ಥೈಲ್ಯಾಂಡ್‌ನಲ್ಲಿ ಹಾಟ್ ಆದ ಆಶಿಕಾ; ಚುಟುಚುಟು ಬೆಡಗಿಯ ಫೋಟೋ ವೈರಲ್

First Published | Jun 14, 2022, 5:38 PM IST

ಆಶಿಕಾ ಸದ್ಯ ಥೈಲ್ಯಾಂಡ್ ಪ್ರವಾಸದಲ್ಲಿದ್ದಾರೆ. ಪ್ರವಾಸದ ಒಂದಿಷ್ಟು ಫೋಟೋಗಳನ್ನು ಆಶಿಕಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಥೈಲ್ಯಾಂಡ್ ಕಡಲ ಕಿನಾರೆಯಲ್ಲಿ ಹಾಟ್ ಅವತಾರ ತಾಳಿರುವ ಆಶಿಕಾ ಫೋಟೋಗಳು ವೈರಲ್ ಆಗಿವೆ. 

ಸ್ಯಾಂಡಲ್‌ವುಡ್ ಖ್ಯಾತ ನಟಿ ಆಶಿಕಾ ರಂಗನಾಥ್ ಸಿಕ್ಕಾಪಟ್ಟೆ ಹಾಟ್ ಆಗುತ್ತಿದ್ದಾರೆ. ಇತ್ತೀಚಿಗೆ ಆಶಿಕಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿರುವ ಫೋಟೋ ಪಡ್ಡೆ ಯುವಕರ ನಿದ್ದೆಗೆಡಿಸುತ್ತಿದೆ. 

ಆಶಿಕಾ ಸದ್ಯ ಥೈಲ್ಯಾಂಡ್ ಪ್ರವಾಸದಲ್ಲಿದ್ದಾರೆ. ಪ್ರವಾಸದ ಒಂದಿಷ್ಟು ಫೋಟೋಗಳನ್ನು ಆಶಿಕಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಥೈಲ್ಯಾಂಡ್ ಕಡಲ ಕಿನಾರೆಯಲ್ಲಿ ಹಾಟ್ ಅವತಾರ ತಾಳಿರುವ ಆಶಿಕಾ ಫೋಟೋಗಳು ವೈರಲ್ ಆಗಿವೆ. 
 

Tap to resize

ಆಶಿಕಾ ಶಾರ್ಟ್ ಡೆನಿಮ್ ಮತ್ತು ಕೆಂಪು ಬಣ್ಣದ ಟಾಪ್ ಧರಿಸಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಆಶಿಕಾ ಪೋಟೋಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿದೆ. 

ಆಶಿಕಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಆಗಾಗಾ ಪೋಟೋಗಳನ್ನು ಸೇರ್ ಮಾಡುತ್ತಿರುತ್ತಾರೆ. ಇತ್ತೀಚಿಗಷ್ಟೆ ಆಶಿಕಾ ಹಾಟ್ ಫೋಟೋಗಳನ್ನು ಶೇರ್ ಮಾಡಿದ್ದರು. ಇದೀಗ ಮತ್ತೆ ಹಾಟ್ ಆಗಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಟೆಂಪ್ರೇಚರ್ ಹೆಚ್ಚಿಸಿದ್ದಾರೆ. 
 

ಆಶಿಕಾ ಕೊನೆಯದಾಗಿ ಗರುಡ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಜೊತೆಗೆ ಅವತಾರ ಪುರುಷ ಸಿನಿಮಾ ಕೂಡ ಇತ್ತೀಚಿಗಷ್ಟೆ ರಿಲೀಸ್ ಆಗಿದೆ. ಈ ಎರಡು ಸಿನಿಮಾಗಳು ಹೇಳಿಕೊಳ್ಳುವಷ್ಟು  ಯಶಸ್ಸು ಕಾಣಲಿಲ್ಲ. ಭಾರಿ ನಿರೀಕ್ಷೆ ಮೂಡಿಸಿದ್ದ ಅವತಾರ ಪರುಷ ಸಿನಿಮಾ ಕೂಡ ನೆಲಕಚ್ಚಿದೆ.

ashikaashika

ಸದ್ಯ ಆಶಿಕಾ ಬಳಿ ರ್ಯಾಂಬೋ, ಓ2, ಇನ್ನು ಹೆಸರಿಡದ ಅವತಾರ ಸಿನಿಮಾವಿದೆ. ಸಿನಿಮಾಗಿಂತ ಹೆಚ್ಚಾಗಿ ಆಶಿಕಾ ಇತ್ತೀಚಿಗೆ ಫೋಟೋಶೂಟ್ ಮೂಲಕ ಸದ್ದು ಮಾಡುತ್ತಿದ್ದಾರೆ. ಆಶಿಕಾ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಸದ್ಯ ಅಭಿಮಾನಿಗಳಲ್ಲಿದೆ.    
 

Latest Videos

click me!