ಜೂನ್ 16. 1990ರಲ್ಲಿ ಚಿಕ್ಕಮಗಳೂರಿನಲ್ಲಿ ಹುಟ್ಟಿದ ಸುಂದರಿ ದೀಪಾ ಸನ್ನಿಧಿ ಇಂದು 32ರ ವಸಂತಕ್ಕೆ ಕಾಲಿಟ್ಟಿದ್ದಾರೆ. ದೀಪಾ ಹುಟ್ಟು ಹೆಸರು ರಹಸ್ಯ ಎಂದು.
2011ರಲ್ಲಿ ಸಾರಥಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಜರ್ನಿ ಆರಂಭಿಸಿದ ದೀಪಾ ಸುಮಾರು 10 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿರುವ ದೀಪಾ ಮಾಡಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. architectural engineering ವ್ಯಾಸಂಗ ಮಾಡುವಾಗ ಸಾರಥಿ ಆಫರ್ ಬಂದಿತ್ತು.
ಮಾಡಲಿಂಗ್ ಜೊತೆ ಒಂದು ವರ್ಷ ಆಭರಣ ವಿನ್ಯಾಸ ಮಾಡಿದ್ದಾರೆ. ಸಿನಿಮಾ ಮಾಡುತ್ತಲೇ ದೂರ ಶಿಕ್ಷಣದ ಮೂಲಕ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದಿದ್ದಾರೆ.
ಮೊದಲ ಸಿನಿಮಾ ಚಿತ್ರೀಕರಣ ಸಮಯದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ ಪರಮಾತ್ಮ ಸಿನಿಮಾಗೆ ಸಹಿ ಮಾಡಿದ್ದರು. 2012ರಲ್ಲಿ ಯಶ್‌ಗೆ ಜೋಡಿಯಾಗಿ ಜಾನು ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
2015ರಲ್ಲಿ ತಮಿಳು ಚಿತ್ರರಂಗಕ್ಕೆ ಕಾಲಿಟ್ಟರು. ಎನಕ್ಕುಲ್ ಒರುವನ್ ಚಿತ್ರದಲ್ಲಿ ದಿವ್ಯಾ ಆಗಿ, ಯಚ್ಚನ್ ಸಿನಿಮಾದಲ್ಲಿ ಶ್ವೇತಾ ಆಗಿ ಮಿಂಚಿದ್ದಾರೆ.
2017ರಲ್ಲಿ ಚಕ್ರವರ್ತಿ ಸಿನಿಮಾ ಬಿಡುಗಡೆಯಾಗಿತ್ತು, ಅದೇ ದೀಪಾ ಅವರ ಕೊನೆ ಸಿನಿಮಾ. ಮಾಂಜಾ ಶೀರ್ಷಿಕೆಯ ಸಿನಿಮಾ ಸಹಿ ಮಾಡಿದ್ದಾರೆ ಎನ್ನಲಾಗಿದೆ ಆದರೆ ಸ್ಪಷ್ಟ ಮಾಹಿತಿ ಇಲ್ಲ.