ಬರ್ತ್ ಡೇ ದಿನ ಗುಡ್ ನ್ಯೂಸ್ ಕೊಟ್ಟ ಪ್ರೇಮ್ ಪುತ್ರಿ… ‘ಪಬ್ಬಾರ್’ ಫಸ್ಟ್ ಲುಕ್ ರಿಲೀಸ್

Published : Jan 23, 2026, 11:52 PM IST

Amrutha Prem: ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಚಿತ್ರರಂಗದಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಮುಂದೆ ಸಾಗುತ್ತಿದ್ದು, ಇದೀಗ ಅಮೃತಾ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಟಿಯ ಮುಂದಿನ ಚಿತ್ರ ‘ಪಬ್ಬಾರ್’ ಫಸ್ಟ್ ಲುಕ್ ರಿಲೀಸ್ ಆಗಿದೆ. ನಟಿಯ ಲುಕ್ ಸಖತ್ತಾಗಿ ಬಂದಿದೆ.

PREV
16
ಅಮೃತಾ ಪ್ರೇಮ್

ಕನ್ನಡ ಚಿತ್ರರಂಗದ ಜನಪ್ರಿಯ ನಾಯಕ ಹಾಗೂ ಎವರ್ ಗ್ರೀನ್ ಅಪ್ಪ ಆಗಿರುವ ನೆನಪಿರಲಿ ಪ್ರೇಮ್ ಅವರ ಪುತ್ರಿ ಅಮೃತಾ ಈಗಾಗಲೇ ‘ಟಗರು ಪಲ್ಯ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗಿದೆ. ಇದೀಗ ಮತ್ತಷ್ಟು ಸಿನಿಮಾಗಳಲ್ಲಿ ನಟಿಸುವ ಮೂಲಕ ಭರವಸೆಯ ನಟಿಯಾಗಿ ಹೊರಹೊಮ್ಮಿದ್ದಾರೆ.

26
ಅಮೃತಾ ಹುಟ್ಟುಹಬ್ಬ

ಜನವರಿ 23ರಂದು ಅಮೃತಾ ಪ್ರೇಮ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲಯಲ್ಲಿ ಇದೀಗ ಅಮೃತಾ ಅವರ ಹೊಸ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಆ ಮೂಲಕ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದಾರೆ ಅಮೃತಾ.

36
ಪಬ್ಬಾರ್ ಸಿನಿಮಾ

ಸಂದೀಪ್ ಸುಂಕದ ಕಥೆ ಬರೆದು ನಿರ್ದೇಶನ ಮಾಡಿರುವ, ಗೀತಾ ಶಿವರಾಜಕುಮಾರ್ ನಿರ್ಮಾಣ ಮಾಡಿರುವ ‘ಪಬ್ಬಾರ್’ ಸಿನಿಮಾದಲ್ಲಿ ಧೀರೇನ್ ರಾಮಕುಮಾರ್ ನಾಯಕನಾಗಿ ನಟಿಸುತ್ತಿದ್ದಾರೆ. ಅವರಿಗೆ ನಾಯಕಿಗಾಗಿ ಅಮೃತಾ ನಟಿಸುತ್ತಿದ್ದಾರೆ. ಇವರು ವೇದಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಫಸ್ಟ್ ಲುಕ್ ಸಖತ್ ಮುದ್ದಾಗಿದ್ದು, ಸಿಂಪಲ್ ಲುಕ್ ನಲ್ಲಿ ಅಮೃತಾ ಚೆನ್ನಾಗಿ ಕಾಣಿಸುತ್ತಿದ್ದಾರೆ.

46
ಅಮ್ಮು ಸಿನಿಮಾದಲ್ಲೂ ಇವರೇ ನಾಯಕಿ

ಅಮೃತಾ ಹಲವು ಚಿತ್ರಗಳಿಗೆ ಸಹಿ ಮಾಡಿದ್ದು, ತ್ರಿಕೋನ ಪ್ರೇಮಸರಣಿಯ ಈ' ಅಮ್ಮು' ಸಿನಿಮಾದಲ್ಲಿ ಸ್ಮೈಲ್ ಗುರು ರಕ್ಷಿತ್ ನಾಯಕನಾಗಿ ನಟಿಸುತ್ತಿದ್ದರೆ, ಜೆರುಸಾ ಕ್ರಿಷ್ಟಫರ್ ಮತ್ತೊಬ್ಬ ನಾಯಕಿಯಾಗಿ ನಟಿಸುತ್ತಿದ್ದಾರೆ. ಮಹೇಶ್ ಬಾಬು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

56
ಮುದ್ದು ಮಗಳಿಗೆ ಅಪ್ಪನ ವಿಶ್

ಪ್ರೇಮ್ ಮುದ್ದಿನ ಮಗಳ ಜೊತೆಗಿನ ಫೋಟೊ ಶೇರ್ ಮಾಡಿ, ತಂದೆ ಅನ್ನೋ ಹೆಸರಿಗೆ ಉಸಿರಾದವಳು, ಭಗವಂತನ special gift ಇವಳು, ನನ್ನ ಮನೆ ಮಗಳು . ಹುಟ್ಟು ಹಬ್ಬದ ಶುಭಾಶಯಗಳು. Hapyy happy birthday magale. ಯಶಸ್ಸಿನ ಪರಾಕಾಷ್ಟೆ ನಿನ್ನದಾಗಲಿ ಎಂದು ಹಾರೈಸಿದ್ದಾರೆ.

66
ಅಮ್ಮನ ಮುದ್ದಿನ ಅಮ್ಮು ಬಂಗಾರಿ

ಇನ್ನು ಪ್ರೇಮ್ ಪತ್ನಿ ಜ್ಯೋತಿಯವರು ಸಹ ಮಗಳ ಬಾಲ್ಯದ ಕ್ಯೂಟ್ ಆಗಿರುವ ಫೋಟೊಗಳು ಮತ್ತು ಇಂದಿನ ಫೋಟೊಗಳನ್ನು ಹಂಚಿಕೊಂಡು ಹುಟ್ಟು ಹಬ್ಬದ ಶುಭಾಶಯಗಳು ಅಮ್ಮು ಬಂಗಾರಿ ಎಂದಿದ್ದಾರೆ. ಅಂದ ಹಾಗೇ ಇವತ್ತು ಅಮೃತಾ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನೆನೆಪಿರಲಿ ಫೌಂಡೇಶನ್ ವತಿಯಿಂದ ರಕ್ತದಾನ ಶಿಬಿರ ಕೂಡ ನಡೆದಿತ್ತು, ಜೊತೆಗೆ ಫ್ಯಾನ್ ಮೀಟ್ ಅಪ್ ಕೂಡ ನಡೆದಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories