ನಟಿ ಮತ್ತು ಸಂಸದೆ ಸುಮಲತಾ ಅಂಬರೀಶ್ ಕೂಡ ಹರ್ ಘರ್ ತಿರಂಗಾ ಅಭಿಯಾನದಲ್ಲಿ ಭಾಗಿಯಾಗಿದ್ದರು. ಫೋಟೋ ಶೇರ್ ಮಾಡಿ, 'ಸಾವಿರಾರು ಜನರ ತ್ಯಾಗ-ಬಲಿದಾನ, ಲಕ್ಷಾಂತರ ಜನರ ಹೋರಾಟದ ಫಲವಾಗಿ ಸ್ವಾತಂತ್ರ್ಯದ ಅಮೃತ ಮಹೋತ್ಸವನ್ನು ಜಾತಿ, ಮತ, ಅಂತಸ್ತುಗಳ ವ್ಯತ್ಯಾಸಗಳ ಹೊರತಾಗಿ ಆಚರಿಸುತ್ತಿದ್ದೇವೆ. ಹಿರಿಯರ ಹೋರಾಟವನ್ನು ಗೌರವದಿಂದ ಸ್ಮರಿಸುತ್ತಾ, ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಜೈ ಭಾರತಾಂಬೆ, ಜೈ ಕರ್ನಾಟಕ ಮಾತೆ' ಎಂದು ಹೇಳಿದ್ದಾರೆ.