ಪುಷ್ಪಾ ಅರುಣ್ ಕುಮಾರ್ ನಿರ್ಮಾಣದ 'ಕೊತ್ತಲವಾಡಿ' ಚಿತ್ರದ ಸಂಭಾವನೆ ವಿವಾದ ತಾರಕಕ್ಕೇರಿದೆ. ನಟ ಮಹೇಶ್ ಗುರು ಬಳಿಕ, ಇದೀಗ ನಟಿ ಸ್ವರ್ಣ ತಮಗೆ ಪೇಮೆಂಟ್ ನೀಡಿಲ್ಲ ಮತ್ತು ತಮ್ಮ ಭವಿಷ್ಯವನ್ನೇ ಹಾಳುಮಾಡಿದ್ದಾರೆ ಎಂದು ವಿಡಿಯೋ ಮಾಡಿ ಕಣ್ಣೀರಿಟ್ಟಿದ್ದಾರೆ. ವಿಡಿಯೋ ವೈರಲ್ ಆಗಿದೆ.
ಪುಷ್ಪ ಅರುಣ್ ಕುಮಾರ್ ನಿರ್ಮಾಣದ ಕೊತ್ತಲವಾಡಿ (Kothalavadi) ಯಾಕೋ ಬರೀ ವಿವಾದದಲ್ಲಿಯೇ ಮುಳುಗಿ ಬಿಟ್ಟಿದೆ. ಈ ಚಿತ್ರದ ನಟ-ನಟಿಯರಿಗೆ ಪೇಮೆಂಟ್ ಆಗಿಲ್ಲ ಎಂದು ಭಾರಿ ಗಲಾಟೆ ನಡೆಯುತ್ತಿರುವ ನಡುವೆಯೇ ಇದೀಗ ನಟಿ ಸ್ವರ್ಣ ಮತ್ತೊಂದು ವಿಡಿಯೋ ಮಾಡಿ ಕಣ್ಣೀರಿಟ್ಟಿದ್ದಾರೆ. ಬಡವರು ಇಂಡಸ್ಟ್ರಿಗೆ ಬರೋದು ತಪ್ಪಾ? ಲೈಫೇ ಹಾಳು ಮಾಡ್ಬಿಟ್ರು ಎಂದು ನಟಿ ಗಳಗಳನೆ ಅತ್ತಿದ್ದಾರೆ.
27
ಸಂಭಾವನೆ ವಿಷ್ಯದಲ್ಲಿ ಗಲಾಟೆ
ನಟ ಮಹೇಶ್ ಗುರು ಅವರು ‘ಕೊತ್ತಲವಾಡಿ’ ಸಿನಿಮಾದಲ್ಲಿ ನಟಿಸಿದ್ದರು. ‘ಕೊತ್ತಲವಾಡಿ’ ಸಿನಿಮಾದಲ್ಲಿ ಸಂಭಾವನೆ ಕೊಟ್ಟಿಲ್ಲ ಎಂದು ನಟ ಮಹೇಶ್ ಗುರು ಅವರು ವಿಡಿಯೋ ಮಾಡಿ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಇದಾದ ಬೆನ್ನಲ್ಲೇ ನಿರ್ದೇಶಕನ ಬಳಿ ಸಹ ನಟಿ ಸ್ವರ್ಣ ತಾಯಿ ಗೋಳಾಡಿರುವ ಆಡಿಯೋ ಕೂಡ ವೈರಲ್ ಆಗಿತ್ತು. ಮಗಳ ಸಂಭಾವನೆ ಕೊಡಿ ಎಂದು ನಿರ್ದೇಶಕನ ಬಳಿ ನಟಿ ಸ್ವರ್ಣ ಅಮ್ಮ ಗೋಗರೆದಿರುವ ಆಡಿಯೋಗ ವೈರಲ್ ಆಗಿತ್ತು.
37
ನಟಿ ಸ್ವರ್ಣ ವಿಡಿಯೋ
ಆದರೆ ಇದೀಗ ಖುದ್ದು ನಟಿ ಸ್ವರ್ಣ ವಿಡಿಯೋ ಮಾಡಿ ಅತ್ತಿದ್ದಾರೆ. ಶ್ರೀರಾಜ್ ಅವರು ಮಾತನಾಡುವಾಗ ಇವರಿಗೆಲ್ಲ ಪಬ್ಲಿಸಿಟಿ ಬೇಕು, ಅದಕ್ಕೆ ಹೀಗೆ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದರು. ನಾನು ಹಣ ಕೊಟ್ಟಿದ್ದಕ್ಕೆ ಪುಷ್ಪ ಅವರಿಗೂ ಮಾಹಿತಿ ಕೊಟ್ಟಿದ್ದೇವೆ. ನಾವು ಇದರ ವಿರುದ್ದ ಪೊಲೀಸ್ ಕಂಪ್ಲೇಂಟ್ ಕೊಡುತ್ತೇವೆ ಎಂದು ಕೂಡ ಹೇಳಿದ್ದರು.
