ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ಮಿಂಚುತ್ತಿರುವ ನಟಿ ಪ್ರಿಯಾಮಣಿ ಓಟಿಟಿ ಕ್ಷೇತ್ರಕ್ಕೆ ಕಾಲಿಟ್ಟು ತಮ್ಮ ವೃತ್ತಿ ಜೀವನಕ್ಕೆ ಇನ್ನು ಹೆಚ್ಚು ಬಣ್ಣ ತುಂಬಿಸಿಕೊಂಡರು.
ಸಾಮಾಜಿಕ ಜಾಲತಾಣಗಳಿಂದ ಸದಾ ದೂರ ಉಳಿಯುವ ಪ್ರಿಯಾಮಣಿ ವೈಯಕ್ತಿಕ ಜೀವನದ ಬಗ್ಗೆ ಸುಳ್ಳು ಸುದ್ದಿಯೊಂದು ಹರಿದಾಡುತ್ತಿದೆ. ಡಿವೋರ್ಸ್ ಕೊಡ್ತಿದ್ದಾರೆ, ಮಕ್ಕಳಾಗಿಲ್ಲ, ದತ್ತು ತೆಗೆದುಕೊಳ್ಳುತ್ತಿದ್ದಾರೆ...ಹೀಗೆ ವಿಚಾರ ದೊಡ್ಡದಾಡುತ್ತಿದೆ. ಈ ಕಾರಣ ಸ್ವತಃ ಪ್ರಿಯಾಮಣಿ ಕ್ಲಾರಿಟಿ ಕೊಟ್ಟಿದ್ದಾರೆ.
ಎಲ್ಲೆಡೆ ಹರಿದಾಡುತ್ತಿರುವ ವಿಚಾರ ಸುಳ್ಳು ನಾವು ವಿಚ್ಛೇದನ ಪಡೆಯುತ್ತಿಲ್ ದಾಂಪತ್ಯ ಜೀವನದಲ್ಲಿ ಸುಖವಾಗಿದ್ದೀವಿ ಎಂದು ಪ್ರಿಯಾಮಣಿ ಹೇಳಿದ್ದಾರೆ.
2017ರಲ್ಲಿ ಆಗಸ್ಟ್ 23ರಂದು ಖ್ಯಾತ ಉದ್ಯಮಿ ಮುಸ್ತಫಾರನ್ನು ಅದ್ಧೂರಿಯಾಗಿ ಮದುವೆಯಾದರು. ಮದುವೆಯಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದರು.
2009ರಲ್ಲಿ ರಾಮ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪ್ರಿಯಾಮಣಿ ಏನೋ ಒಂಥರಾ, ವಿಷ್ಣುವರ್ಧನ, ಕೋ ಕೋ, ಅಣ್ಣ ಬಾಂಡ್,ಚಾರುಲತಾ, ಲಕ್ಷ್ಮಿ , ಅಂಬರೀಶಾ, ಕಲ್ಪನಾ 2, ದನ ಕಾಯೋನು, ಇದೊಳ್ಳೆ ರಾಮಾಯಣ, ಚೌಕಾ, ನನ್ನ ಪ್ರಕಾರ ಸೇರಿಂದತೆ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಮೊದಲ ಚಿತ್ರದಲ್ಲೇ ರಾಷ್ಟ್ರಮಟ್ಟದ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿರುವ ಪ್ರಿಯಾಮಣಿ ಬ್ಯಾಕ್ ಟು ಬ್ಯಾಕ್ 9 ಸಿನಿಮಾ ಅವಾರ್ಡ್‌ಗಳನ್ನು ಪಡೆದಿದ್ದಾರೆ.