36 ವರ್ಷಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ಸಕ್ರಿಯರಾಗಿರುವ ನಟಿ ಮಾಲಾಶ್ರೀ ಮತ್ತು 'ಓಂ' ಖ್ಯಾತಿಯ ನಟಿ ಪ್ರೇಮಾ ಅವರ ವೃತ್ತಿಜೀವನದ ಬಗ್ಗೆ ಈ ಲೇಖನ ವಿವರಿಸುತ್ತದೆ. ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿಲ್ಲವಾದರೂ,'ಮಹಾನಟಿ' ರಿಯಾಲಿಟಿ ಶೋ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡು ಹೊಸ ದಾಖಲೆ ಸೃಷ್ಟಿಸಿದ್ದಾರೆ.
52 ವರ್ಷದ ಮಾಲಾಶ್ರೀ (Malashree Ramu) ಅವರು ಚಿತ್ರರಂಗಕ್ಕೆ ಬಂದು 36 ವರ್ಷಗಳೇ ಕಳೆದು ಹೋಗಿವೆ. 1989ರಲ್ಲಿ ಬಿಡುಗಡೆಯಾದ ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟಿ ಮೊದಲ ಸಿನಿಮಾದಲ್ಲಿಯೇ ಭರ್ಜರಿ ಯಶಸ್ಸು ಕಂಡವರು. ಒಬ್ಬ ಅಹಂಕಾರದ, ಗಂಡುಬೀರಿ ಮಹಿಳೆಯಾಗಿ ಅವರ ಅಭಿನಯ ಅವರಿಗೆ ಅಪಾರ ಮನ್ನಣೆ ತಂದಿತು ಮತ್ತು ಕನ್ನಡ ಚಿತ್ರರಂಗದ ಪ್ರಮುಖ ನಟಿಯಾಗಿ ಅವರ ಆಗಮನವನ್ನು ಸೂಚಿಸಿತು. ಅವರ ಮುಂದಿನ ಕೆಲವು ಚಿತ್ರಗಳು ಅವರಿಗಾಗಿಯೇ ಬರೆದಂಥವಾಗಿದ್ದವು ಮತ್ತು ಇವಲ್ಲವುಗಳಲ್ಲಿ ಅವರು ಮುಖ್ಯ ಪಾತ್ರದಲ್ಲಿದ್ದರು.
27
ಎಲ್ಲಾ ಚಿತ್ರಗಳೂ ಯಶಸ್ವಿ
ಈ ಎಲ್ಲ ಚಿತ್ರಗಳು ಭಾರಿ ಯಶಸ್ಸು ಕಂಡವು. ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟವು ಮತ್ತು ಅವರು ಮುಂದೆ ಕನ್ನಡ ಚಿತ್ರರಂಗದ ಅತ್ಯಧಿಕ ಸಂಭಾವನೆ ಪಡೆದ ನಟಿಯೆನಿಸಿದರು. ರಾಘವೇಂದ್ರ ರಾಜ್‌ಕುಮಾರ್ ಅವರೊಂದಿಗಿನ ಅವರ ಚೊಚ್ಚಲ ಚಿತ್ರ ನಂಜುಂಡಿ ಕಲ್ಯಾಣವು ಪ್ರಮುಖ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಕಂಡಿತು, ಇದು ಅವರ ಪ್ರಗತಿಯಾಗಿದೆ.
90 ರ ದಶಕದುದ್ದಕ್ಕೂ, ಅವರು ಹಲವಾರು ಯಶಸ್ವಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಗಜಪತಿ ಗರ್ವಭಂಗ (1989), ಪೋಲೀಸನ ಹೆಂಡ್ತಿ (1990), ಕಿತ್ತೂರಿನ ಹುಲಿ (1990), ರಾಣಿ ಮಹಾರಾಣಿ (1990), ಮೃತ್ಯುಂಜಯ (1990), ಹೃದಯ ಹಾಡಿತು (1991), ರಾಮಾಚಾರಿ ( 1991), ಬೆಳ್ಳಿ ಕಾಲುಂಗುರ (1992), ಸೊಲಿಲ್ಲದ ಸರದಾರ (1993) ಮತ್ತು ಗಡಿಬಿಡಿ ಅಳಿಯ (1995) ಹೀಗೆ ಹಲವು ಸಿನಿಮಾಗಳಲ್ಲಿ ಯಶಸ್ವಿಯಾಗಿದ್ದಾರೆ.
