ಮಕ್ಕಳ ಗ್ಯಾಂಗ್ ಜೊತೆ ರಾಧಿಕಾ ಪಂಡಿತ್; 'ಬಚ್ಚಾ ಪಾರ್ಟಿ' ಎಂದ ಯಶ್ ಪತ್ನಿ

Published : Jun 16, 2022, 05:02 PM IST

ಸ್ಯಾಂಡಲ್‌ವುಡ್‌ನ ಖ್ಯಾತ ನಟಿ, ರಾಕಿಂಗ್ ಸ್ಟಾರ್ ಯಶ್ ಪತ್ನಿ ರಾಧಿಕಾ ಪಂಡಿತ್ ಸದ್ಯ ಮಕ್ಕಳ ಜೊತೆ ಸಮಯ ಕಳೆಯುತ್ತಿದ್ದಾರೆ. ಕೆಜಿಎಫ್-2 ಭರ್ಜರಿ ಸಕ್ಸಸ್‌ನಲ್ಲಿರುವ ರಾಕಿಂಗ್ ಜೋಡಿ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ. 

PREV
16
 ಮಕ್ಕಳ ಗ್ಯಾಂಗ್ ಜೊತೆ ರಾಧಿಕಾ ಪಂಡಿತ್; 'ಬಚ್ಚಾ ಪಾರ್ಟಿ' ಎಂದ ಯಶ್ ಪತ್ನಿ
radhika

ಸ್ಯಾಂಡಲ್‌ವುಡ್‌ನ ಖ್ಯಾತ ನಟಿ, ರಾಕಿಂಗ್ ಸ್ಟಾರ್ ಯಶ್ ಪತ್ನಿ ರಾಧಿಕಾ ಪಂಡಿತ್ ಸದ್ಯ ಮಕ್ಕಳ ಜೊತೆ ಸಮಯ ಕಳೆಯುತ್ತಿದ್ದಾರೆ. ಕೆಜಿಎಫ್-2 ಭರ್ಜರಿ ಸಕ್ಸಸ್‌ನಲ್ಲಿರುವ ರಾಕಿಂಗ್ ಜೋಡಿ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ. 

26

ಕೆಜಿಎಫ್-2 ರಿಲೀಸ್ ಆದ ನಂತರ ರಾಕಿಂಗ್ ಜೋಡಿ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚಿಷ್ಟೆ ಗೋವಾದಲ್ಲಿ ಕಾಣಿಸಿಕೊಂಡಿದ್ದ ರಾಧಿಕಾ ಮತ್ತು ಯಶ್ ಫೋಟೋಗಳು ವೈರಲ್ ಆಗಿತ್ತು. ಇದೀಗ ರಾಧಿಕಾ ಮಕ್ಕಳ ಜೊತೆ ಇರುವ ಫೋಟೋವನ್ನು ಶೇರ್ ಮಾಡಿದ್ದಾರೆ. 

36

ರಾಧಿಕಾ ಒಂದಿಷ್ಟು ಮುದ್ದಾದ ಮಕ್ಕಳ ಜೊತೆ ಇರುವ ಪೋಟೋವನ್ನು ಹಂಚಿಕೊಂಡಿದ್ದಾರೆ. ಮಗಳು ಐರಾ ಕೂಡ ಮಕ್ಕಳ ಗ್ಯಾಂಗ್‌ನಲ್ಲಿದ್ದಾರೆ. ರಾಧಿಕಾ ಮಕ್ಕಳ ಗ್ಯಾಂಗ್‌ನಲ್ಲಿ  ಐರಾ ಸೋದರ ಸಂಬಂಧಿರ ಮಕ್ಕಳಾ ಇದ್ದಾರೆ. 

46

ಸಂಬಂಧಿಕರ ಎಲ್ಲಾ ಮಕ್ಕಳನ್ನು ಸೇರಿಕೊಂಡು ರಾಧಿಕಾ ಮಕ್ಕಳ ಜೊತೆ ಸಮಯ ಕಳೆಯುತ್ತಿದ್ದಾರೆ.  ಫೋಟೋ ಶೇರ್ ಮಾಡಿ ಮಕ್ಕಳ ದರ್ಬಾರ್, ಬಚ್ಚಾ ಪಾರ್ಟಿ ಎಂದು ಕ್ಯಾಪ್ಷನ್ ನೀಡಿದ್ದಾರೆ. 

56

ರಾಧಿಕಾ ಪಂಡಿತ್ ಯಾವುದೇ ಫೋಟೋ ಶೇರ್ ಮಾಡಿದ್ರು ಕ್ಷಣಾರ್ಧದಲ್ಲಿ ವೈರಲ್ ಆಗುತ್ತದೆ. ಐರಾ ಮತ್ತು ಯಥರ್ವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತದೆ. ಅಪ್ಪ-ಅಮ್ಮನಷ್ಟೆ ಅಭಿಮಾನಿಗಳು ಐರಾ-ಯಥರ್ವನಿಗೂ ಸಾಮಾಜಿಕ ಜಾಲತಾಣದಲ್ಲಿದ್ದಾರೆ. 

66

ಮಕ್ಕಳ ಜೊತೆ ಫೋಟೋ ಶೇರ್ ಮಾಡುವ ಮೊದಲು ರಾಧಿಕಾ ಸಹೋದರನ ಜೊತೆ ಇರುವ ಫೋಟೋವನ್ನು ಹಂಚಿಕೊಂಡಿದ್ದರು. 3 ವರ್ಷಗಳ ನಂತರ ಭೇಟಿಯಾಗಿದ್ದು ಎಂದು ನಗುತ್ತಿರುವ ಫೋಟೋ ಹಂಚಿಕೊಂಡಿದ್ದರು. ಸಾಮಾಜಿಕ ಜಾಲತಾಣಲ್ಲಿ ಸಖತ್ ಆಕ್ಟೀವ್ ಆಗಿರುವ ರಾಧಿಕಾ ಆಗಾಗ ಮಕ್ಕಳ ಪೋಟೋವನ್ನು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. 

Read more Photos on
click me!

Recommended Stories