Birthday ಮಾಡಿದ್ರೆ ಈ ಥರ ಮಾಡ್ಬೇಕು; ಮಗಳು ನೇಸರಳ ಜೊತೆ ಅದಿತಿ ಪ್ರಭುದೇವ ಫೋಟೋಗಳು!

Published : Apr 05, 2025, 11:05 PM ISTUpdated : Apr 06, 2025, 08:51 AM IST

ನಟಿ ಅದಿತಿ ಪ್ರಭುದೇವ ಹಾಗೂ ಯಶಸ್‌ ಪಟ್ಲ ಅವರು ಮಗಳು ನೇಸರಳ ಜನ್ಮದಿನವನ್ನು ಬಹಳ ಅದ್ದೂರಿಯಾಗಿ ಆಚರಿಸಿದ್ದಾರೆ.   

PREV
19
Birthday ಮಾಡಿದ್ರೆ ಈ ಥರ ಮಾಡ್ಬೇಕು; ಮಗಳು ನೇಸರಳ ಜೊತೆ ಅದಿತಿ ಪ್ರಭುದೇವ ಫೋಟೋಗಳು!

'ನಾಗಕನ್ನಿಕೆ' ಧಾರಾವಾಹಿಯಿಂದ ಆರಂಭಿಸಿ, ಕನ್ನಡದ ಕೆಲ ಸಿನಿಮಾಗಳಲ್ಲಿ ನಟಿಸಿರುವ ನಟಿ ಅದಿತಿ ಪ್ರಭುದೇವ ಅವರು ಪತಿ ಯಶಸ್‌ ಪಟ್ಲ ಜೊತೆಗೆ ಮಗಳು ನೇಸರಳ ಜನ್ಮದಿನವನ್ನು ಬಹಳ ಅದ್ದೂರಿಯಾಗಿ ಆಚರಿಸಿದ್ದಾರೆ. 

 

29

ಮಗಳ ಮೊದಲ ವರ್ಷದ ಜನ್ಮದಿನದ ಪ್ರಯುಕ್ತ ಸೋಶಿಯಲ್‌ ಮೀಡಿಯಾದಲ್ಲಿ ಅದಿತಿ ಪ್ರಭುದೇವ ಅವರು ಬರ್ತ್‌ಡೇ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

39

ಇನ್ನು ವಿಶೇಷವಾಗಿ ಅವರು ಮಗಳ ಜನ್ಮದಿನದ ಫೋಟೋಗಳ ಜೊತೆಗೆ ವಿಶೇಷ ಬರಹವೊಂದನ್ನು ಬರೆದುಕೊಂಡಿದ್ದಾರೆ. "4.4.2024 to 4.4.2025 . ಮೊದಲ ಹುಟ್ಟು ಹಬ್ಬದ ಶುಭಾಶಯಗಳು ಮಗಳೇ "ನೇಸರ ". ನೀ ನಮ್ಮ ಬದುಕು, ನಮ್ಮ ಜೀವದ ಬೆಳಕು. ಪ್ರತಿ ಕ್ಷಣ, ಪ್ರತಿ ಮಾತು, ಪ್ರತಿ ನಿರ್ಧಾರದಲ್ಲೂ ನೀವೆ ಮಗಳೆ. ಆ ಶಿವನಾಣೆ ನಿನ್ನ ಬದುಕಿನ ಪ್ರತಿ ಹೆಜ್ಜೆಯಲ್ಲು ನಿನ್ನೊಂದಿಗಿರುತ್ತೇವೆ. I LOVE YOU" ಎಂದು ಅವರು ಬರೆದುಕೊಂಡಿದ್ದಾರೆ.

 

49

ಇನ್ನು ಮಗಳ ಜನ್ಮದಿನದ ಪ್ರಯುಕ್ತ ಅದಿತಿ ಪ್ರಭುದೇವ ಅವರು ಮಗಳಿಗೋಸ್ಕರ ವಿಶೇಷವಾಗಿ ಹಾಡು ಹಾಡಿದ್ದಾರೆ. ಇದು ಎಲ್ಲರ ಗಮನಸೆಳೆದಿದೆ. 

59

ಮಗಳು ನೇಸರ ಜೊತೆಯಲ್ಲಿ ಉದ್ಯಮಿ ಯಶಸ್‌ ಪಟ್ಲ ಅವರು ಕಾಣಿಸಿಕೊಂಡಿದ್ದು ಹೀಗೆ. ಬಿಳಿ ಡ್ರೆಸ್‌ನಲ್ಲಿ ಅಪ್ಪ-ಮಗಳು ಕಾಣಿಸಿಕೊಂಡಿದ್ದು ಹೀಗೆ. 

69

ಅದಿತಿ ಪ್ರಭುದೇವ ಅವರು ಬಿಳಿ ಥೀಮ್‌ನಲ್ಲಿ ಮಗಳ ಜನ್ಮದಿನ ಆಯೋಜಿಸಿದ್ದರು. ಅದಿತಿ ಮನೆಯವರು ಬಿಳಿ ಡ್ರೆಸ್‌ನಲ್ಲಿ ಮಿಂಚಿದ್ದರು. 

79

ಅದಿತಿ ಪ್ರಭುದೇವ ಅವರು ಪ್ರಕೃತಿ ಇಷ್ಟಪಡ್ತಾರೆ. ಹೀಗಾಗಿ ಮಗಳಿಗೆ ನೇಸರ ಎಂದು ಹೆಸರು ಇಟ್ಟಿದ್ದಾರೆ. ಮಗಳ ಜೊತೆಗಿನ ಸುಂದರ ಕ್ಷಣಗಳನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. 

89

ಕನ್ನಡ ನಟಿ ಅದಿತಿ ಪ್ರಭುದೇವ ಅವರು ನೇಸರಗೆ ಜನ್ಮ ಕೊಟ್ಟ ನಂತರ ಮಗಳ ಕಡೆಗೆ ಹೆಚ್ಚಿನ ಗಮನವನ್ನು ನೀಡುತ್ತಿದ್ದಾರೆ. ಜೊತೆಗೆ ರಿಯಾಲಿಟಿ ಶೋ, ಸಿನಿಮಾ ಬ್ಯಾಲೆನ್ಸ್‌ ಮಾಡುತ್ತಿದ್ದಾರೆ. 

99

ಅದಿತಿ ಪ್ರಭುದೇವ ಹಾಗೂ ಯಶಸ್‌ ಪಟ್ಲ ಅವರ ಮಗಳು ನೇಸರ ತನ್ನ ಜನ್ಮದಿನದಂದು ಕಾಣಿಸಿದ್ದು ಹೀಗೆ. ಈ ಗೊಂಬೆಗೆ ದೃಷ್ಟಿ ತಾಕದೆ ಇರಲಿ. 

Read more Photos on
click me!

Recommended Stories