ಅದೆಲ್ಲಾ ಸುಳ್ಳು, ನನ್ನ ಲೈಫೇ ಹಾಳು ಮಾಡಿದ್ರು ಎಂದಿದ್ದಾರೆ ಸ್ವರ್ಣಾ. ಕೊತ್ತಲವಾಡಿ ಚಿತ್ರಕ್ಕೆ ಪೇಮೆಂಟ್ ಸಮಸ್ಯೆ ಇರೋ ಬಗ್ಗೆ ನಾನು ಹೋಗಿ ಕಂಪ್ಲೇಂಟ್ ಕೊಟ್ಟಿದ್ದಲ್ಲ. ಉಳಿದಿದ್ದ ಪೇಮೆಂಟ್ ಕೊಡುವುದಿಲ್ಲ ಅಂತ ಹೇಳಿ ಯಾವಾಗ ಅವರು ಗಲಾಟೆ ಮಾಡಿದ್ದರೋ, ಸಹವಾಸ ಬೇಡ ಎಂದು ಸುಮ್ಮನಾಗಿದ್ದೆ. ನನ್ನ ಲೈಫೇ ಹಾಳುಮಾಡಿಬಿಟ್ಟರು ಇವರು. ನನಗೂ ಫ್ಯೂಚರ್ ಇದೆ, ಮುಂದಿನ ಪ್ರಾಜೆಕ್ಟ್‌ಗಳಿಗೆ ಪ್ರಾಬ್ಲಂ ಆಗಬಹುದು ಅಂತ ನಾನು ಸುಮ್ಮನಾಗಿದ್ದೆ. ಆದರೆ ಈಗ ಅವರು ಪ್ರಚಾರಗೋಸ್ಕರ ಹೀಗೆ ಮಾಡ್ತಿದ್ದಾರೆ ಎಂದು ಹೇಳಿರೋದು ನೋಡಿದ್ರೆ ತುಂಬಾ ನೋವಾಗತ್ತೆ ಎಂದಿದ್ದಾರೆ.
57
ನಿಯತ್ತಾಗಿ ದುಡಿದ್ದಕ್ಕೆ ಈ ಫಲ
ನಾವು ಅಷ್ಟು ನಿಯತ್ತಾಗಿ ದುಡಿದು, ಮೋಸ ಹೋಗಿ, ಮನೆಯಲ್ಲಿ ಸುಮ್ಮನೆ ಕುಳಿತುಕೊಂಡಿದ್ದರು ಕೂಡ ನೀವು ಈ ತರಹ ಎಲ್ಲಾ ಮಾಡೋದು ಸರಿ ನಾ? ನೀವು ಮಾಡುವ ಒಂದು ಕೆಲಸದಿಂದ ನನ್ನ ಫ್ಯೂಚರ್‌ಗೆ ತುಂಬಾ ಹೊಡೆತ ಬೀಳುತ್ತೆ ಸರ್. ಇದನ್ನು ಪ್ಲೀಸ್ ಅರ್ಥ ಮಾಡ್ಕೊಳ್ಳಿ ಎಂದಿದ್ದಾರೆ ನಟಿ. ಇದನ್ನೇ ನಂಬಿಕೊಂಡು ಇರುವವಳು ನಾನು, ಆದರೆ ನೀವು ಈ ರೀತಿಯಾಗಿ ಹೇಳಿಕೆಗಳನ್ನ ಕೊಡುತ್ತಿರುವುದರಿಂದ ನಮಗೆ ಕೆಟ್ಟ ಹೆಸರು ಬರುತ್ತಿದೆ. ವಿಡಿಯೋ ಮಾಡಿದಾಗ ನನಗೆ ನ್ಯಾಯ ಸಿಗಬಹುದು ಎನ್ನುವ ನಂಬಿಕೆ ಇತ್ತು. ಆದರೆ ಈಗ ನನ್ನ ವಿರುದ್ಧವೇ ಮಾತನಾಡುತ್ತಿರುವುದು ನೋವಾಗ್ತಿದೆ ಎಂದಿದ್ದಾರೆ.
