ಝೈದ್ ಖಾನ್, ರಚಿತಾ ರಾಮ್, ಮಲೈಕಾ ವಸುಪಾಲ್ ನಟನೆಯ ಕಲ್ಟ್ ಸಿನಿಮಾ ಇಂದು ರಿಲೀಸ್ ಆಗಿದೆ. ಅನಿಲ್ ಕುಮಾರ್ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ಸಂದರ್ಶನ ಇಲ್ಲಿದೆ.
ಅಪ್ಪನಿಗೆ ಇಷ್ಟವಿಲ್ಲದಿದ್ದರೂ ಚಿತ್ರರಂಗಕ್ಕೆ ಬಂದೆ. ಚಿತ್ರರಂಗಕ್ಕೆ ಕಾಲಿಡುವ ಮೊದಲೇ ನಾವು ಯಾವುದೇ ರೀತಿ ಸಪೋರ್ಟ್ ಮಾಡುವುದಿಲ್ಲ ಅಂದಿದ್ದರು. ಹೇಗೋ ಮನವರಿಕೆ ಮಾಜಿ ಸಿನಿಮಾ ಮಾಡಿದೆ. ಈಗವ ಆಗಾಗ ನನ್ನ ಕುರಿತು ಅಪ್‌ಡೇಟ್ ತೆಗೆದುಕೊಳ್ಳುತ್ತಿರುತ್ತಾರೆ. ಮನೆಯಲ್ಲಿ ಸ್ವಲ್ಪ ಮಾತನಾಡುತ್ತಾರೆ. ರಾಜಕೀಯ ಅವರಿಗೇ ಕೊನೆಯಾಗಲಿ ಎಂದು ಹೇಳಿದ್ದಾರೆ.
27
ರಾಜಕೀಯದಲ್ಲಿ ಇರುವುದು ನನಗೆ ಒಂಥರಾ ಶಾಪ, ವರ
ಅವರು ರಾಜಕೀಯದಲ್ಲಿ ಇರುವುದು ನನಗೆ ಒಂಥರಾ ಶಾಪ ಮತ್ತು ವರ. ನನಗೆ ನನ್ನ ಪ್ರತಿಭೆ, ಆಸಕ್ತಿಯಿಂದಲೇ ಗೆಲ್ಲುವ ಆಸೆ. ಅದಕ್ಕಾಗಿ ಶ್ರಮಿಸುತ್ತಿದ್ದೇನೆ.
37
ಶೋಕಿಗಾಗಿ ಚಿತ್ರರಂಗಕ್ಕೆ ಬಂದಿಲ್ಲ
ನಾನು ಶೋಕಿಗಾಗಿ ಚಿತ್ರರಂಗಕ್ಕೆ ಬಂದಿಲ್ಲ. ನನ್ನ ಸಿನಿಮಾಗೋಸ್ಕರ ಯಾರೂ ಕಾಯುತ್ತಿಲ್ಲ ಎಂಬ ಎಚ್ಚರಿಕೆ ಇಟ್ಟುಕೊಂಡೇ ಮುಂದಕ್ಕೆ ಹೆಜ್ಜೆ ಇಡುತ್ತಿದ್ದೇನೆ.
‘ಬನಾರಸ್’ ಸಿನಿಮಾ ಬಂದು ವರ್ಷದ ಬಳಿಕ ಯಶ್ ಅವರ ಮೂಲಕ ಅನಿಲ್ ಕುಮಾರ್ ಪರಿಚಯವಾದರು. ಅವರು ಹೇಳಿದ ‘ಕಲ್ಟ್’ ಕಥೆ ಬಹಳ ಹಿಡಿಸಿದ ಕಾರಣ ಸಿನಿಮಾ ಆರಂಭಿಸಿದೆ.
57
ನನ್ನ ಮಾರುಕಟ್ಟೆ ಎಷ್ಟಿದೆ?