ಇದೀಗ ಅವರ ಪುತ್ರಿ ಆರಾಧಾನಾ ರಾಮ್ (Aradhana Ram) ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಕಿರಣ್ ಚಂದ್ರ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ನೆಕ್ಸ್ಟ್ ಲೆವೆಲ್' ಸಿನಿಮಾ ನಾಯಕಿಯಾಗಿ ನಟಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ನಟಿಸುತ್ತಿದ್ದಾರೆ. . 'ಕಾಟೇರ' ಬಳಿಕ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಳ್ಳದ ಆರಾಧನಾ ಅವರೀಗ ಉಪೇಂದ್ರ ಜತೆಗೆ ನಟಿಸುತ್ತಿದ್ದಾರೆ. ಮಾಲಾಶ್ರೀ ಕೂಡ ಸಿನಿಮಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. 2021ರಲ್ಲಿ ಕೋವಿಡ್ನಲ್ಲಿ ಪತಿ ರಾಮು ಅವರನ್ನು ಮಾಲಾಶ್ರೀ ಕಳೆದುಕೊಂಡರು.
57
ನಟಿ ಪ್ರೇಮಾ ಕುರಿತು...
ಇನ್ನು ನಟಿ ಪ್ರೇಮಾ (Actress Prema) ಅವರ ಕುರಿತು ಹೇಳುವುದಾದರೆ, ಇವರಿಗೆ 48 ವರ್ಷ ವಯಸ್ಸು. ಕನ್ನಡ ಸೇರಿದಂತೆ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ನಟಿಸಿದ್ದಾರೆ. ಅವರು 1995ರಲ್ಲಿ ಶಿವರಾಜ್ ಕುಮಾರ್ (Shivraj Kumar) ಜೊತೆ ಸವ್ಯಸಾಚಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿ, ಓಂ ಚಿತ್ರದ ನಟನೆಗೆ ರಾಜ್ಯ ಪ್ರಶಸ್ತಿ ಪಡೆದರು. ಪ್ರಸ್ತುತ ಅವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನಟಿ ಸೀಸನ್ 2 ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
67
ಪತಿಯಿಂದ ವಿಚ್ಛೇದನ
2006ರಲ್ಲಿ ಜೀವನ್ ಅಪ್ಪಚ್ಚು ಅವರನ್ನು ವಿವಾಹವಾದರು ಮತ್ತು 2016ರಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದರು. ತಮ್ಮ ಮದುವೆಯ ನಂತರ ಸ್ವಾತಂತ್ರ್ಯದ ಕೊರತೆಯ ಅನುಭವವಾಯಿತೆಂದು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇವರ ಎರಡನೆಯ ಮದುವೆಯ ಬಗ್ಗೆಯೂ ಭಾರಿ ಸದ್ದು ಮಾಡಿತ್ತು.
77
ಪ್ರೇಮಾ-ಮಾಲಾಶ್ರೀ ಇತಿಹಾಸ ಸೃಷ್ಟಿ
ನಟಿ ಮಾಲಾಶ್ರೀ ಮತ್ತು ನಟಿ ಪ್ರೇಮಾ ಅವರು ಇದುವರೆಗೆ ಯಾವುದೇ ಸಿನಿಮಾದಲ್ಲಿ ಒಟ್ಟಿಗೆಯಾಗಿ ಕಾಣಿಸಿಕೊಂಡಿಲ್ಲ. ಆದರೆ ಇದೀಗ ಮಹಾನಟಿ ರಿಯಾಲಿಟಿ ಷೋ (Mahanati Reality Show)ನಲ್ಲಿ ದಾಖಲೆ ಸೃಷ್ಟಿ ಮಾಡಿದ್ದಾರೆ. ಇವರಿಬ್ಬರೂ ಚಿತ್ರದ ಡೈಲಾಗ್ ಒಂದನ್ನು ಹೇಳುವ ಮೂಲಕ ಭೇಷ್ ಎನ್ನಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ನಟಿಸುವಂತೆ ಅದೇ ಅದ್ಭುತ ಅಭಿನಯದಲ್ಲಿ ಇವರು ಇಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಅಭಿನಯಕ್ಕೆ ಎಲ್ಲರೂ ತಲೆದೂಗಿದ್ದಾರೆ.