Sapthami Gowda : ನಟಿ ಸಪ್ತಮಿ ಗೌಡ ಹೊಸಪೇಟೆ, ಹಂಪಿ ಮತ್ತು ಕುಷ್ಟಗಿ ತೆರಳಿದ್ದು, ಐತಿಹಾಸಿಕ ಸ್ಥಳವಾದ ಹಂಪಿಯ ದರ್ಶನ ಪಡೆದು ಬಂದಿದ್ದಾರೆ. ಮಾಸ್ಕ್ ಧರಿಸಿ ಅಮ್ಮನ ಜೊತೆ ಹಂಪಿಯ ಮೂಲೆ ಮೂಲೆ ಸುತ್ತಾಡಿ ಬಂದಿದ್ದಾರೆ. ಸಪ್ತಮಿ ಫೋಟೊ ನೋಡಿ ಅಪ್ಪು ಫ್ಯಾನ್ಸ್ ಖುಷಿಯಾಗಿದ್ದಾರೆ.
ಸಪ್ತಮಿ ಗೌಡ, ಐತಿಹಾಸಿಕ ಹಂಪಿಯಲ್ಲಿ ಸುತ್ತಾಡಿದ್ದು, ಹಂಪಿ ವಿರೂಪಾಕ್ಷ ಮಂದಿರ, ಸೇರಿ ಹಂಪಿಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ದಿನವನ್ನು ಕಳೆದಿದ್ದಾರೆ.
59
ಮಾಸ್ಕ್ ಧರಿಸಿ ಸುತ್ತಾಡಿದ ಸಪ್ತಮಿ
ಸಪ್ತಮಿ ಗೌಡ ಅವರು ತಮ್ಮ ತಾಯಿ ಹಾಗೂ ಇತರರ ಜೊತೆ ಮಾಸ್ಕ್ ಧರಿಸಿ ಸುತ್ತಾಡಿದ್ದಾರೆ. ಅಭಿಮಾನಿಗಳ ಕಣ್ತಪ್ಪಿಸಿ ನಟಿ ಹಂಪಿ ದರ್ಶನ ಮಾಡಿದ್ದಾರೆ.
69
ಅಪ್ಪು ಪ್ರತಿಮೆಗೆ ಹಾರ
ಇನ್ನು ಸಪ್ತಮಿ ಗೌಡ ಹಂಚಿಕೊಂಡಿರುವ ಫೋಟೊದಲ್ಲಿ ನಟಿ ಅಪ್ಪು ಕಂಚಿನ ಪ್ರತಿಮೆಗೆ ಹಾರ ಹಾಕಿ, ಅಪ್ಪು ಜೊತೆ ಸೆಲ್ಫಿಗೆ ಫೋಸ್ ಕೊಟ್ಟಿದ್ದಾರೆ.
79
ಅಪ್ಪು ಅಭಿಮಾನಿಗಳಿಂದ ಮೆಚ್ಚುಗೆ
ಸಪ್ತಮಿ ಗೌಡ ಅವರ ಈ ಕಾರ್ಯವನ್ನು ಅಪ್ಪು ಅಭಿಮಾನಿಗಳು ಮೆಚ್ಚಿಕೊಂಡಿದ್ದು, ಯಾವಾಗಲೂ ಅಪ್ಪು ಆಶೀರ್ವಾದ ನಿಮ್ಮ ಮೇಲಿರಲಿ. ನಿಮ್ಮ ಸಿನಿಮಾ ಸೂಪರ್ ಹಿಟ್ ಆಗಲಿ ಎಂದು ಆಶೀರ್ವಧಿಸಿದ್ದಾರೆ.
89
ಸಪ್ತಮಿ ಗೌಡ ಸಿನಿಮಾಗಳು
ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ಸಿನಿಮಾ ಇಂಡಷ್ಟ್ರಿಗೆ ಎಂಟ್ರಿ ಕೊಟ್ಟ ಸಪ್ತಮಿ ಗೌಡ, ಕಾಂತಾರ, ವ್ಯಾಕ್ಸಿನ್ ವಾರ್, ಯುವ ತಮ್ಮುಡು ಮತ್ತು ಯುವ ಸಿನಿಮಾಗಳಲ್ಲಿ ನಟಿಸಿದ್ದಾರೆ.
99
ಮುಂಬರುವ ಸಿನಿಮಾಗಳು
ಇನ್ನೂ ಸಪ್ತಮಿ ಗೌಡ ಅವರು ಸತೀಶ್ ನೀನಾಸಂ ಜೊತೆ ದಿ ರೈಸ್ ಆಫ್ ಅಶೋಕಾ ಸಿನಿಮಾದಲ್ಲೂ, ಹಾಗೂ ಡಾಲಿ ಧನಂಜಯ್ ಜೊತೆಗೆ ಹಲಗಲಿ ಸಿನಿಮಾದಲ್ಲೂ ನಟಿಸುತ್ತಿದ್ದಾರೆ ಸಪ್ತಮಿ.