ಕನ್ನಡದಲ್ಲಿ 'ಮಹಾನ್' ಆಗಲು ಹೊರಟ ಚಿನ್ನಾರಿಮುತ್ತನ ಬೆನ್ನು ತಟ್ಟಿದ ಶಿವಣ್ಣ!
ಪಿ.ಸಿ.ಶೇಖರ್ ನಿರ್ದೇಶನದ ಸಿನಿಮಾ. ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರಿಂದ ಶೀರ್ಷಿಕೆ ಅನಾವರಣ. ಚಿತ್ರದಲ್ಲಿ ಮನೋರಂಜನೆ ಜತೆಗೆ ಒಂದು ಸಂದೇಶವಿದೆ ಎನ್ನುತ್ತಾರೆ ವಿಜಯ್ ರಾಘವೇಂದ್ರ.
ಪಿ.ಸಿ.ಶೇಖರ್ ನಿರ್ದೇಶನದ ಸಿನಿಮಾ. ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರಿಂದ ಶೀರ್ಷಿಕೆ ಅನಾವರಣ. ಚಿತ್ರದಲ್ಲಿ ಮನೋರಂಜನೆ ಜತೆಗೆ ಒಂದು ಸಂದೇಶವಿದೆ ಎನ್ನುತ್ತಾರೆ ವಿಜಯ್ ರಾಘವೇಂದ್ರ.
‘ಮಹಾನ್’ ವಿಜಯ ರಾಘವೇಂದ್ರ ನಟನೆಯ ಹೊಸ ಸಿನಿಮಾ. ಪಿ.ಸಿ.ಶೇಖರ್ ನಿರ್ದೇಶನದ ಈ ಸಿನಿಮಾದ ಶೀರ್ಷಿಕೆಯನ್ನು ಶಿವರಾಜ್ ಕುಮಾರ್ ಅನಾವರಣ ಮಾಡಿದ್ದಾರೆ.
‘ಈ ಚಿತ್ರದಲ್ಲಿ ಮನೋರಂಜನೆ ಇದೆ. ಮನೋರಂಜನೆಯ ಹಿಂದೆ ಒಂದು ಸಂದೇಶವಿದೆ. ನಿಜಕ್ಕೂ ಆ ಸಂದೇಶ ಮಹಾನ್ ಸಂದೇಶವಾಗಿರಲಿದೆ’ ಎಂದು ವಿಜಯ ರಾಘವೇಂದ್ರ ಹೇಳಿದ್ದಾರೆ.
ನಿರ್ದೇಶಕ ಪಿ ಸಿ ಶೇಖರ್, ‘ಇದು ದೇಶಕ್ಕೆ ಅನ್ನ ನೀಡುವ ರೈತನ ಕುರಿತಾದ ಕಥೆ. ಆತ ಎಲ್ಲರಿಗಿಂತ ದೊಡ್ಡವನು ಎಂಬ ಹಿನ್ನೆಲೆಯಲ್ಲಿ ನಮ್ಮ ಚಿತ್ರಕ್ಕೆ ‘ಮಹಾನ್’ ಎಂದು ಹೆಸರಿಡಲಾಗಿದೆ’ ಎಂದಿದ್ದಾರೆ.
ನಿರ್ಮಾಪಕ ಪ್ರಕಾಶ್ ಮಾತನಾಡಿ, ‘ಮಹಾನ್’ ಸಿನಿಮಾ ನಮ್ಮ ಭೂಮಿಯ, ನಮ್ಮ ರೈತರ, ಅವರ ಹೋರಾಟದ ಕತೆಯನ್ನು ಪ್ರತಿಬಿಂಬಿಸುತ್ತದೆ. ‘ಮಹಾನ್’ ಕೇವಲ ಸಿನಿಮಾ ಮಾತ್ರವೇ ಅಲ್ಲ, ಇದು ನಾವು ನಮ್ಮ ರೈತರಿಗೆ ನೀಡುವ ಗೌರವ.
ನಮ್ಮ ನಿರ್ದೇಶಕ ಪಿಸಿ ಶೇಖರ್ ಅವರ ಕಲ್ಪನಾಶಕ್ತಿ ಹಾಗೂ ಕಥಾನಾಯಕತ್ವ ಈ ಚಿತ್ರದ ಶಕ್ತಿ ಮತ್ತು ನಮ್ಮ ಚಿತ್ರದ ನಾಯಕ ‘ಚಿನ್ನಾರಿ ಮುತ್ತ’ ವಿಜಯ್ ರಾಘವೇಂದ್ರ, ಈ ಪಾತ್ರಕ್ಕೆ ಇವರಿಗಿಂತ ಹೆಚ್ಚು ಸೂಕ್ತ ವ್ಯಕ್ತಿ ಯಾರೂ ಇರಲಾರರು. ಅವರ ಅಭಿನಯ, ಅವರ ಕನ್ನಡಿಗರ ಜೊತೆಗೆ ಇರುವ ಆತ್ಮೀಯತೆಯು ಈ ಪಾತ್ರಕ್ಕೆ ಜೀವ ತುಂಬಲಿದೆ ಎಂದು ನಿರ್ಮಾಪಕ ಪ್ರಕಾಶ್ ತಿಳಿಸಿದ್ದಾರೆ.
ವೀರಗಾಸೆ ಕುಣಿತ ಮಾಡಿದ ವಿಜಯ ರಾಘವೇಂದ್ರ: ವೀರಗಾಸೆ ಕಲೆ ಹಾಗೂ ಅದರ ಅಧಿದೇವರಾದ ವೀರಭದ್ರ ದೇವರ ಇತಿಹಾಸವನ್ನು ಹೇಳುವ ‘ರುದ್ರಾಭಿಷೇಕಂ’ ಸಿನಿಮಾದಲ್ಲಿ ವಿಜಯ ರಾಘವೇಂದ್ರ ವೀರಗಾಸೆ ಕಲಾವಿದನ ಪಾತ್ರದಲ್ಲಿ ನಟಿಸಿದ್ದಾರೆ.
ಈ ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣ ಇತ್ತೀಚೆಗೆ ಚಿಕ್ಕಬಳ್ಳಾಪುರದ ಶ್ರೀರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ನಡೆಯಿತು. ಈ ವೇಳೆ ನೂರಾರು ವೀರಗಾಸೆ ಕಲಾವಿದರ ಜೊತೆಗೆ ವಿಜಯ ರಾಘವೇಂದ್ರ ವೀರಗಾಸೆ ಕುಣಿತದಲ್ಲಿ ಭಾಗಿಯಾದರು. ಅವರು ಈ ಸಿನಿಮಾದಲ್ಲಿ ತಂದೆ, ಮಗನ ದ್ವಿಪಾತ್ರದಲ್ಲಿ ನಟಿಸಿದ್ದಾರೆ.