ಕನ್ನಡ ನಟಿ Radhika Kumaraswamy ಸೋಶಿಯಲ್ ಮೀಡಿಯಾದಲ್ಲಿ ಹೊಸದಾಗಿ ಫೋಟೊಸ್ ಶೇರ್ ಮಾಡಿದ್ದಾರೆ. ಮಗಳಿಗೆ 15 ವರ್ಷ ಆದ್ರೂ, ಇನ್ನೂ ಹದಿಹರೆಯದ ಬ್ಯೂಟಿಯಂತೆ ಕಾಣುವ ರಾಧಿಕಾ ಕುಮಾರಸ್ವಾಮಿ ಲುಕ್ ಗೆ ಅಭಿಮಾನಿಗಳು ಮನಸೋತಿದ್ದಾರೆ. ನಿಮಗೆ ವಯಸ್ಸೇ ಆಗಲ್ವಾ ಎಂದು ಕೇಳಿದ್ದಾರೆ.
ನಿನಗಾಗಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಮೋಡಿ ಮಾಡಿದ ಚೆಲುವೆ ರಾಧಿಕಾ ಕುಮಾರಸ್ವಾಮಿ. ನಂತರ ನಟಿಯಾಗಿ, ನಿರ್ಮಾಪಕಿಯಾಗಿ ಗುರುತಿಸಿಕೊಂಡು ಕನ್ನಡ ಚಿತ್ರರಂಗದಲ್ಲಿ ಯಶಸ್ಸು ಸಾಧಿಸಿದರು.
27
ಹೊಸ ಫೋಟೊ ಶೂಟ್
ಇದೀಗ ರಾಧಿಕಾ ಕುಮಾರಸ್ವಾಮಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೊಸದಾಗಿ ಫೋಟೊ ಶೇರ್ ಮಾಡಿದ್ದು, ಮಿಸಸ್ ಕುಮಾರಸ್ವಾಮಿಯ ಅಂದವನ್ನು ನೋಡಿ ಅಭಿಮಾನಿಗಳು ಹೊಗಳಿದ್ದಾರೆ, 15 ವರ್ಷದ ಮಗಳ ತಾಯಿಯಾಗಿದ್ದರೂ, ಮಿಸಸ್ ಕುಮಾರಸ್ವಾಮಿಗೆ ವಯಸ್ಸು ಆಗೋದೇ ಇಲ್ಲವೇ ಎಂದು ಕೇಳಿದ್ದಾರೆ.
37
ಟ್ರಾನ್ಸ್’ಪರೆಂಟ್ ಸೀರೆಯಲ್ಲಿ ರಾಧಿಕಾ
ರಾಧಿಕಾ ಕುಮಾರಸ್ವಾಮಿ ತಿಳಿ ಹಳದಿ, ಪಿಂಕ್, ಆರೆಂಜ್ ಬಣ್ಣ ಹೊಂದಿರುವ ಟ್ರಾನ್ಸ್’ಪರೆಂಟ್ ಸೀರೆಯನ್ನು ಧರಿಸಿದ್ದು, ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. ನಿನಗಾಗಿ ಸಿನಿಮಾ ಬಂದಾಗ ನಟಿ ಹೇಗಿದ್ದರೋ? ಅದೇ ರೀತಿಯಲ್ಲಿ ಈಗಲೂ ರಾಧಿಕಾ ಕುಮಾರಸ್ವಾಮಿ ಕಾಣಿಸಿಕೊಂಡಿದ್ದಾರೆ.
ನಟಿಯ ಫೋಟೊ ನೋಡಿ ಜನ ನಿಮಗೆ ವಯಸ್ಸು ಜಾಸ್ತಿ ಆಗ್ತಿಲ್ಲ ಕಮ್ಮಿ ಆಗ್ತಿದೆ ಅನ್ಸುತ್ತೆ. ನಿನಗಾಗಿ ಫಿಲಂ ನಲ್ಲಿ ಇರೋ ತರಾನೇ ಇದ್ದೀರಾ. ಇಂದ್ರ ಲೋಕದಿಂದ ಬಂದ.. ಇಂದ್ರಜ ನೀವು. ಸೌಂದರ್ಯ ದೇವತೆ. ಟೀನೇಜ್ ಹುಡುಗೀರು ನಾಚಬೇಕು, ನಿಮ್ಮ ಆಂದಾನಾ ನೋಡಿ. ಅಷ್ಟೊಂದು ಸುಂದರವಾಗಿದ್ದೀರಿ ನೀವು.
57
ಶ್ರೀಮಂತ ನಟಿ
ರಾಧಿಕಾ ಕುಮಾರಸ್ವಾಮಿಯವರು ಕನ್ನಡ ಚಿತ್ರರಂಗದ ಶ್ರೀಮಂತ ನಟಿಯಾಗಿದ್ದಾರೆ. 39 ವರ್ಷದ ರಾಧಿಕಾ ಕುಮಾರಸ್ವಾಮಿ ಅವರ ಆಸ್ತಿ ಮೊತ್ತ ಬರೋಬ್ಬರು 128 ಕೋಟಿ. ಇವರು ನಟನೆ, ನಿರ್ಮಾಣ ಜೊತೆಗೆ ಬ್ಯುಸಿನೆಸ್ ಕೂಡ ಮಾಡುತ್ತಿದ್ದಾರೆ.
67
ಭೈರಾದೇವಿ
ರಾಧಿಕಾ ಕುಮಾರಸ್ವಾಮಿ ಕೊನೆಯದಾಗಿ ಭೈರಾದೇವಿ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ತಕ್ಕ ಮಟ್ಟಿಗೆ ಯಶಸ್ವಿಯಾಗಿತ್ತು. ಈ ಚಿತ್ರದ ನಿರ್ಮಾಣವನ್ನೂ ಸಹ ರಾಧಿಕಾ ಅವರೇ ಮಾಡಿದ್ದರು. ಇದೀಗ ಅಜಾಗ್ರತ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಯಾವಾಗ ರಿಲೀಸ್ ಆಗುತ್ತದೆ ಎನ್ನುವ ಮಾಹಿತಿ ಇಲ್ಲ.
77
ರಾಧಿಕಾ ನಟಿಸಿದ ಸಿನಿಮಾಗಳು
ರಾಧಿಕಾ ಕುಮಾರಸ್ವಾಮಿ ನಟಿಸಿದ ಸೂಪರ್ ಹಿಟ್ ಸಿನಿಮಾಗಳು ಯಾವುವು ಎಂದರೆ, ನಿನಗಾಗಿ, ಪ್ರೇಮ ಖೈದಿ, ರೋಮಿಯೋ ಜೂಲಿಯೆಟ್, ತವರಿಗೆ ಬಾ ತಂಗಿ, ತಾಯಿ ಇಲ್ಲದ ತಬ್ಬಲಿ, ರಿಷಿ, ಮಣಿ, ಆಟೊ ಶಂಕರ್, ಅಣ್ಣ ತಂಗಿ, ದಮಯಂತಿ, ರವಿ ಬೋಪಣ್ಣ ಸಿನಿಮಾಗಳಲ್ಲಿ ರಾಧಿಕಾ ನಟಿಸಿದ್ದಾರೆ.