67
ನ್ಯಾಯ ಕೊಡಿಸುವವರು ಯಾರೂ ಇಲ್ವಾ?
ನಮಗೆ ನ್ಯಾಯ ಕೊಡಿಸುವವರು ಯಾರೂ ಇಲ್ವಾ? ಸುಳ್ಳು ಹೇಳಿ ನಮಗೆ ಏನಾಗಬೇಕಿದೆ? ಅಥವಾ ಅವರು ಕೊಡುವ ದುಡ್ಡಿನಿಂದ ನಾನು ಜೀವನಪರ್ಯಂತ ಚೆನ್ನಾಗಿ ಜೀವನ ಮಾಡೋಕಾಗುತ್ತಾ? ಹೀಗೆ ಮಾಡಿದ್ರೆ ನನಗೆ ಮುಂದಿನ ಪ್ರಾಜೆಕ್ಟ್‌ಗಳಿಗೆ ತುಂಬಾ ಹೊಡೆತ ಬೀಳುತ್ತೆ. ಸ್ಪಷ್ಟೀಕರಣ ಕೊಡಬೇಕಿತ್ತು. ಅದಕ್ಕಾಗಿ ವಿಡಿಯೊ ಮಾಡಿದ್ದೇನೆ ಅಷ್ಟೇ. ಇಷ್ಟಾದರೂ ಅವರು ಏನನ್ನೂ ಕೇಳಿಲ್ಲ. ಅವರ ಉದ್ದೇಶವೇನು? ನಮ್ಮ ಹೆಸರು ಹಾಳು ಮಾಡುವುದಾ? ಬಡವರು ಇಂಡಸ್ಟ್ರೀಗೆ ಬರೋದು ತಪ್ಪಾ? ಎಂದು ಕಣ್ಣೀರು ಹಾಕಿದ್ದಾರೆ ನಟಿ. ಅವರು ಮಾಡಿರುವ ಮೋಸದಿಂದ ನನ್ನ ಜೀವನ ಹಾಳಾಯ್ತು ಎಂದು ಕೂಡ ಹೇಳಿದ್ದಾರೆ.
77
ಹಿಂದೆ ಸ್ವರ್ಣ ಅಮ್ಮನ ಆಡಿಯೋ
ಈ ಹಿಂದೆ ಸ್ವರ್ಣ ಅಮ್ಮನ ಆಡಿಯೋ ವೈರಲ್ ಆಗಿತ್ತು. ಅದರಲ್ಲಿ ಅವರು, “ನಿಮಗೆ ಕೆಲಸ ಮಾಡಿದಕ್ಕೆ ಪೇಮೆಂಟ್ ಕೋಡೊದಕ್ಕೆ ಆಗಲ್ವಾ? ನನ್ನ ಮಗಳು ನಿಮ್ಮನ್ನು ನಂಬಿಕೊಂಡು ಮೂರು ತಿಂಗಳು ಕೆಲಸ ಮಾಡಿದ್ದಾಳೆ. ನನ್ನ ಮಗಳಿಗೆ ಅಪ್ಪ ಇಲ್ಲ, ನಾನೇ ಅವಳನ್ನು ನೋಡಿಕೊಳ್ಳಬೇಕು. ನನಗೆ ಗಂಡ ಇಲ್ಲ, ನಾನು ಅವಳನ್ನು ನಂಬಿ ಕೊಂಡಿದ್ದೀನಿ. ಬಡವರ ಮಕ್ಕಳ ಹಣ ಕೊಡದೆ ಉದ್ಧಾರ ಆಗ್ತೀರಾ? ನನ್ನ ಮಗಳು ಬೆಳಗ್ಗೆಯಿಂದ ಸ್ನಾನ ಮಾಡಿ ಏನು ತಿನ್ನದೆ ಮಲಗಿದ್ದಾಳೆ. ನಾನು ಸಂಘಗಳಿಗೆ ಹಣ ಕಟ್ಟಬೇಕು, ಮಗಳು ಬೆಂಗಳೂರಿನಿಂದ ಬರುತ್ತಾಳೆ ಅಂತ ಹೇಳಿಕೊಂಡು ಇದ್ದೆ. ಈಗ ನನ್ನ ಮಗಳು ಹಣ ಕೊಟ್ಟಿಲ್ಲ ಅಂದರೆ ನಾನು ಭಿಕ್ಷೆ ಬೇಡಬೇಕಾ?” ಎಂದು ನಟಿ ಸ್ವರ್ಣ ತಾಯಿ ಗೋಗರೆದಿದ್ದರು.