ಅಲ್ಲ, ನಮ್ಮ ಕನ್ನಡ ಚಿತ್ರರಂಗವನ್ನು (Kannada film Industry) ದೇಶವೇ ಹಿಂದಿರುಗಿ ನೋಡುವಂತೆ ಮಾಡಿದ ನಟ ರಿಷಭ್ ಶೆಟ್ಟಿ.

38

ರಿಷಭ್ ಶೆಟ್ಟಿ (Rishab Shetty) 1983 ರಲ್ಲಿ ಕುಂದಾಪುರದಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣ ಕುಂದಾಪುರದಲ್ಲಿ ಮಾಡಿದ್ದು, ಬೆಂಗಳೂರಿನಲ್ಲಿ ಡಿಗ್ರಿ ಮುಗಿಸಿದ್ದಾರೆ. ಬೆಂಗಳೂರಿನಲ್ಲಿ ಅಧ್ಯಯನ ಮಾಡುವಾಗ, ಅವರು ನಾಟಕಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು ಮತ್ತು ಅಲ್ಲಿನ ಯಶಸ್ಸು ಚಲನಚಿತ್ರಗಳಲ್ಲಿ ಕರಿಯರ್ ಆರಂಭಿಸಲು ಅವರನ್ನು ಪ್ರೇರೇಪಿಸಿತು.

48

ಆರಂಭದಲ್ಲಿ ಜೀವನ ಸಾಗಿಸಲು, ರಿಷಭ್ ನೀರಿನ ಬಾಟಲಿಗಳು ಮತ್ತು ಡಬ್ಬಿಗಳನ್ನು ಮಾರುತ್ತಿದ್ದರು. ಅಷ್ಟೇ ಅಲ್ಲ ಕೆಲವೊಮ್ಮೆ ಹೋಟೆಲ್‌ಗಳಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು, ಇದರಿಂದ ಅವರು ತನ್ನ ಖರ್ಚುಗಳನ್ನು ಕಳೆಯುತ್ತಿದ್ದರಂತೆ.

58

ರಿಷಭ್ ಒಂದು ಚಿತ್ರದಲ್ಲಿ ಸ್ಪಾಟ್ ಬಾಯ್ (spot boy) ಆಗಿ ಕರಿಯರ್ ಪ್ರಾರಂಭಿಸಿದರು ಮತ್ತು ಕೆಲವು ಚಿತ್ರಗಳಲ್ಲಿ ಕ್ಲಾಪ್ ಬಾಯ್ ಕೂಡ ಆಗಿದ್ದರು. 2006 ರಲ್ಲಿ, ಅವರಿಗೆ ಕನ್ನಡ ಚಿತ್ರ 'ಸೈನೈಡ್' ನಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತು, ಅವರ ಮೊದಲ ಪ್ರಮುಖ ಪಾತ್ರ 'ತುಘಲಕ್' (2012) ಚಿತ್ರದಲ್ಲಿತ್ತು.

68

ರಿಷಬ್ ಶೆಟ್ಟಿ ಕನ್ನಡದ 'ಬೆಲ್ ಬಾಟಮ್' (2019) ಚಿತ್ರದೊಂದಿಗೆ ನಾಯಕ ನಟನಾಗಿ ಪಾದಾರ್ಪಣೆ ಮಾಡಿದರು, ಆ ಚಿತ್ರವು ಸೂಪರ್‌ಹಿಟ್ ಆಗಿತ್ತು. ಆದಾಗ್ಯೂ, 'ಕಾಂತಾರ' ಚಿತ್ರವು ರಿಷಬ್ ಶೆಟ್ಟಿ ಅವರ ಜೀವನವನ್ನು ಶಾಶ್ವತವಾಗಿ ಬದಲಾಯಿಸಿತು. ಸಂದರ್ಶನವೊಂದರಲ್ಲಿ, COVID-19 ಲಾಕ್‌ಡೌನ್ ಸಮಯದಲ್ಲಿ ಚಿತ್ರದ ಕಲ್ಪನೆಯನ್ನು ಅವರು ಹೇಗೆ ಪಡೆದರು ಎಂಬುದನ್ನು ಬಹಿರಂಗಪಡಿಸಿದ್ದರು.

78

2022 ರ ವರ್ಷವು ರಿಷಭ್ ಶೆಟ್ಟಿಗೆ ದಿಕ್ಕನ್ನೇ ಬದಲಾಯಿಸಿತು. ಇದು ಅವರನ್ನು ಪ್ಯಾನ್-ಇಂಡಿಯಾ ತಾರೆಯನ್ನಾಗಿ ಮಾಡಿತು. 'ಕಾಂತಾರ' ಚಿತ್ರ ಅವರನ್ನು ದೊಡ್ಡ ಎತ್ತರಕ್ಕೆ ಕೊಂಡೊಯ್ದಿತು. 'ಕಾಂತಾರ' ಮೊದಲ ದಿನ ಕೇವಲ 1.27 ಕೋಟಿ ರೂ. ಗಳಿಸಿತು. ಜನರು ಚಿತ್ರವನ್ನು ನೋಡಿದ ನಂತರ ಇದು ಪ್ಯಾನ್ ಇಂಡಿಯಾ ಸಿನಿಮಾವಾಗಿ, ಗಳಿಕೆ ಕ್ರಮೇಣ 415 ಕೋಟಿ ರೂ.ಗೆ ಏರಿತು.

88

ರಿಷಭ್ ಶೆಟ್ಟಿ 'ಕಾಂತಾರ' ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿಯನ್ನು (National Award) ಸಹ ಪಡೆದಿದ್ದಾರೆ. ಕಾಂತಾರ ಸಿನಿಮಾದಲ್ಲಿ ರಿಷಭ್ ನಟಿಸಿದ್ದು ಮಾತ್ರವಲ್ಲದೇ, ನಿರ್ದೇಶನ ಕೂಡ ಮಾಡಿ, ಕತೆ ಕೂಡ ಬರೆದಿದ್ದಾರೆ. ಸದ್ಯ ಕಾಂತಾರಾ 2 ಬಿಡುಗಡೆಗೆ ಜನ ಕಾಯುತ್ತಿದ್ದಾರೆ.

Read more Photos on
click me!

Recommended Stories