ರಿಯಾಲಿಟಿ ಶೋಗಳಿಗೆ ಸೀರೆ ಬೇಕೆಂದು ಡಿಮ್ಯಾಂಡ್ ಮಾಡ್ತಾರಾ ರಚಿತಾ ರಾಮ್; ಸತ್ಯ ರಿವೀಲ್?

First Published | Aug 17, 2022, 6:15 PM IST

ಬೆಳ್ಳಿ ತೆರೆ- ಕಿರುತೆರೆ ಲೋಕದಲ್ಲಿ ಮಿಂಚುತ್ತಿರುವ ರಚಿತಾ ರಾಮ್. ಡ್ರೆಸಿಂಗ್ ಸೆನ್ಸ್‌ ಬಗ್ಗೆ ಪದೇ ಪದೇ ಚರ್ಚೆ ಆಗುತ್ತಿರುವುದು ಯಾಕೆ? 

ಸ್ಯಾಂಡಲ್‌ವುಡ್‌ ಓನ್ ಅಂಡ್ ಓನ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್‌ ಮೂರ್ನಾಲ್ಕು ವರ್ಷ ಕಿಂಚಿತ್ತೂ ಫ್ರೀ ಇಲ್ಲ ಏಕೆಂದರೆ ಕೈ ತುಂಬಾ ಸಿನಿಮಾ- ರಿಯಾಲಿಟಿ ಶೋಗಳಿದೆ. 

ಸ್ಟಾರ್ ನಟನರ ಜೊತೆ ಅಭಿನಯಿಸಿರುವ ರಚಿತಾ ರಾಮ್ ಕಥೆ ಆಯ್ಕೆ ಮಾಡಿಕೊಳ್ಳುವುದರಲ್ಲಿ ತುಂಬಾನೇ choosey. ನೋಡುವವರಿಗೆ ಯಾವತ್ತೂ ಇರಿಸುಮುರಿಸು ಆಗಬಾರದು ಅನ್ನೋದು ಅವರ ಥಿಂಕಿಂಗ್.

Tap to resize

ಕಳೆದ ಮೂರ್ನಾಲ್ಕು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಜಡ್ಜ್‌ ಆಗಿ ಕಾಣಿಸಿಕೊಳ್ಳುತ್ತಿರುವ ರಚ್ಚು ಒಂದೇ ರೀತಿ ಸ್ಟೈಲಿಂಗ್ ಮಾಡುತ್ತಿದ್ದಾರೆ ಎಂದು ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿಸುತ್ತಿದ್ದಾರೆ.

ಮಜಾ ಭಾರತ, ಡ್ಯಾನ್ಸ್ ರಿಯಾಲಿಟಿ ಸೋ, ಡ್ರಾಮಾ ಜ್ಯೂನಿಯರ್ಸ್‌ನಲ್ಲಿ ತೀರ್ಪುಗಾರರ ಸ್ಥಾನದಲ್ಲಿರುವ ರಚಿತಾ ತುಂಬಾನೇ ಟ್ರೆಡಿಷನಲ್‌ ಲುಕನೇ ಆಯ್ಕೆ ಮಾಡಿಕೊಳ್ಳುತ್ತಿದ್ದರೂ ಅದರಲ್ಲೂ ಸೀರೆನೇ ಹೆಚ್ಚಿಗೆ ಬಳಸುತ್ತಿದ್ದರು. 

'ಸಾವಿರಾರೂ ಜನರು ನೋಡುವ ಶೋ ಆಗಿರುವುದರಿಂದ ರಚಿತಾ ರಾಮ್ ಅವರೇ ಹೇಳುತ್ತಾರೆ ಲುಕ್ ಸಿಂಪಲ್ ಮತ್ತು ಡೀಸೆಂಟ್ ಆಗಿರಬೇಕೆಂದು. ಮಕ್ಕಳ ಶೋ ಆಗಿರುವುದರಿಂದ ಟ್ರೆಡಿಷನಲ್ ಆಗಿರಬೇಕು ಎನ್ನುತ್ತಾರೆ' ಎಂದು ಡಿಸೈನರ್ ವರ್ಷಿಣಿ ಜಾನಕಿರಾಮ್ ಖಾಸಗಿ ಸಂದರ್ಶನಲ್ಲಿ ಹೇಳಿದ್ದರು.

'ಸೀರೆ ಎಷ್ಟು ವರ್ಷಗಳ ನಂತರ ಬೇಕಿದ್ದರೂ ಬಳಸಬಹುದು. ಯಾರು ಬೇಕಿದ್ದರೂ ಬಳಸಬಹುದು. ಮತ್ತೊಂದು ವಿಶೇಷತೆ ಏನೆಂದರೆ ಸೀರೆಯಲ್ಲಿ ಎಲ್ಲೂ ಚೆಂದ ಕಾಣಿಸುತ್ತಾರೆ. ಹೀಗಾಗಿ ರಚ್ಚುಗೆ ಸೀರೆನೇ ಬೇಕು' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ರಚ್ಚು ಕೈಯಲ್ಲಿ ಈಗ ವೀರಂ, ಮಾರ್ಟಿನ್, ಬ್ಯಾಡ್ ಮ್ಯಾನರ್ಸ್‌, ಶಬರಿ ಸರ್ಚಿಂಗ್ ಫಾರ್ ರಾವಣ, ಲವ್ ಮಿ ಆರ್ ಹೇಟ್ ಮೀ ಮತ್ತು ಕ್ರಾಂತಿ ಸಿನಿಮಾವಿದೆ.

Latest Videos

click me!