ಆತ್ಮ*ಹತ್ಯೆ ಮಾಡಿಕೊಂಡವರು ಮುಟ್ಟಾಳರು
"ಬಾಡಿ ಶೇಮಿಂಗ್‌ನಿಂದ ಅವಮಾನಕ್ಕೆ ಒಳಗಾಗಿ ಆತ್ಮ*ಹತ್ಯೆ ಮಾಡಿಕೊಂಡವರು ಖಂಡಿತವಾಗಿಯೂ ಮುಟ್ಟಾಳರು. ನಾನು ಅಂಥವರ ಬಗ್ಗೆ ಮಾತಾಡೋದಕ್ಕೆ ಇಷ್ಟಪಡೋದಿಲ್ಲ. ಅದಕ್ಕೆ ಅವರು ಅರ್ಹರೂ ಅಲ್ಲ. ಒಂದು ಜೀವ, ಒಂದು ಜೀವನ. ಯಾಕೆ ಎಲ್ಲರೂ ನೆಗೆಟಿವ್ ಕಾಮೆಂಟ್‌ಗಳಿಗೆ ಕಿವಿ ಕೊಡುತ್ತಿದ್ದಾರೆ? ಸುತ್ತಲೂ ನೋಡಿದರೆ ಬೇಕಾದಷ್ಟು ಪೊಸೆಟಿವ್ ಅಂಶಗಳಿವೆ, ಕಣ್ಣು ತೆರೆದು ನೋಡಬೇಕಷ್ಟೇ.. ಎನೋ ಅವರಿವರ ಬಗ್ಗೆ ಮಾತಾಡುವವರು ಮಾತಾಡುತ್ತಲೇ ಇರುತ್ತಾರೆ.. ನಾವು ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಬಾರದು" ಎಂದು ರಚಿತಾ ರಾಮ್ ಹೇಳಿದ್ದಾರೆ.
ನಟಿ ರಚಿತಾ ರಾಮ್ ಹೇಳಿಕೆಗೆ ನೆಟ್ಟಿಗರು ಭಾರೀ ಬೆಂಬಲ ವ್ಯಕ್ತಪಡಿಸಿದ್ದಾರೆ. ಹಲವರು ರಚಿತಾ ರಾಮ್ ಅವರ ನೇರ ನಡೆ-ನುಡಿಗೆ ಶಹಬ್ಬಾಸ್ ಎಂದಿದ್ದರೆ ಹಲವರು ರಚಿತಾ ರಾಮ್ ಅವರು ದೇಹ-ಮನಸ್ಸು ಹಾಗೂ ಬಾಡಿ ಶೇಮಿಂಗ್ ಪರಿಣಾಮಗಳ ಬಗ್ಗೆ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ, ಚೆನ್ನಾಗಿ ಟಿಪ್ಸ್ ಹೇಳಿದ್ದಾರೆ ಎಂದಿದ್ದಾರೆ. ಒಟ್ಟಿನಲ್ಲಿ ರಚಿತಾ ರಾಮ್ ಪರ ಮೆಚ್ಚುಗೆಯ ಅಲೆ ಎದ್ದಿದೆ.