ನನ್ನ ಶಕ್ತಿ ಮತ್ತು ವ್ಯಾಪ್ತಿ ತಿಳಿದಿದೆ. ನನ್ನ ಮಾರುಕಟ್ಟೆ ಎಷ್ಟಿದೆ ಎಂಬ ಐಡಿಯಾ ಕೂಡ ನನಗಿದೆ. ಹಾಗಾಗಿ ಅದಕ್ಕೆ ತಕ್ಕಂತೆ ಎಷ್ಟು ಬಜೆಟ್ ಬೇಕೋ ಅಷ್ಟೇ ಹಾಕಿಸಿದ್ದೇನೆ. ಅರ್ಧದಷ್ಟು ವಾಪಸ್ ಬಂದಿದೆ. ಇನ್ನರ್ಧ ಎರಡು ವಾರಗಳಲ್ಲಿ ವಾಪಸ್ ಬರುತ್ತದೆ.
ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಹಂಬಲ ಸದ್ಯಕ್ಕಿಲ್ಲ. ಒಂದೊಂದೇ ಸ್ಟೆಪ್ ಹತ್ತಿ ಮೇಲೆ ಹೋಗುವ ಆಸೆ ನನ್ನದು. ಅದಕ್ಕೆ ಭಿನ್ನ ಭಿನ್ನ ಕಥೆಗಳನ್ನು ಆರಿಸಿಕೊಳ್ಳುತ್ತಿದ್ದೇನೆ.
67
ಮೂರು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆ
ಪ್ರತೀ ಸಿನಿಮಾ ಒಪ್ಪುವಾಗಲೂ ಪ್ರೇಕ್ಷಕರು ಈ ಸಿನಿಮಾ ನೋಡುವಂತಹ ಅಂಶಗಳಿವೆಯೇ, ಅವರು ಕೊಡುವ ದುಡ್ಡಿಗೆ ನ್ಯಾಯ ಸಲ್ಲುತ್ತದೆಯೇ ಎಂದು ಆಲೋಚಿಸಿಯೇ ಮುಂದಡಿ ಇಡುತ್ತೇನೆ. ವರ್ಷಗಳ ಬಳಿಕ ತಿರುಗಿ ನೋಡಿದಾಗ ಮನಸ್ಸಿಗೆ ಸಮಾಧಾನವಾಗಬೇಕು. ಅಂಥಾ ಸಿನಿಮಾಗಳಿಗೆ ನನ್ನ ಆದ್ಯತೆ.
ಈ ಚಿತ್ರದಲ್ಲಿ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆ. ಮ್ಯಾನರಿಸಂ, ವಾಯ್ಸ್, ಗೆಟಪ್ ಎಲ್ಲದರಲ್ಲೂ ಬದಲಾವಣೆ ಇದೆ. ಈ ಸಲ ನಾನೇ ಕನ್ನಡ ಡಬ್ಬಿಂಗ್ ಮಾಡಿದ್ದೇನೆ. ‘ಬನಾರಸ್’ ನಂತರ ಸ್ಪಷ್ಟವಾಗಿ ಕನ್ನಡ ಮಾತನಾಡುವುದನ್ನು ಕಲಿತಿದ್ದೇನೆ.
77
ಮೂರು ಸಿನಿಮಾ ಒಪ್ಪಿಕೊಂಡಿದ್ದೇನೆ
ರಚಿತಾ ರಾಮ್ ಜೊತೆ ಸ್ನೇಹ ಮೊದಲಿನಿಂದಲೂ ಇತ್ತು. ಅವರು ಯಾವತ್ತೂ ಸ್ಟಾರ್ ಎಂಬ ಹಮ್ಮು ತೋರುವುದಿಲ್ಲ. ಅವರೊಂದಿಗೆ ನಟಿಸಿದ್ದು ಖುಷಿ ಕೊಟ್ಟಿದೆ. ಮಲೈಕಾ ಸಹ ಶೂಟಿಂಗ್ ವೇಳೆ ಸಾಕಷ್ಟು ಸಪೋರ್ಟ್ ಮಾಡಿದರು.
ಇನ್ನೂ ಮೂರು ಸಿನಿಮಾ ಒಪ್ಪಿಕೊಂಡಿದ್ದೇನೆ. ಎರಡು ಸಿನಿಮಾ ಕತೆ ಅಂತಿಮವಾಗಿದೆ. ಅದರಲ್ಲಿ ಒಂದು ಈ ವರ್ಷಾಂತ್ಯವೇ ಬಿಡುಗಡೆಯಾಗಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.