Megha Shetty: ಕನ್ನಡ ಕಿರುತೆರೆಯ ಮೂಲಕ ನಟನಾ ಕರಿಯರ್ ಆರಂಭಿಸಿ, ಇದೀಗ ಸಿನಿಮಾದಲ್ಲಿ ಮಿಂಚುತ್ತಿರುವ ನಟಿ ಮೇಘಾ ಶೆಟ್ಟಿ ನೀಲಿ ಬಣ್ಣದ ಸೀರೆಯುಟ್ಟು ಫೋಟೊ ಶೂಟ್ ಮಾಡಿಸಿದ್ದು, ನಟಿಯ ಸಿಂಪಲ್ ಆದರೆ, ಬ್ಯೂಟಿಫುಲ್ ಲುಕ್ ಗೆ ಅಭಿಮಾನಿಗಳು ಮನಸೋತಿದ್ದಾರೆ.
ಜೊತೆ ಜೊತೆಯಲಿ ಸೀರಿಯಲ್ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ನಟಿ ಮೇಘಾ ಶೆಟ್ಟಿ. ನಟಿಸಿದ ಮೊದಲ ಸೀರಿಯಲೇ ಸೂಪರ್ ಹಿಟ್. ಮತ್ತೆ ನಟಿ ಹಿಂದಿರುಗಿ ನೋಡಲೇ ಇಲ್ಲ. ನೇರವಾಗಿ ಬೆಳ್ಳಿ ತೆರೆಗೆ ಕಾಲಿಟ್ಟಿದ್ದರು ಬೆಡಗಿ.
27
ಸಾಲು ಸಾಲು ಸಿನಿಮಾಗಳಲ್ಲಿ ನಟನೆ
ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ತ್ರಿಬಲ್ ರೈಡ್ ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ಮೇಘಾ ಶೆಟ್ಟಿಗೆ ನಂತರ ಸಾಲು ಸಾಲು ಆಫರ್ ಗಳು ಸಿಗುತ್ತಾ ಸಾಗಿದವು. ಸದ್ಯಕ್ಕಂತೂ ಚಂದನವನದಲ್ಲಿ ಭಾರಿ ಸದ್ದು ಮಾಡ್ತಿದ್ದಾರೆ ನಟಿ.
37
OLC ಸಿನಿಮಾ
ಇತ್ತೀಚೆಗೆ ಮೇಘಾ ಶೆಟ್ಟಿ ಅಭಿನಯದ OLC ಅಥವಾ ಆಪರೇಷನ್ ಲಂಡನ್ ಕೆಫೆ ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾವನ್ನು ಜನ ಇಷ್ಟಪಟ್ಟು ನೋಡುತ್ತಿದ್ದಾರೆ, ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಮೇಘಾ ಶೆಟ್ಟಿ ಸಿನಿಮಾ ಪ್ರಚಾರ ಕೂಡ ಜೋರಾಗಿಯೇ ನಡೆಯುತ್ತಿದೆ.
ಸಿನಿಮಾ ಬಗ್ಗೆ ಮಾತನಾಡಿದ ಮೇಘಾ ಶೆಟ್ಟಿ 'ಆಪರೇಷನ್ ಲಂಡನ್ ಕೆಫೆ' ಚಿತ್ರದಲ್ಲಿ ಬಜಾರಿ ಹುಡುಗಿಯಾಗಿ ನಟಿಸಿದ್ದೇನೆ. ಸಡಗರ ರಾಘವೇಂದ್ರ ಅವರ ನಿರ್ದೇಶನ, ಕವೀಶ್ ಶೆಟ್ಟಿ ಬರೆದಿರುವ ಕಥೆ ಚೆನ್ನಾಗಿದೆ. ಒಳ್ಳೆಯ ತಂಡದ ಜೊತೆಗೆ ಕೆಲಸ ಮಾಡಿರುವ ಖುಷಿಯಿದೆ" ಎನ್ನುತ್ತಾರೆ ಮೇಘಾ ಶೆಟ್ಟಿ.
57
ನೀಲಿ ಸೀರೆಯಲ್ಲಿ ಮಿಂಚಿಂಗ್
ಪ್ರಚಾರದಲ್ಲಿ ನೀಲಿ ಬಣ್ಣದ ಸೀರೆಯಲ್ಲಿ ಮಿಂಚಿದ ಮೇಘಾ ಶೆಟ್ಟಿ, ಅದೇ ಸೀರೆಯಲ್ಲಿ ಫೋಟೊ ಶೂಟ್ ಮಾಡಿಸಿದ್ದಾರೆ. ಡಾರ್ಕ್ ನೀಲಿ ಸೀರೆ, ಡಿಸೈನರ್ ಬ್ಲೌಸ್ ಧರಿಸಿ, ನಟಿ ತುಂಬಾನೆ ಬೋಲ್ಡ್ ಮತ್ತು ಬ್ಯೂಟಿಫುಲ್ ಆಗಿ ಕಾಣಿಸಿದ್ದಾರೆ.
67
ಪಡ್ಡೆಗಳು ಫಿದಾ
ನೀಲಿ ಸೀರೆಯಲ್ಲಿ ಮೇಘಾ ಶೆಟ್ಟಿ ತುಂಬಾನೆ ಮುದ್ದಾಗಿ ಜೊತೆಗೆ ಗ್ಲಾಮರಸ್ ಆಗಿ ಕಾಣಿಸುತ್ತಿದ್ದು, ಅವರ ಲುಕ್ ಗೆ ಪಡ್ಡೆಗಳು ಫಿದಾ ಆಗಿದ್ದಾರೆ. ದಂತಹ ಗೊಂಬೆಯಂತೆ ಕಾಣುವ ಬೆಡಗಿದೆ, ಆಕೆಯ ಸಿಂಪಲ್ ಎಲಿಗೆಂಟ್ ಲುಕ್ ಗೆ ಜನ ಮೆಚ್ಚುಗೆ ಸೂಚಿಸಿದ್ದಾರೆ.
77
ಮೇಘಾ ಶೆಟ್ಟಿ ಸಿನಿಮಾಗಳು
ಟ್ರಿಪಲ್ ರೈಡಿಂಗ್, ದಿಲ್ ಪಸಂದ್, ಕೈವಾ, ಆಫ್ಟರ್ ಆಪರೇಶನ್ ಲಂಡನ್ ಕೆಫೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಚೀತಾ, ಗ್ರಾಮಾಯಣ ಸಿನಿಮಾ ಬಿಡುಗಡೆಗೆ ಬಾಕಿ ಇದೆ.